ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ಅಬ್ದುಲ್ ಕಲಾಂ ಆಸ್ತಿ ಎಷ್ಟು? ಯಾರಿಗೆ ಸೇರಲಿದೆ?

By ಡಾ. ಅನಂತ ಕೃಷ್ಣನ್
|
Google Oneindia Kannada News

ಬೆಂಗಳೂರು,ಆ.03: ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ನಿಧನದ ನೋವನ್ನು ಅರಗಿಸಿಕೊಳ್ಳಲು ದೇಶಕ್ಕೆ ಇನ್ನು ಎಷ್ಟು ವರ್ಷ ಬೇಕಾಗಬಹುದೋ? ಸಾಮಾನ್ಯ ಜನರಿಗೂ ಅವರ ಸಾವನ್ನು ಒಪ್ಪಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ.

ಹಾಗಾದರೆ ಅಬ್ದುಲ್ ಕಲಾಂ ಸಾವಿನ ನಂತರ ಅವರ ಆಸ್ತಿ ಯಾರಿಗೆ ಸಿಗಲಿದೆ? ಎಂಬ ಪ್ರಶ್ನೆಯೂ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದ್ದು ಕ್ಷಿಪಣಿ ಮಾನವನ ಆಸ್ತಿ ಅವರ ಹಿರಿಯ ಸಹೋದರ 99 ವರ್ಷದ ಮಹಮದ್‌ ಮುತ್ತು ಮೀರಾ ಲೆಬೈ ಅವರಿಗೆ ಸೇರಲಿದೆ ಎಂದು ಕಲಾಂ ಕುಟುಂಬ ತಿಳಿಸಿದೆ. [ಭಾರತ ತನ್ನ 'ರತ್ನ' ಕಳೆದುಕೊಂಡಿದೆ : ಕಲಾಂ ಕುರಿತು ಮೋದಿ ಲೇಖನ]

kalam

ವಿಲ್ ಬರೆಯಲು ಕಲಾಂ ಯೋಚಿಸಿರಲಿಲ್ಲ
ನಾವು ವಿಲ್ ಬರೆಯುವಂತೆ ಕಲಾಂ ಬಳಿ ಬಹಳ ಸಾರಿ ಕೇಳಿಕೊಂಡಿದ್ದೆವು. ಆದರೆ ಅವರು ಕೊನೆಯವರೆಗೂ ಈ ಬಗ್ಗೆ ಮಾತನಾಡಿರಲಿಲ್ಲ. ಹಾಗಾಗಿ ಅವರ ಎಲ್ಲ ಆಸ್ತಿ ಕುಟುಂಬದ ಹಿರಿಯ ವ್ಯಕ್ತಿಗೆ ಸೇರುತ್ತದೆ ಎಂದು ಕಲಾಂ ಕುಟುಂಬದ ಮೂಲಗಳು ತಿಳಿಸಿವೆ.

ಕಲಾಂ ಅವರ ದೊಡ್ಡ ಆಸ್ತಿ ಎಂದರೆ ಅವರ ಬಳಿ ಇದ್ದ ಪುಸ್ತಕಗಳು, ವೀಣೆ, ಒಂದು ಲ್ಯಾಪ್ ಟಾಪ್, ವ್ರಿಸ್ಟ್ ವಾಚ್, ಎರಡು ಬೆಲ್ಟ್, ಸಿಡಿ ಪ್ಲೇಯರ್, ಅವರ ನೆಚ್ಚಿನ ನೀಲಿ ಅಂಗಿ ಎಂದು ಕುಟುಂಬ ತಿಳಿಸಿದೆ.['ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ಮುಸ್ಲಿಮರ ಮತಕ್ಕಾಗಿ']

ನವದೆಹಲಿಯ ರಾಜಾಜಿ ಮಾರ್ಗದ ಕಲಾಂ ಕೋಣೆಗೆ ಬೀಗ ಹಾಕಲಾಗಿದ್ದು ಅದನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ಕಲಾಂ ಅನುಯಾಯಿಯೊಬ್ಬರು ತಿಳಿಸಿದ್ದಾರೆ.

ಪುಸ್ತಕಗಳು ಮತ್ತು ರಾಯಲ್ಟಿ
ಭಾರತದ ಪ್ರಖ್ಯಾತ ಬರಹಗಾರರಲ್ಲಿ ಕಲಾಂ ಅವರಿಗೆ ಪ್ರಮುಖ ಸ್ಥಾನ. ಅವರ ಅನುಯಾಯಿಗಳಲ್ಲಿ ಹಲವರು ಕಲಾಂ ಜತೆ ಸಹ ಲೇಖಕರಾಗಿಯೂ ಕಾಣಿಸಿಕೊಂಡಿದ್ದಾರೆ. ಕಲಾಂ ಹಿರಿಯ ಸಹೋದರರೇ ಎಲ್ಲ ಪುಸ್ತಕಗಳ ರಾಯಲ್ಟಿಗೆ ಪಾಲುದಾರರಾಗಿರುತ್ತಾರೆ.

ಸಂಬಂಧಿಕರಿಗೆ ನಿರಂತರ ಸಹಾಯ
ಕಲಾಂ ತಮ್ಮ ಅಂತ್ಯಕಾಲದವರೆಗೂ ತಮ್ಮ ಸಂಬಂಧಿಕರಿಗೆ ನೆರವು ನೀಡುತ್ತಲೇ ಬಂದಿದ್ದರು. ಕಲಾಂ ಬೆಂಗಳೂರಿನಲ್ಲಿ ಒಂದು ಸೈಟ್ ಸಹ ಖರೀದಿಸಿದ್ದರು. ಅದನ್ನು ಅವರ ಅಣ್ಣನ ಮೊಮ್ಮಗಳಿಗೆ 2013 ರಲ್ಲಿ ಕೊಡುಗೆಯಾಗಿ ನೀಡಿದ್ದರು.

ಕೇವಲ ಕುಟುಂಬದವರಿಗೆ ಮಾತ್ರವಲ್ಲದೇ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರಿಗೂ ಅನೇಕ ಬಗೆಯಲ್ಲಿ ನೆರವು ನೀಡುತ್ತಾ ಬಂದಿದ್ದರು. ರಂಜಾನ್ ವೇಳೆಯಲ್ಲಿ ಜಮಾತ್ ಸಂಘಟನೆಗೆ ಪ್ರತಿವರ್ಷ 1 ಲಕ್ಷ ರು.ಗಳನ್ನು ನೀಡುತ್ತಿದ್ದರು ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿತ್ತು.

English summary
Thinking should become your capital asset, no matter whatever ups and downs you come across in your life," so goes a famous quote by former President Dr APJ Abdul Kalam, whose sudden demise last week, has left an entire nation orphaned. Reliable sources confirm to OneIndia that the assets of the Missile Man, now widely being referred as Guru Kalam, will be likely to be handed over to his elder brother Mohammad Muthu Meera Lebbai Maraicker, 99 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X