ಶಶಿಕಲಾ ವಿರುದ್ಧದ ಆನ್ ಲೈನ್ ಪಿಟಿಷನ್ ಗೆ ಒಂದೂವರೆ ಲಕ್ಷ ಸಹಿ

Posted By:
Subscribe to Oneindia Kannada

ಎಐಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಲಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಆನ್ ಲೈನ್ ಅರ್ಜಿಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ. ಈ ಅರ್ಜಿಯನ್ನು ಸಹಿ ಸಂಗ್ರಹ ಸಮೇತ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಸಲ್ಲಿಸುವುದಾಗಿ ಈ ಅರ್ಜಿಯ ಮೂಲಕ ಆನ್ ಲೈನ್ ನಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ತಮಿಳ್ ಅರಸನ್ ಹೇಳಿದ್ದಾರೆ.[ಶಶಿಕಲಾಗೆ ಮಂಗಳವಾರ ಸಿಎಂ ಪಟ್ಟಕ್ಕೇರುವ ಯೋಗವಿಲ್ಲ!]

ತಮ್ಮ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಅವರು, ಹಣಕಾಸು ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಶಶಿಕಲಾ ಅವರು ಎಂದಿಗೂ ತಮಿಳುನಾಡು ಮುಖ್ಯಮಂತ್ರಿ ಗಾದಿಗೆ ಏರಕೂಡದು ಎಂದು ಆಗ್ರಹಿಸಿದ್ದಾರೆ.[ಜಯಲಲಿತಾ ಹತ್ಯೆ ಮಾಡಲಾಗಿದೆ: ಪಾಂಡ್ಯನ್ ಆರೋಪ]

Online petition against Sasikala Supported by 1.5 lakh signatures

ತಮಿಳುನಾಡು ವಿಧಾನಸಭೆ ವಿಸರ್ಜಿಸಿ ಹಾಗೂ ಶಶಿಕಲಾ ಮುಖ್ಯಮಂತ್ರಿಯಾಗುವುದನ್ನು ತಡೆಯಿರಿ ಎಂಬರ್ಥದ ಈ ಆನ್ ಲೈನ್ ಜನಾಭಿಪ್ರಾಯ ಆಂದೋಲನಕ್ಕೆ ಈಗಾಗಲೇ 1,64,334 ಜನ ಸಹಿ ಹಾಕಿದ್ದಾರೆ.[ಜಯಾ ಚಿಕಿತ್ಸೆಗೆ 5.5 ಕೋಟಿ ಖರ್ಚು ಮತ್ತು ಇತರ 9 ಸಂಗತಿ]

ಏತನ್ಮಧ್ಯೆ, ಸಹಿ ಹಾಕುವುದರ ಜತೆಯಲ್ಲೇ ಕೆಲವರು ತಮ್ಮ ಅಭಿಪ್ರಾಯಗಳನ್ನೂ ದಾಖಲಿಸಿದ್ದು, ''ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಅದು ತಮಿಳುನಾಡಿನ ಇತಿಹಾಸದಲ್ಲಿ ಕಪ್ಪು ದಿನ ಆಗಲಿದೆ'' ಎಂದು ಬಣ್ಣಿಸಿದ್ದಾರೆ.

English summary
An online petition against Sasikala as Tamil Nadu chief minister on Change.org has garnered more than 1.5 lakh signatures.
Please Wait while comments are loading...