ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ 4 ತಿಂಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ

|
Google Oneindia Kannada News

ನವದೆಹಲಿ, ಮಾ. 18 : ಭಾರತೀಯ ರೈಲ್ವೆ 4 ತಿಂಗಳ ಮೊದಲೇ ಮುಂಗಡ ಟಿಕೆಟ್ ಕಾಯ್ದಿರಿಸುವ ನೂತನ ವ್ಯವಸ್ಥೆಗೆ ಏಪ್ರಿಲ್‌ನಲ್ಲಿ ಚಾಲನೆ ನೀಡಲಿದೆ. ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಮಾಡಿದ್ದು, ಏಪ್ರಿಲ್‌ 1ರಿಂದ ಇದು ಜಾರಿಗೆ ಬರಲಿದೆ.

ಪ್ರಸ್ತುತ ಎರಡು ತಿಂಗಳ ಮೊದಲೇ ಟಿಕೆಟ್‌ ಬುಕ್ಕಿಂಗ್ ಮಾಡುವ ಅವಕಾಶವಿದೆ. ಇದನ್ನು 120 ದಿನಗಳಿಗೆ ಹೆಚ್ಚಿಸುವ ಸಲುವಾಗಿ ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ತರಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಏ.1ರಿಂದ ಯೋಜನೆ ಜಾರಿಯಾಗಲಿದೆ. [ರೈಲ್ವೆ ವಿಶೇಷ : 12 ದಿನಗಳ ಯಾತ್ರೆಗೆ 9,900 ರೂ.]

railway

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. 120 ದಿನ ಮೊದಲೇ ಬುಕಿಂಗ್‌ಗೆ ಅವಕಾಶ ಮಾಡಿಕೊಟ್ಟರೆ ನಷ್ಟದಲ್ಲಿರುವ ರೈಲ್ವೆಗೆ ತುಸು ಹೆಚ್ಚುವರಿಯಾಗಿ ಆದಾಯ ಬರಲಿದೆ. [2015ರ ರೈಲ್ವೆ ಬಜೆಟ್ ಮುಖ್ಯಾಂಶಗಳು]

ಫ್ಲಾಟ್‌ಫಾರಂ ಟಿಕೆಟ್ ದರ ಹೆಚ್ಚಳ : ರೈಲ್ವೆ ಇಲಾಖೆ 5 ರೂ.ಇದ್ದ ಫ್ಲಾಟ್‌ಫಾರಂ ಟಿಕೆಟ್ ದರವನ್ನು 10 ರೂ.ಗೆ ಏರಿಕೆ ಮಾಡಿದೆ. ಏ.1ರಿಂದಲೇ ಈ ನೂತನ ದರ ಜಾರಿಗೆ ಬರಲಿದೆ. ಇದರಜೊತೆಗೆ ಮೇಳ ಅಥವಾ ಬೃಹತ್ ಸಮಾವೇಶಗಳ ಸಂದರ್ಭಗಳಲ್ಲಿ ನಿಲ್ದಾಣಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ರೈಲ್ವೇ ವಿಭಾಗಾಧಿಕಾರಿಗಳಿಗೆ ಫ್ಲಾಟ್‌ಫಾರಂ ಟಿಕೆಟ್ ದರ ಹೆಚ್ಚಿಸುವ ಅಧಿಕಾರವನ್ನು ನೀಡಲಾಗಿದೆ. [30 ಸೆಕೆಂಡ್ ನಲ್ಲಿ ಟಿಕೆಟ್ ಬುಕ್ ಮಾಡಿ]

ಐದು ನಿಮಿಷದಲ್ಲಿ ಟಿಕೆಟ್ ಪಡೆಯಿರಿ : ರೈಲ್ವೆ 'ಐದು ನಿಮಿಷ'ದಲ್ಲಿ ಸಾಮಾನ್ಯ ಟಿಕೆಟ್ ಪಡೆಯುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ ಐದು ನಿಮಿಷದಲ್ಲಿ ಟಿಕೆಟ್ ಪಡೆಯಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರ ಅನ್ವಯ ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

English summary
Now you can book train tickets 4 months in advance as the Indian Railways has decided to extend the advance reservation period from 60 to 120 days, with effect from April 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X