ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಯೇ ಪಾಕಿಸ್ತಾನದ ಟಾರ್ಗೆಟ್ ಯಾಕೆ?

|
Google Oneindia Kannada News

ಕಾಶ್ಮೀರದ ಅಮಾಯಕರ ಮೇಲೆ ಪ್ರತಿದಿನ ದೌರ್ಜನ್ಯ, ನಮ್ಮ ಸೈನಿಕರ ಮತ್ತು ದೇಶದ ಮೇಲೆ ಕಾರಣವಿಲ್ಲದೇ ದಾಳಿ ಮಾಡುತ್ತ ಕುಳಿತಿದ್ದ ಪಾಕಿಸ್ತಾನ ಅದರಿಂದ ಏನೂ ಸಿಗಲ್ಲ ಎಂಬುದನ್ನು ಅರಿತಂತೆ ಕಾಣುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಲು ಬೇರೆಯದೇ ಕುತಂತ್ರ ಹಣೆಯುತ್ತಿದೆ. ಇದಕ್ಕೆ ಭಾರತದರನ್ನೂ ಬಳಸಿಕೊಳ್ಳುತ್ತಿದೆ ಎಂಬುದು ಆತಂಕಾರಿಯಾಗಿದೆ.

ಹೌದು... ಭಯೋತ್ಪಾದನೆ, ಉಗ್ರದಾಳಿ ಮಾಡುತ್ತ ಅಮಾಯಕರ ಬಲಿ ನೀಡುತ್ತಿದ್ದ ಪಾಕಿಸ್ತಾನ ಇದೀಗ ಭಾರತದಲ್ಲಿ ಅರಾಜಕತೆ ಉಂಟುಮಾಡಲು ಹೊಸದೊಂದು ತಂತ್ರ ಹಣೆದಿದೆ.[ಪೊಲೀಸರಿಗೂ ಬಂತು ನೀತಿಸಂಹಿತೆ]

modi

ಭಾರತದ ಗುಪ್ತಚರ ಇಲಾಖೆ ಇಂಥ ಆತಂಕಕಾರಿ ವರದಿ ನೀಡಿದೆ. 'ಆಪರೇಷನ್ ಬ್ಲ್ಯಾಕ್' ಎಂದು ಕರೆಯಲಾಗುವ ಕುತಂತ್ರದ ಮುಖ್ಯ ಟಾರ್ಗೆಟ್ ನರೇಂದ್ರ ಮೋದಿ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಅಮೆರಿಕ ಮೋದಿಗೆ ಸಮನ್ಸ್ ನೀಡಿದಾಗಲೇ ಪಾಕಿಸ್ತಾನ ಇಂಥ ಕುತಂತ್ರಕ್ಕೆ ಮುನ್ನುಡಿ ರೆಡಿ ಮಾಡಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಮೋದಿ ಇಂಥ ಇನ್ನು ಅನೇಕ ಪ್ರಕರಣಗಳನ್ನು ಎದುರಿಸಬೇಕಾಗಿ ಬಂದರೂ ಆಶ್ಚರ್ಯವಿಲ್ಲ.

ಮೋದಿ ಸರ್ಕಾರ ಅಸ್ಥಿರಗೊಳಿಸಲು 'ಆಪರೇಷನ್ ಬ್ಲ್ಯಾಕ್'
ನರಮೇಧ ತಡೆ ಸಂಸ್ಥೆ(ಸಿಎಜಿ) ನರೇಂದ್ರ ಮೋದಿ ವಿರುದ್ಧ ಹತ್ಯಾಕಾಂಡಕ್ಕೆ ಸಂಬಂಧಿಸಿ ದೋಷಾರೋಪಣೆ ಮಾಡಲು ತೊಡಗಿತ್ತು. ಇದು ಭಾರತದ ಸರ್ಕಾರಕ್ಕೆ ಮುಜುಗರದ ಸಂಗತಿಯಾಗಿ ಪರಿಣಮಿಸಿತ್ತು. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಸಿಎಜಿಯ ಭಾಗವಾಗಿರುವ 46 ಎನ್ ಜಿಒ ಗಳಲ್ಲಿ 16 ಎನ್ ಜಿ ಒಗಳು ಪಾಕಿಸ್ತಾನದ ಮೂಲದವರದ್ದು ಎಂಬುದು! ಹೌದು ಇವರೇ ಮೋದಿ ಪ್ರಕರಣವನ್ನು ಮತ್ತೆ ಮತ್ತೆ ಚರ್ಚೆಗೆ ತರುತ್ತಿದ್ದರು.[ವಿಶ್ವಸಂಸ್ಥೆ ಕಸದ ಬುಟ್ಟಿ ಸೇರಿದ ಪಾಕಿಸ್ತಾನದ ಮನವಿ]

ಆದರೆ ಇನ್ನೊಂದು ವಿಚಾರ ದಂಗುಬಡಿಸುವಂತಿದೆ. ಈ 6 ಎನ್ ಜಿ ಒಗಳಿಗೆ ಹಣ ಬರುತ್ತಿರುವುದು ಪಾಕಿಸ್ತಾನದ ಐಎಸ್ಐನಿಂದ. ಭಾರತ ಮತ್ತು ನರೇಂದ್ರ ಮೋದಿ ಕುರಿತಾದ ವಿಷಯಗಳನ್ನು ಮತ್ತೆ ಮತ್ತೆ ಎತ್ತಿ ಹೇಳಿವಂತೆ ಐಎಸ್ಐ ಹಿಂದಿನಿಂದ ಒತ್ತಡ ಹಾಕುತ್ತಿತ್ತು. ಒಟ್ಟಿನಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟುಮಾಡುವುದೇ ಇವರ ಉದ್ದೇಶ.

ಭಾರತೀಯ ಏಜೆನ್ಸಿಗಳು ಏನೆನ್ನುತ್ತವೆ?
ಭಾರತದಲ್ಲಿ ನಡೆಯುತ್ತಿರುವ ಪ್ರತಿದಿನದ ಬದಲಾವಣೆಗಳನ್ನು ಇಂಥ ಸಂಘಟನೆಗಳು ಗಮನಿಸುತ್ತಿರುತ್ತವೆ. ಧರ್ಮ ಮತ್ತು ಮಾನವ ಹಕ್ಕು ಉಲ್ಲಂಘನೆಯಂಥ ವಿಚಾರಗಳಿಗೆ ವಿಶೇಷ ಮಹತ್ವ ನೀಡುತ್ತವೆ. ಗುಜರಾತ್ ಹತ್ಯಾಕಂಡದಂಥ ವಿಚಾರಗಳನ್ನು ಅವರಿಗೆ ಬೇಕಾದಂತೆ ಬಿಂಬಿಸುತ್ತವೆ. ಈ ಬಗ್ಗೆ ಸದಾ ಸಾಕ್ಷಿ ಆಧಾರ ಹುಡುಕಲು ಪ್ರಯತ್ನಿಸಿ ಭಾರತದ ಮಾನ ಹರಾಜು ಮಾಡಲು ಮುಂದಾಗುತ್ತವೆ ಎಂದು ದೇಶದ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಭಾರತದ ಇಂಟಲಿಜೆನ್ಸ್‌ ವರದಿಗಳು ಹೇಳುತ್ತವೆ.

ಭಾರತದ ಮೇಲೆ 'ಸೈಕಾಲಾಜಿಕಲ್ ವಾರ್'
ಪಾಕಿಸ್ತಾನದ ಐಎಸ್ ಐ ಭಾರತದ ಮಾನಸಿಕ ಸ್ಥಿತಿಯನ್ನು ಹದಗೆಡುವ ಪ್ರಯತ್ನ ಮಾಡತೊಡಗಿದೆ. ಭಾರತದ ಒಳಗಿನ ವಾತಾವರಣ ಕದಡುವುದೇ ಅವರ ಮುಖ್ಯ ಉದ್ದೇಶ. ಹೊಸ ಸರ್ಕಾರ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧ್ಯವ್ಯ ಬೆಸೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಭಾರತದ ಜತೆ ಚಿಕ್ಕ ಪುಟ್ಟ ಮನಸ್ತಾಪ ಹೊಂದಿರುವ ದೇಶಗಳನ್ನು ಸೇರಿಸಿ 'ಆಂತರಿಕ ಭಯೋತ್ಪಾದನೆ' ಹರಡುವ ಕುತಂತ್ರವೂ ನಡೆದಿದೆ. ಭಾರತ ಎಲ್ಲಿಯಾದರೂ ತನ್ನ ಮೇಲೆ ವಿಶ್ವ ಮಾನವ ಹಕ್ಕು ಆಯೋಗಕ್ಕೆ ಭಾರತ ದೂರು ನೀಡಲಿ ಎಂಬುದೇ ಈ ಎಲ್ಲ ಕುತಂತ್ರಗಳ ಹಿಂದಿನ ಉದ್ದೇಶ. ಒಂದು ವೇಳೆ ದೂರು ನೀಡಿದರೆ ಅದು ಅಂತಾರಾಷ್ಟ್ಟೀಯ ಮಟ್ಟದ ಸುದ್ದಿಯಾಗಿ ಭಾರತಕ್ಕೆ ಮುಜುಗರ ಉಂಟಾಗಬೇಕು ಎಂಬುದು ಐಎಸ್ ಐ ಲೆಕ್ಕಾಚಾರ.

ಭಾರತೀಯರನ್ನೇ ದೇಶದ ಮೇಲೆ ಎತ್ತಿ ಕಟ್ಟುವ ಹುನ್ನಾರ
ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿರುವವರು ಯಾರಿದ್ದಾರೆ? ಎಂಬುದನ್ನು ಐಎಸ್ ಐ ಗುರುತು ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಕಳೆದ ಎರಡು ತಿಂಗಳಿಂದ ನಿರಂತರ ಕಾರ್ಯಚಟುವಟಿಕೆ ನಡೆಸುತ್ತಲೂ ಇದೆ. ಭಾರತ ಮೂಲದ 300 ಜನರಿಂದ ದೇಣಿಗೆಯನ್ನೂ ಸಂಗ್ರಹಿಸಿದೆ ಎಂದು ಗುಪ್ತಚರ ಇಲಾಖೆ ವರದಿ ಹೇಳಿದೆ.[ಗಡಿಯಲ್ಲಿ ಪಾಕ್ ತಂಟೆ, ಪ್ರಧಾನಿ ಮೋದಿ ಹೇಳಿದ್ದೇನು?]

ಒಳ್ಳೆ ಭಾವನೆ ಹಾಳುಮಾಡುವುದೇ ಉದ್ದೇಶ
ಭಾರತ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಕಾಪಾಡಿಕೊಂಡು ಬಂದಿರುವ ಉತ್ತಮ ಬಾಂಧವ್ಯ ಹಾಳು ಮಾಡುವುದೇ ಆಪರೇಷನ್ ಬ್ಲ್ಯಾಕ್'ನ ಮೂಲ ಉದ್ದೇಶ. ಕಳೆದ ವಾರ ಕರಾಚಿಯಲ್ಲಿ ನಡೆದ ಐಎಸ್‌ ಐ ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಯಾವುದಾದರೂ ಒಂದು ಕೊಂಕು ತೆಗೆದು ಭಾರತವನ್ನು ಅಥವಾ ನರೇಂದ್ರ ಮೋದಿಯನ್ನು ಮಾನವ ಹಕ್ಕುಗಳ ಆಯೋಗದ ಅಡಿ ನಿಲ್ಲಿಸುವುದೇ ಕುತಂತ್ರದ ಮೊದಲ ಗುರಿ ಎಂದು ಹೇಳಲಾಗಿದೆ.

ಭಾರತದ ಕೆಲ ಸಿಖ್ ಮುಖಂಡರನ್ನು ಈ ಕುತಂತ್ರದಲ್ಲಿ ಭಾಗಿಯಾಗುವಂತೆ ಐಎಸ್ ಐ ಒತ್ತಾಯಿಸಿದೆ ಎನ್ನಲಾಗಿದೆ. ಅಲ್ಲದೇ ಕಪ್ಪುಹಣ ಹೊಂದಿರುವವರಿಂದ, ಭೂಗತ ಜಗತ್ತನ್ನಾಳುತ್ತಿರುವವರಿಂದ ಮೋದಿ ವಿರುದ್ಧದ ಕಾರ್ಯಾಚರಣೆಗೋಸ್ಕರ ಹಣ ಸಂಗ್ರಹಣೆ ಮಾಡುವುದರಲ್ಲಿ ನಿರತವಾಗಿದೆ. ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ ಎಂಬ ಸಂಗತಿ ಮನಗಂಡಿರುವ ಪಾಕಿಸ್ತಾನ ಆಂತರಿಕ ಭಯೋತ್ಪಾದನೆ, ಇಲ್ಲವೇ ಭಾರತದ ಜನರಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದೆ. ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡೆ ತನ್ನ ತಂತ್ರ ಸಿದ್ಧಿಗೆ ಹವಣಿಸುತ್ತಿದೆ.

English summary
Operation black is the latest from Pakistan which involves a ploy to play a mind game with India. In this unique operation the idea is to target the Prime Minister of India by filing a host of cases against him. While Modi got summons on arrival at the US in connection with the Gujarat riots case, he can be prepared for several more such cases in the days to come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X