ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ

|
Google Oneindia Kannada News

ನವದೆಹಲಿ, ಮಾರ್ಚ್, 28: ಆಧುನಿಕತೆಯನ್ನು ಒಗ್ಗಿಸಿಕೊಂಡಿರುವ ಭಾರತೀಯ ರೈಲ್ವೆ ಇದೀಗ ಟಿಕೆಟ್ ಕ್ಯಾನ್ಸಲ್ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಮಾಡಿದೆ. ಇನ್ನುಮುಂದೆ

ಆನ್ ಲೈನ್ ನಲ್ಲಿ ಟಿಕೆಟ್ ಖರೀದಿ ಮಾಡಿದವರು ಅಂತರ್ಜಾಲ ಬಳಸಿಯೇ ಟಿಕೆಟ್ ರದ್ದು ಮಾಡಲು ಅವಕಾಶವಿದೆ. ಕೌ೦ಟರ್ ನಲ್ಲಿ ಟಿಕೆಟ್ ಖರೀದಿ ಮಾಡಿದವರು 139 ಕ್ಕೆ ಕರೆ ಮಾಡಿ ಟಿಕೆಟ್ ರದ್ದು ಮಾಡಲು ಅವಕಾಶ ಸಿಕ್ಕಂತಾಗಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

 Now Cancelling a Train Ticket is One Call away

ಟಿಕೆಟ್ ರದ್ದುಪಡಿಸುವುದು ಹೇಗೆ?
* ಮೊದಲು 139ಕ್ಕೆ ಡಯಲ್ ಮಾಡಿ
* ಕ್ಯಾನ್ಸಲ್ ಮಾಡಬೇಕಾದ ಟಿಕೆಟ್ ನ ಎಲ್ಲ ವಿವರಗಳನ್ನು ನೀಡಿ

* ಇದಾದ ಮೇಲೆ ನೀವು ಒಂದು ಒಟಿಪಿ ಪಡೆದುಕೊಳ್ಳುತ್ತೀರಿ. ಇದು ಒಂದು ದಿನ ವ್ಯಾಲಿಡಿಟಿ ಹೊಂದಿರುತ್ತದೆ.

* ಅದೇ ದಿನ ಟಿಕೆಟ್ ಕೌಂಟರ್ ಗೆ ತೆರಳಿ[ಹೊಸದಾಗಿ ಎಲ್‌ಪಿಜಿ ಸಂಪರ್ಕ ಪಡೆಯುವುದು ಹೇಗೆ?]
* ಒಟಿಪಿ ಯನ್ನು ಸಲ್ಲಿಕೆ ಮಾಡಿ

* ಇದಾದ ಮೇಲೆ ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗಿ ಹಣಮರುಪಾವತಿ ಮಾಡಲಾಗುವುದು.

ಲಾಭ ಏನು? ಟಿಕೆಟ್ ಕ್ಯಾನ್ಸಲ್ ಮಾಡಬೇಕು ಎಂದು ಅಂದುಕೊಂಡಿದ್ದರೂ ಸಮಯಕ್ಕೆ ಸರಿಯಾಗಿ ಕೌಂಟರ್ ಗೆ ತೆರಳಲು ಸಾಧ್ಯವಾಗುವುದಿಲ್ಲ. ಇಂಥ ವೇಳೆ ಕರೆ ಮಾಡಿ ಒಟಿಪಿ ಪಡೆದುಕೊಂಡರೆ ನೀವು ಒಟಿಪಿ ಪಡೆದುಕೊಂಡ ಸಮಯವೇ ಟಿಕೆಟ್ ಕ್ಯಾನ್ಸಲ್ ಮಾಡಿದ ವೇಳೆ ಎಂದು ಪರಿಗಣನೆಗೆ ಬರುತ್ತದೆ. ಅನವಶ್ಯಕವಾಗಿ ಹಣ ಕಳೆದುಕೊಳ್ಳುವುದು ತಪ್ಪುತ್ತದೆ.

English summary
Just dial 139 and cancel your booked railway ticket with Indian Railways all set to launch the service for convenience of passengers who find it difficult to reach the counter within the stipulated time for cancel and refund of confirmed tickets. The railway has proposed that passengers can call 139 and give details of their confirmed ticket for cancellation and receive a one-time password (OTP). The OTP has to be taken to the counter the same day to claim a refund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X