ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ವರ್ಷ ಪಿಂಚಣಿ ಪರಿಷ್ಕರಣೆ ಅಸಾಧ್ಯ: ಅರುಣ್ ಜೇಟ್ಲಿ

|
Google Oneindia Kannada News

ನವದೆಹಲಿ, ಆಗಸ್ಟ್. 31: ಏಕ ಶ್ರೇಣಿ, ಏಕ ಪಿಂಚಣಿ (ಒಆರ್​ಒಪಿ) ವ್ಯವಸ್ಥೆಯಡಿ ಪ್ರತಿ ವರ್ಷವೂ ಪಿಂಚಣಿ ಪರಿಷ್ಕರಿಸುವುದು ಅಸಾಧ್ಯ. ಇದನ್ನು ಮಾಡಲು ಹೋದರೆ ಅನೇಕ ತೊಡಕುಗಳು ಎದುರಾಗುತ್ತವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನಿವೃತ್ತಿ ವಯಸ್ಸಿಗೂ ಮುನ್ನವೇ ನಿವೃತ್ತರಾಗುವ ಯೋಧರಿಗೆ ಹೆಚ್ಚಿನ ಮೊತ್ತದ ಪಿಂಚಣಿ ನೀಡಲು ಸರ್ಕಾರ ಬದ್ಧವಾಗಿದೆ. ಒಆರ್​ಒಪಿ ಜಾರಿಗೂ ಸಿದ್ಧವವಿದೆ. ಆದರೆ ಕೆಲ ನಿಬಂಧನೆಗಳನ್ನು ಮಾಜಿ ಸೈನಿಕರು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.[ಮಾಜಿ ಯೋಧರ ಬೇಡಿಕೆಗೆ ಸರ್ಕಾರ ಯಾಕೆ ಒಪ್ಪುತ್ತಿಲ್ಲ?]

arun

7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲಾಗುವುದು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭದ್ರತೆ ಸಕಾಯ್ದುಕೊಳ್ಳಲು, ರುಪಾಯಿ ಸ್ಥಿರತೆ ಸಾಧಿಸಲು ಕಟ್ಟುನಿಟ್ಟಿನ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಕೇಂದ್ರ ಸರ್ಕಾರ ಅನುಷ್ಠಾನ ಮಾಡುತ್ತಿದೆ ಎಂದು ಹೇಳಿದರು.['ಗೋ ಬ್ಯಾಕ್ ' ರಾಹುಲ್ ಎಂದ ಮಾಜಿ ಸೈನಿಕರು]

ಒಆರ್​ಒಪಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸೈನಿಕರು ಎರಡೂವರೆ ತಿಂಗಳಿನಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲ ಸೈನಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಉಪವಾಸವನ್ನು ಕೈಗೊಂಡಿದ್ದರು. ಭಾರತ-ಪಾಕ್ ಯುದ್ಧದ 50ನೇ ವರ್ಷಾಚರಣೆ(ಆಗಸ್ಟ್ 28) ರಂದು ಯೋಜನೆಯನ್ನು ಸರ್ಕಾರ ಘೋಷಿಸುತ್ತದೆ ಎಂದು ಸೈನಿಕರು ಭಾವಿಸಿದ್ದರು.

English summary
Finance Minister Arun Jaitley today virtually ruled out annual revision of pension as demanded by agitating ex-servicemen under 'One rank, One pension' but said government will safeguard interests of soldiers retiring at an early age through higher pensions. Annul revision in pensions do not happen anywhere in the world, he said. Jaitley said the government was committed to OROP but the "only difficulty" is the "arithmetical translation".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X