ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಜನನ ಪ್ರಮಾಣ ಪತ್ರದಲ್ಲೇ 'ದಲಿತ' ಎಂಬ ಮುದ್ರೆ!

By Mahesh
|
Google Oneindia Kannada News

ನವದೆಹಲಿ, ನ.23: ಪ್ರತಿ ಮಗುವಿನ ಜನನ ಪ್ರಮಾಣ ಪತ್ರದಲ್ಲಿಯೇ ಅದು 'ದಲಿತ' ಎಂಬ ಮುದ್ರೆ ಒತ್ತಲು ಸಾಧ್ಯವಾಗುವಂಥ ಕರದು ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿಕೊಂಡಿದೆ. ಹೀಗಾಗಿ, ಹುಟ್ಟುತ್ತಲ್ಲೇ ಜಾತಿಯ ಟ್ಯಾಗ್ ನೊಂದಿಗೆ ಮಗು ಕಣ್ಬಿಡಬಹುದು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಅವರು 8ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಜಾತಿ ಹಾಗೂ ವಾಸ್ತವ್ಯ ಪ್ರಮಾಣ ಪತ್ರಗಳನ್ನು ನೀಡುವ ಹೊಣೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳದ್ದಾಗಿದೆ. [ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?]

ಇಂಥ ಪ್ರಮಾಣ ಪತ್ರವನ್ನು ಶಿಕ್ಷಣ ಸಂಸ್ಥೆಗಳಲ್ಲಿ ವಾಸ್ತವ್ಯ ಅಥವಾ ನಿವಾಸಿ ಕೋಟಾ ಪಡೆಯಲು ಹಾಗೂ ರಾಜ್ಯ ಅಥವಾ ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿ ಪಡೆಯಲು ವಾಸಸ್ಥಳದ ಪುರಾವೆಯಾಗಿ ನೀಡಲಾಗುವುದು.

ಜಾತಿ ಪ್ರಮಾಣ ಪತ್ರ ಸಮಸ್ಯೆ ಇನ್ನಿಲ್ಲ: ಶಾಲಾ ಪ್ರವೇಶಾತಿ ಅಥವಾ ಕೇಂದ್ರ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವೇಳೆ ವಾಸ್ತವ್ಯ ಅಥವಾ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವಲ್ಲಿ ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳು ಅನುಭವಿಸುವ ಕಷ್ಟದ ಕುರಿತು ಕೇಂದ್ರ ಸರಕಾರಕ್ಕೆ ಆಗಾಗ ದೂರುಗಳು ಬರುತ್ತಿತ್ತು. ಹೀಗಾಗಿ, ಸಮಸ್ಯೆ ನಿವಾರಣೆಗೆ ಸರ್ಕಾರ ಈ ಕ್ರಮ ಅನುಸರಿಸಲು ನಿರ್ಧರಿಸಿದೆ.[ಜನನ, ಮರಣ ನೋಂದಣಿಗೆ ನಾಡ ಕಚೇರಿಗೆ ಹೋಗಿ]

Now, a child may get 'Dalit' stamp on birth

ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ನಿರ್ದಿಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನಿವಾಸಿ ಎಂದು ಖಾತ್ರಿಪಡಿಸಲು ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿತ ಅಧಿಕಾರಿಗಳು ವಾಸ್ತವ್ಯ ಪ್ರಮಾಣಪತ್ರ(proof of residence) ನೀಡುತ್ತಾರೆ. ಅಂತಹ ಪ್ರಮಾಣ ಪತ್ರಗಳ ಶಿಕ್ಷಣ ಸಂಸ್ಥೆಗಳಲ್ಲಿ, ರಾಜ್ಯ ಹಾಗೂ ಕೇಂದ್ರ ಸರಕಾರಿ ಸೇವೆಗಳಲ್ಲಿ ಅಥವಾ ನಿವಾಸಿ ಕೋಟಾ ಮತ್ತು ಸ್ಥಳೀಯ ನಿವಾಸಿಗಳಿಗೆ ಆದ್ಯತೆಯಿರುವ ಉದ್ಯೋಗಗಳನ್ನು ಪಡೆಯಲು ವಾಸ್ತವ್ಯದ ಪುರಾವೆಯಾಗಿ ನೀಡಲ್ಪಡುತ್ತವೆ.

ವಿದ್ಯಾರ್ಥಿಯು ಕಲಿಯುತ್ತಿರುವ ಶಾಲೆಯ ಮುಖ್ಯಸ್ಥರು ಅಥವಾ ಮುಖ್ಯೋಪಾಧ್ಯಾಯರು 8ನೆ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿಸಿ ಪಡೆಯುತ್ತಾರೆ.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೆಪ್ಟಂಬರ್-ಅಕ್ಟೋಬರ್ ಅಥವಾ ಸಂಬಂಧಿತ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಗದಿಪಡಿಸಿದ 2 ತಿಂಗಳ ಅವಧಿಯನ್ನು ಮೀಸಲಿಡಬಹುದು. ಶಾಲೆಗಳು ಎಲ್ಲ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಅಗತ್ಯವಿರುವ ಪ್ರಮಾಣಪತ್ರ ಸಿದ್ಧಪಡಿಸಲು ಸಂಬಂಧಿತ ರಾಜ್ಯ ಸರಕಾರದ ಅಧಿಕಾರಿ ಅಥವಾ ಕಂದಾಯ ಅಧಿಕಾರಿಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಕರಡು ಮಾರ್ಗಸೂಚಿ ತಿಳಿಸಿದೆ.

English summary
A child's birth certificate may bear the stamp of his or her being a Dalit as per the draft guidelines framed by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X