ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಕಾರ್ಯಕ್ರಮಕ್ಕೂ ಬೀದಿ ನಾಯಿ ನುಗ್ತವೆ!

|
Google Oneindia Kannada News

ನವದೆಹಲಿ, ಜ. 26 : ಮಹಾನಗರ ಬೀದಿಗಳಲ್ಲಿ ರಾತ್ರಿಯಾದರೆ ಬೀದಿ ಮೈ ಮೇಲೆ ಏರಗುವುದು ಸಾಮಾನ್ಯ. ಬಿಗಿ ಭದ್ರತೆಯಿರುವ ಗಣ್ಯರ ಕಾರ್ಯಕ್ರಮಕ್ಕೆ ಬೀದಿ ನಾಯಿಯೊಂದು ನುಗ್ಗಿದೆರೆ...! ಹೌದು ರಾಷ್ಟ್ರಪತಿ ಭವನದಲ್ಲಿ ಬರಾಕ್ ಒಬಾಮಾ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ನುಗ್ಗಿದ ನಾಯಿ ಒಂದು ಕ್ಷಣ ಎಲ್ಲರಲ್ಲೂ ಗಲಿಬಿಲಿ ಉಂಟುಮಾಡಿತ್ತು.

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ರಾಷ್ಟ್ರಪತಿ ಭವನದಲ್ಲಿ ಗೌರವವಂದನೆ ಸ್ವೀಕಾರ ಮಾಡುತ್ತಿದ್ದ ವೇಳೆ ಥಟ್ಟನೆ ಶ್ವಾನವೊಂದು ಪ್ರತ್ಯಕ್ಷವಾಗಿತ್ತು. ಒಬಾಮಾ ಗಣ್ಯರ ಕೈಕುಲುಕುತ್ತಿದ್ದ ವೇಳೆ ಒಳಕ್ಕೆ ನುಗ್ಗಿದ ಶ್ವಾನ ಅತ್ತಿದ್ದಿಂತ ಓಡಾಡುತ್ತ, ಕೆಂಪು ಹಾಸಿನ ಮೇಲೂ ನಡೆದು ಹೋಯಿತು.[ಭಾರತ-ಅಮೆರಿಕದ ನಡುವೆ 'ಹಾಟ್ ಲೈನ್' ನಿರ್ಮಾಣ]

obama

ಇದನ್ನು ನೋಡುತ್ತಿದ್ದ ರಕ್ಷಣಾ ಸಿಬ್ಬಂದಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ಸೊಳ್ಳೆಯೂ ಒಳ ಬಾರದಂತೆ ರಕ್ಷಣಾ ಕ್ರಮಗಳನ್ನು ತೆಗೆದುಕೊಂಡರೂ ನಾಯಿ ಹೇಗೆ ಒಳಬಂದಿತು? ಎಂಬುದು ಗೊತ್ತಾಲಿಲ್ಲ.[ಚಿತ್ರಗಳಲ್ಲಿ ನೋಡಿ : ಒಬಾಮಾ ಭಾರತ ಭೇಟಿ ಮೊದಲ ದಿನ]

ಅಮೆರಿಕದ ಭದ್ರತಾ ಸಿಬ್ಬಂದಿ ಮತ್ತು ಭಾರತದ ರಕ್ಷಣಾ ಪಡೆಗಳಿಂದ ಸುತ್ತುವರಿಯಲಪಟ್ಟಿದ್ದ ರಾಷ್ಟ್ರಪತಿ ಭವನದ ಕಡೆ ಸಾರ್ವಜನಿಕರ ಪ್ರವೇಶವನ್ನು ನಿಷೇಧ ಮಾಡಲಾಗಿತ್ತು ಆದರೆ ಈ ಶ್ವಾನ ತಂದು ಬಿಟ್ಟವರು ಯಾರು ಎಂಬುದು ಮಾತ್ರ ಗೊತ್ತಾಗಲಿಲ್ಲ. ನಾಯಿಯನ್ನು ಸೆರೆ ಹಿಡಿದ ಅಧಿಕಾರಿಗಳು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿದರು.

English summary
During the Guard of Honour ceremony, at the Rashtrapati Bhavan a stray dog was seen roaming around. Not only was he a party to the big event but was able to spend ample time in the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X