ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?

|
Google Oneindia Kannada News

ನವದೆಹಲಿ, ಜು. 28: ರಾಜ್ಯದ ಜನರ ಕಣ್ಣಲ್ಲಿ ಈರುಳ್ಳಿ ಖರೀದಿ ವೇಳೆಯೂ ಕಣ್ಣೀರು ತರಿಸಲು ಆರಂಭಿಸಿದೆ. ದೇಶದ ರಾಜಧಾನಿ ನವದೆಹಲಿಯಲ್ಲೂ ಕೆಜಿ ಈರುಳ್ಳಿ 40 ರು. ನೀಡಬೇಕಾಗಿದೆ.

ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮಾರುಕಟ್ಟೆಯಲ್ಲೂ ಈರುಳ್ಳಿ ಏರಿಕೆ ಹಾದಿ ಹಿಡಿದಿದೆ. ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿಯೂ ಈರುಳ್ಳಿ ದರ ಗಣನೀಯ ಹೆಚ್ಚಿದ್ದು ಕ್ವಿಂಟಲ್‌ ಈರುಳ್ಳಿ (ಉತ್ತಮ ದರ್ಜೆ) 2800 ರು. ನಿಂದ 3 ಸಾವಿರ ರು. ನೀಡಬೇಕಾಗಿದೆ. ಮಧ್ಯಮ ಗಾತ್ರದ ಈರುಳ್ಳಿ ಕನಿಷ್ಠ 2 ಸಾವಿರ ರು. ನಿಂದ 2,600 ರು. ನಡುವೆ ಇದ್ದು, ಸಣ್ಣ ಈರುಳ್ಳಿಗೆ 1500 ದಿಂದ 2 ಸಾವಿರ ರು. ನೀಡಬೇಕಾಗಿದೆ.[ಈರುಳ್ಳಿ ಬೆಲೆ ನೂರಕ್ಕೇರಿದ್ದು ಯಾಕೆ?]

onion

ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ 10 ಸಾವಿರ ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದು ಪಾಕಿಸ್ತಾನ, ಚೀನಾ ಮತ್ತು ಈಜಿಪ್ಟ್‌ ನಿಂದ ಆಮದು ಮಾಡಿಕೊಳ್ಳುವಂತೆ ವಾಣಿಜ್ಯ ಸಚಿವಾಲಯಕ್ಕೆ ಸೂಚಿಸಿದೆ.[ಆಮ್ಲೆಟ್ ಗೆ ಈರುಳ್ಳಿ ಹಾಕದಿದ್ದಕ್ಕೆ ಗುಂಡೇಟು!]

ಕೈಕೊಟ್ಟ ಮುಂಗಾರು
ಅಸಮರ್ಪಕ ಮಳೆ ಎಲ್ಲ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಬಿತ್ತನೆಯಾದ ಈರುಳ್ಳಿ ಮೊಳಕೆಯೊಡೆದಿಲ್ಲ. ಈ ಹಂಗಾಮಿನಲ್ಲಿ ಫಸಲು ಕೈಸೇರುವುದು ಅನಿಶ್ಚಿತವಾಗಿದೆ. ಹಾಗಾಗಿ ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿದ್ದ ಈರುಳ್ಳಿ ಪೂರೈಕೆ ನಿಂತಿದೆ. ಪರಿಣಾಮ ಬೆಲೆಯಲ್ಲಿ ಏಕಾಏಕಿ ಹೆಚ್ಚಳವಾಗಿದೆ. ದರ ಏರಿಕೆ ಹೀಗೆ ಮುಂದುವರಿಯಲಿದ್ದು ರೈತರು ದಾಸ್ತಾನು ಮಾಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬೆಲೆಯಲ್ಲಿ ಇನ್ನು ಏರಿಕೆಯಾದರೂ ಆಶ್ಚರ್ಯವಿಲ್ಲ.

English summary
With onion prices rising up to Rs 40 per kg in the national capital, the government has ordered to import 10,000 tonnes of the kitchen staple form countries including Pakistan, China, Egypt. Karnataka also facing same price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X