ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡ್ತಾ ಪಂಜಾಬ್‌ಗೆ ಒಂದೇ ಕತ್ತರಿ ಸಾಕೆಂದ ಬಾಂಬೆ ಹೈಕೋರ್ಟ್

By Madhusoodhan
|
Google Oneindia Kannada News

ಮುಂಬೈ, ಜೂನ್ 13: ಸೆನ್ಸಾರ್ ಮಂಡಳಿಗೆ ಬಾಂಬೆ ಹೈಕೋರ್ಟ್ ಮಂಗಳಾರತಿ ಮಾಡಿದೆ. ಉಡ್ತಾ ಪಂಜಾಬ್ ಚಿತ್ರದ ಕೇವಲ ಒಂದು ದೃಶ್ಯವನ್ನು ಕತ್ತರಿಸಿ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.

89 ಸೀನ್ ಕಟ್ ಮಾಡಿದ್ದ ಸೆನ್ಸಾರ್ ಮಂಡಳಿ ಇದೀಗ ಸಾಮಾಜಿಕ ತಾಣದಲ್ಲೂ ಛೀಮಾರಿಗೆ ಗುರಿಯಾಗುತ್ತಿದೆ. ಉಡ್ತಾ ಪಂಜಾಬ್ ಸಿನಿಮಾಕ್ಕೆ 89 ಕತ್ತರಿ ಪ್ರಯೋಗ ಮಾಡಿದ್ದ ಸೆನ್ಸಾರ್ ಬೋರ್ಡ್ ತೀವ್ರ ಮುಖಭಂಗ ಅನುಭವಿಸಿದೆ.[ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಟ್, ಸೆನ್ಸಾರಿಗೆ ಟ್ವೀಟ್ ಪೆಟ್ಟು]

punjab

ಕೆಲ ಅಸಂವಿಧಾನಿಕ ಶಬ್ದ ಮತ್ತು ಮೂತ್ರ ವಿಸರ್ಜನೆಯ ದೃಶ್ಯವನ್ನು ಕಿತ್ತು ಹಾಬೇಕು ಎಂದು ನ್ಯಾಯಾಲಯ ತಿಳಿಸಿದೆ. ಇದೆಲ್ಲವನ್ನು ಬಹಿರಂಗಪಡಿಸಲು ಹೊರಟ ಚಿತ್ರ ತಂಡಕ್ಕೆ ಈಗ ಸೆನ್ಸಾರ್ ಮಂಡಳಿ ಈ ರೀತಿ ಆದೇಶ ನೀಡಿದೆ. ಚಿತ್ರದ ಶೀರ್ಷಿಕೆಯಿಂದ 'ಪಂಜಾಬ್' ತೆಗೆಯಿರಿ ಎನ್ನುವುದಕ್ಕೂ ಅರ್ಥ ಇಲ್ಲ ಎಂದು ನ್ಯಾಯಾಲಯ ಹೇಳಿದೆ.[ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!]

2 ದಿನದೊಳಗೆ ಉಡ್ತಾ ಪಂಜಾಬ್ ಸಿನಿಮಾಕ್ಕೆ ಹೊಸ ಸರ್ಟಿಫಿಕೇಟ್ ಅನ್ನು ನೀಡಬೇಕೆಂದು ಕೇಂದ್ರ ಸೆನ್ಸಾರ್ ಮಂಡಳಿಗೆ ಹೈಕೋರ್ಟ್ ಪೀಠ ನಿರ್ದೇಶನ ನೀಡಿದೆ. ಅಲ್ಲದೇ ಉಡ್ತಾ ಪಂಜಾಬ್ ಚಿತ್ರಕ್ಕೆ ತಡೆ ನೀಡಬೇಕೆಂಬ ಸೆನ್ಸಾರ್ ಮಂಡಳಿ ಬೇಡಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಡ್ತಾ ಪಂಜಾಬ್ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಏಕ್ತಾಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಅನುರಾಗ್ ಕಶ್ಯಪ್, ಸಮೀರ್ ನಾಯರ್ ಸೇರಿದಂತೆ ಅನೇಕರು ಸಹ ನಿರ್ಮಾಪಕರಾಗಿದ್ದಾರೆ.

ನ್ಯಾಯಾಲಯ ಹೇಳಿದ್ದೇನು?
* ಉಡ್ತಾ ಪಂಜಾಬ್ ಸಿನಿಮಾಕ್ಕೂ ಪಂಜಾಬ್ ನಲ್ಲಿ 2017 ರಲ್ಲಿ ನಡೆಯಲಿರುವ ಚುನಾವಣೆಗೂ ಸಂಬಂಧ ಇಲ್ಲ.
* ಸಾಮಾಜಿಕ ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಗೆ ಧಕ್ಕೆ ತರುವಂತಹ ದ್ರಶ್ಯಗಳು ಚಿತ್ರದಲ್ಲಿ ಇಲ್ಲ
* ಚಿತ್ರದಲ್ಲಿ ಸಂಭಾಷಣೆ ಯಾವುದೇ ವ್ಯಕ್ತಿಗಳ ಬಗ್ಗೆ ಕೀಳು ಅಭಿರುಚಿಯನ್ನು ಪ್ರಚುರ ಮಾಡುವಂತೆ ಇಲ್ಲ.
* ಚಿತ್ರದ ಕತೆ ನಿಜ ಬದುಕಿಗೆ ಅನ್ವಯವಾಗುವಂತೆ ಇದೆ. ಆದರೆ ಯಾರನ್ನೂ ಉದ್ದೇಶಿಸಿದಂತೆ ಇಲ್ಲ.
* ಚಿತ್ರ ಯಾವುದೇ ಒಂದು ರಾಜ್ಯವನ್ನು ಪ್ರತಿನಿಧಿಸುವಂತೆ ಇಲ್ಲ.
* ಯಾವುದೇ ಪಕ್ಷ ಅಥವಾ ಸಂಘಟನೆ ಅಥವಾ ಸಂಸತ್ ಉದ್ದೇಶಿಸಿ ಹೇಳಿದಂತೆ ಇಲ್ಲ.

English summary
The Bombay High Court on Monday allowed the makers of Udta Punjab to release the Anurag Kashyap film with just one cut and a revised disclaimer. The High Court ordered Udta Punjab makers to remove the scene where Shahid Kapoor is seen urinating on crowd. Any reference to Pakistan is also to be removed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X