ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ವಿಶ್ವ ವಿದ್ಯಾಲಯದ ಊಟದ ಮೆನು ವಿನಲ್ಲೂ ಮಟನ್, ಚಿಕನ್ ಮಾಯ!!

ಈಗ ಅಲೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ ನೀಡಲಾಗುವ ಊಟದ ಮೆನುವಿನಿಂದ ಮಾಂಸಾಹಾರ ಮಾಯವಾಗಿದ್ದು, ಇದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ.

|
Google Oneindia Kannada News

ಲಕ್ನೋ, ಮಾರ್ಚ್ 30: ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಆ ರಾಜ್ಯದಲ್ಲಿದ್ದ ಅಕ್ರಮ ಕಸಾಯಿಖಾನೆಗಳತ್ತ ಕೆಂಗಣ್ಣು ಬೀರಿರುವುದು ಆ ರಾಜ್ಯದಲ್ಲಿ ಮಾಂಸಾಹಾರಕ್ಕೆ ಸಂಚಾಕಾರ ಬಂದಿದೆ.

ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ಈಗ ಅಲೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ ನೀಡಲಾಗುವ ಊಟದ ಮೆನುವಿನಿಂದ ಮಾಂಸಾಹಾರ ಮಾಯವಾಗಿದ್ದು, ಇದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ.[ಉತ್ತರ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು, 32 ಜನರಿಗೆ ಗಾಯ]

Now, Meat Goes Off the Menu at Aligarh Muslim University, Students Write to V-C

ಈ ಬಗ್ಗೆ ವಿಶ್ವವಿದ್ಯಾಲಯದ ಉಪ ಕುಲಪತಿಯಾದ ಲೆಫ್ಟನೆಂಟ್ ಜನರಲ್ (ನಿವೃತ್ತ) ಜಮೀರ್ ಉದ್ದೀನ್ ಶಾ ಅವರಿಗೆ ಪತ್ರ ಬರೆದಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥರು, ''ಕಳೆದ ಏಳು ದಿನಗಳಿಂದಲೂ ವಿಶ್ವವಿದ್ಯಾಲಯದ ಹಾಸ್ಟೆಲ್ ಗಳಲ್ಲಿ ಮಾಂಸಾಹಾರ ವಿತರಣೆ ಮಾಡುತ್ತಿಲ್ಲ. ಅದಕ್ಕೂ ಮೊದಲು ವಾರಕ್ಕೆರಡು ದಿನ ಮಾಂಸಾಹಾರ ನೀಡಲಾಗುತ್ತಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಮನವಿ ಮಾಡಿಕೊಂಡಿದ್ದಾರೆ.[ಯೋಗಿ ಎಫೆಕ್ಟ್: ಮಾಂಸ ಮಾರಾಟಕ್ಕೆ ಬೈ, ಚಹಾದಂಗಡಿಗೆ ಸೈ!]

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಶ್ವವಿದ್ಯಾಲಯದಲ ಸಾರ್ವಜನಿಕ ಸಂಪರ್ಕಾಧಿಕಾರಿ ಒಮರ್ ಪೀರ್ ಜಾದಾ ಅವರು, ಇದೊಂದು ತಾತ್ಕಾಲಿಕ ಸಮಸ್ಯೆಯಷ್ಟೇ. ಸದ್ಯಕ್ಕೆ ರಾಜ್ಯದಲ್ಲಿ ಮಾಂಸದ ಬೆಲೆ ಹೆಚ್ಚಾಗಿರುವುದರಿಂದ ಊಟದ ಬಜೆಟ್ ಹೊಂದಾಣಿಕೆಗಾಗಿ ಈ ಸಣ್ಣ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಹಾಸ್ಟೆಲ್ ಗಳಲ್ಲಿ ಮತ್ತೆ ಮಾಂಸಾಹಾರದ ಆಹಾರ ಸಿಗಲಿದೆ ಎಂದು ತಿಳಿಸಿದ್ದಾರೆ.

English summary
Coinciding with the new Uttar Pradesh government’s crackdown on illegal slaughterhouses, meat seems to have gone off the menu at Aligarh Muslim University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X