ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಪದಾರ್ಥಗಳ ಮೇಲೆ 'ಬೆಸ್ಟ್ ಬಿಫೋರ್' ಕಿತ್ತು ಹಾಕಿ!

By Mahesh
|
Google Oneindia Kannada News

ನವದೆಹಲಿ, ಡಿ.28: ಆಹಾರ ಪದಾರ್ಥಗಳ ಮೇಲೆ ಮುದ್ರಿಸಲಾಗುವ ಲೇಬಲ್‌ಗಳಲ್ಲಿ ಕೇವಲ ಎಕ್ಸ್ ಪೈರಿ ಡೇಟ್ ಮಾತ್ರ ಹಾಕಬೇಕೇ ಹೊರತು 'ಬೆಸ್ಟ್ ಬಿಫೋರ್' ಎಂಬ ಪದವನ್ನು ಹಾಕಬಾರದು ಎಂದು ಕೇಂದ್ರ ಸಚಿವ ರಾಂವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಕೇವಲ 'ಎಕ್ಸ್‌ಪೈರಿ ಡೇಟ್' ಬಯಸುತ್ತೇವೆ. 'ಬೆಸ್ಟ್ ಬಿಫೋರ್' ಎಂಬುದಕ್ಕೆ ಯಾವುದೇ ಅಥರ್ವಿಲ್ಲ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಾಸ್ವಾನ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದರು. ಈ ಕ್ರಮದ ಬಗ್ಗೆ 'ನಿಯಮ ರೂಪಿಸಿ' ಜಾರಿಗೊಳಿಸುವುದಕ್ಕಾಗಿ ತಾನು ತನ್ನ ಇಲಾಖೆಯ ಸಭೆಯೊಂದನ್ನು ನಡೆಸಲಾಗುವುದು ಎಂದರು.[ಬಾರ್ಬಿಕ್ಯೂ ನೇಷನ್ ಫುಡ್ ರುಚಿ ಎಲ್ಲೆಡೆ ಹಬ್ಬುತ್ತಿದೆ]

Only ‘expiry date’ for food items, not ‘best before’: Paswan

ಆಹಾರ ಪದಾರ್ಥಗಳ ಮೇಲೆ ಮುದ್ರಿಸಲಾಗುವ ಲೇಬಲ್‌ನ ಬಗ್ಗೆ ಗ್ರಾಹಕರು ಗೊಂದಲಕ್ಕೊಳಗಾಗುತ್ತಿದ್ದಾರೆಂದು ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರವು (ಎಎಸ್‌ಎಸ್‌ಎಐ) 'ಎಕ್ಸ್‌ಪೈರಿಡೆಂಟ್' ಹಾಗೂ 'ಬೆಸ್ಟ್ ಬಿಫೋರ್' ಗಳಿಗೆ ಸಂಬಂಧಿಸಿದ ವಿವಾದದ ಕುರಿತು ಪರಿಶೀಲಿಸಬೇಕೆಂದು ರಾಷ್ಟ್ರೀಯ ಗ್ರಾಹಕರ ದೂರು ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಅಧ್ಯಕ್ಷ ಡಿ.ಕೆ.ಜೈನ್ ಕಳೆದ ವಾರ ಹೇಳಿದ್ದರು.

'ಬೆಸ್ಟ್ ಬಿಫೋರ್' ಎಂದರೆ ಅದು ಆರು ತಿಂಗಳ ಬಳಿಕವೂ ಮಾನವರ ಸೇವನೆಗೆ ಯೋಗ್ಯವಾಗಿದೆಯೆಂದು ಅರ್ಥವೇ ಎಂದವರು ಆಶ್ಚರ್ಯ ವ್ಯಕ್ತಪಡಿಸಿದ್ದರು.[ಸಸ್ಯಹಾರಿಗಳಿಗೆ ಸೋತ ಏರ್ ಇಂಡಿಯಾ]

ರಸ್ತೆ ಬದಿಯ ಆಹಾರ ಸುರಕ್ಷಿತ: ನಗರಗಳಲ್ಲಿ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ ಅಂತಹ ಆಹಾರಗಳನ್ನು ಮಾರುವುದಕ್ಕೆ ಬಿಡಲಾಗುವುದು. ಬೀದಿ ಬದಿ ಮಾರಾಟಗಾರರ ರಾಷ್ಟ್ರೀಯ ಸಂಘಟನೆಯೊಂದಿಗೆ ಸರ್ಕಾರ ಚರ್ಚೆಯಲ್ಲಿ ತೊಡಗಿದೆ ಎಂದು ಪಾಸ್ವಾನ್ ತಿಳಿಸಿದರು. ರಸ್ತೆಗಳ ಬದಿಯಲ್ಲಿ ಆಹಾರ ಮಾರಲು ತಾವು ವ್ಯವಸ್ಥೆಯೊಂದನ್ನು ಬಯಸಿದ್ದೇವೆ. ಈ ಚಟುವಟಿಕೆ ನಿರ್ದಿಷ್ಟ ಸ್ಥಳದಲ್ಲಿ ನಡೆಯಬೇಕೆಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು. ಜನರು ಧಾಬಾಗಳಲ್ಲಿ ಆಹಾರವನ್ನು ಆನಂದಿಸುತ್ತಾರೆಂದು ಪಾಸ್ವಾನ್ ಉಲ್ಲೇಖಿಸಿದರು.

ಅದೇ ರೀತಿ, ರಸ್ತೆ ಬದಿಯ ಆಹಾರ ಸುರಕ್ಷಿತ ಹಾಗೂ ಅಗ್ಗದ್ದಾಗಿರಬಹುದು ಮತ್ತು ಅದನ್ನು ಆನಂದಿಸ ಬಹುದಾದ ವಾತಾವರಣದಲ್ಲಿ ಮಾರಬಹುದು.
ಅಸೋಸಿಯೇಶನ್ ದಿಲ್ಲಿ ಹಾಟ್‌ನಲ್ಲಿ ಮೇಳವೊಂದನ್ನು ನಡೆಸಿದ್ದುದನ್ನು ಉಲ್ಲೇಖಿಸಿದ ಪಾಸ್ವಾನ್, ರಸ್ತೆ ಬದಿಯ ಆಹಾರಕ್ಕಾಗಿ ನಿರ್ದಿಷ್ಟ ಸ್ಥಳಗಳನ್ನು ವಿಂಗಡಿಸುವ ಇಂತಹ ಕ್ರಮವನ್ನು ದೇಶದ ಇತರ ಸ್ಥಳಗಳಲ್ಲೂ ಅನುಷ್ಠಾನಗೊಳಿಸಬೇಕು ಎಂದರು.(ಪಿಟಿಐ)

English summary
Union Minister Ram Vilas Paswan said on Sunday labels printed on food items should carry only “expiry date”, and not “best before”, which has no meaning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X