ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

200 ಕಿ.ಮೀ ವೇಗದಲ್ಲಿ ಚಲಿಸುವ ಅತ್ಯಾಧುನಿಕ 'ತೇಜಸ್' ರೈಲಿಗೆ ಚಾಲನೆ

ಬರೋಬ್ಬರಿ 200 ಕಿಲೋಮೀಟರ್ ವೇಗದಲ್ಲಿ ಚಲಿಸುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ 'ತೇಜಸ್ ಎಕ್ಸ್ ಪ್ರೆಸ್' ಎಂಬ ಸೆಮಿ ಹೈ ಸ್ಟೀಪಡ್ ರೈಲಿಗೆ ಸೋಮವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಮೇ 23: ಸೋಮವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಸೆಮಿ ಹೈ ಸ್ಟೀಪಡ್ ರೈಲಿಗೆ ಚಾಲನೆ ನೀಡಿದ್ದಾರೆ. ಅಂದ ಹಾಗೆ ಇದರ ವೇಗ ಗಂಟೆಗೆ ಬರೋಬ್ಬರಿ 200 ಕಿಲೋಮೀಟರ್. ಹಲವು ಪ್ರಯತ್ನಗಳ ನಂತರ ಇಂಥಹದ್ದೊಂದು ರೈಲು ಮೊದಲ ಬಾರಿಗೆ ಭಾರತದಲ್ಲಿ ಓಡುತ್ತಿದೆ. ಇದರ ಹೆಸರು 'ತೇಜಸ್ ಎಕ್ಸ್ ಪ್ರೆಸ್'.

ಕೇವಲ ವೇಗದ ಕಾರಣಕ್ಕೆ ಮಾತ್ರವಲ್ಲ ಈ ರೈಲು ಹಲವು ಕಾರಣಗಳಿಗೆ ಪ್ರಯಾಣಿಕರ ಗಮನ ಸೆಳೆದಿದೆ. ಉತ್ತಮ ಪ್ರಯಾಣಿಕ ಸ್ನೇಹಿ ಆಸನ ವ್ಯವಸ್ಥೆಗಳು ಈ ರೈಲಿನಲ್ಲಿವೆ. ಜತೆಗೆ ಭಾರತದ ಭವಿಷ್ಯದ ರೈಲ್ವೇ ಯೋಜನೆಗಳ ಬಗ್ಗೆಯೂ ಇದು ನಿರೀಕ್ಷೆ ಹೆಚ್ಚಿಸಿದೆ.

ನೋಡಲು ರೈಲು ಆಕರ್ಷಕವಾಗಿದೆ. ಕಾಲು ಚಾಚಿ ಕುಳಿತುಕೊಳ್ಳಲು ಹೆಚ್ಚಿನ ಸ್ಥಳಾವಕಾಶವೂ ಇದೆ. ವೈಫೈ, ಎಲ್.ಸಿ.ಡಿ ಪರದೆಗಳು ಜತೆಗೆ ರೈಲಿನಲ್ಲೇ ಆಹಾರ ಸಿದ್ದಪಡಿಸಲು ವ್ಯವಸ್ಥೆಗಳಿವೆ.

ಅತ್ಯುತ್ತಮ ವಿನ್ಯಾಸ

ಅತ್ಯುತ್ತಮ ವಿನ್ಯಾಸ

ಈ ರೈಲಿನ ವಿನ್ಯಾಸ ಅತ್ಯಧ್ಭುತವಾಗಿದೆ. ಆದರೆ ಸಾಮಾನ್ಯ ರೈಲಿಗಿಂತ ತುಸು ಹೆಚ್ಚಿನ ದರವನ್ನು ಪ್ರಯಾಣಿಕರು ತೆರಬೇಕಾಗುತ್ತದೆ. ರೈಲಿನಲ್ಲಿ ಸಿಸಿಟಿವಿಗಳೂ ಇದ್ದು ಹೆಚ್ಚಿನ ಭದ್ರತೆಯೂ ಸಿಗುತ್ತದೆ. ಇನ್ನು ಸ್ವಯಂಚಾಲಿತ ಬಾಗಿಲು, ಪ್ರಯಾಣಿಕರ ಸಹಾಯಕ್ಕಾಗಿ ಬೋಗಿಯಲ್ಲೊಬ್ಬರು ಸಿಬ್ಬಂದಿ ಇರುತ್ತಾರೆ.

ಮೊದಲ ರೈಲಿಗೆ ಚಾಲನೆ

ಮೊದಲ ರೈಲಿಗೆ ಚಾಲನೆ

ಸೋಮವಾರ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಗೋವಾದ ಕರ್ಮಾಲಿ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ರೈಲಿಗೆ ರೈಲ್ವೇ ಸಚಿವ ಸುರೇಶ್ ಪ್ರಭು ಹಸಿರು ನಿಶಾನೆ ತೋರಿಸಿದರು.

200 ಕಿಲೋಮೀಟರ್ ವೇಗ

200 ಕಿಲೋಮೀಟರ್ ವೇಗ

ಈ ತೇಜಸ್ ರೈಲಿನ ಬೋಗಿಗಳನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಪರಿಣಾಮ 200 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುವ ಸಾಮಾರ್ಥ್ಯವನ್ನು ಈ ತೇಜಸ್ ರೈಲು ಹೊಂದಿದೆ. ಆದರೆ ಸದ್ಯ ಟ್ರಾಕ್ ನಲ್ಲಿರುವ ಸಮಸ್ಯೆಯಿಂದಾಗಿ ರೈಲು ಕೇವಲ 160 ಕಿಲೋಮೀಟರ್ ವೇಗದಲ್ಲಿ ಮಾತ್ರ ಸಂಚರಿಸಲಿದೆ.

ತೇಜಸ್ ಮಾರ್ಗಗಳು

ತೇಜಸ್ ಮಾರ್ಗಗಳು

ಸದ್ಯಕ್ಕೆ ತೇಜಸ್ ಬೆಂಗಳೂರಿಗೆ ಮಾತ್ರ ಬರುತ್ತಿಲ್ಲ ಎಂಬುದೇ ಬೇಸರದ ಸಂಗತಿ. ಇದನ್ನು ಹೊರತುಪಡಿಸಿ ನವದೆಹಲಿಯಿಂದ ಚಂಡೀಗಢಕ್ಕೆ ವಾರದಲ್ಲಿ 6 ದಿನ, ಲಕ್ನೋದಿಂದ ಆನಂದ್ ವಿಹಾರ್, ಮುಂಬೈನಿಂದ ಗೋವಾದ ಕರ್ಮೋಲಿಗೆ ವಾರಕ್ಕೆ 5 ದಿನ ಈ ರೈಲು ಪ್ರಯಾಣಿಸಲಿವೆ.

ಬಯೋ ಟಾಯ್ಲೆಟ್

ಬಯೋ ಟಾಯ್ಲೆಟ್

ಇದರ ಎಲ್ಲಾ ಟಾಯ್ಲೆಟ್ ಗಳೂ ಬಯೋ ವಾಕ್ಯುಮ್ ಟಾಯ್ಲೆಟ್ ಗಳಾಗಿವೆ. ಟ್ಯಾಂಕಿನಲ್ಲಿ ನೀರೆಷ್ಟಿದೆ, ಟ್ಯಾಪ್ ಸೆನ್ಸಾರ್ ಗಳು, ಹ್ಯಾಂಡ್ ಡ್ರೈಯರ್ಸ್, ಬ್ರೈಲ್ ಡಿಸ್ಪ್ಲೇ, ಎಲ್ಲ ಪ್ರಯಾಣಿಕರಿಗೂ ಎಲ್.ಸಿ.ಡಿ ಟಿವಿ, ಫೋನ್ ಸಾಕೆಟ್, ವೈಫೈ, ಟೀ ಕಾಫಿ ವೆಂಡಿನ್ ಮೇಷೀನ್ಗ ಳು, ಮ್ಯಾಗಜೀನ್, ಉಪಹಾರ ಟೇಬಲ್ ಗಳು, ಸಿಸಿಟಿವಿ, ಬೆಂಕಿ ಮತ್ತು ಹೊಗೆ ಗುರುತಿಸುವ ಸೆನ್ಸಾರುಗಳು ಇದರಲ್ಲಿವೆ. ಹೀಗೆ ಇದೊಂದು ಅತ್ಯದ್ಭುತ ರೈಲೇ ಸರಿ.

English summary
It can easily be mistaken for a plane. On Monday railway minister,Suresh Prabhu flag offed Tejas Express, the semi-high-speed train having modern onboard facilities, enhanced passenger comfort and showcases the future of Train travel in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X