ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬಾ ರಾಮ್ ದೇವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಕಳೆದ ವರ್ಷ ಏಪ್ರಿಲ್ ನಲ್ಲಿ ರೋಹ್ಟಕ್ ನಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಮ್ಮೇಳನವೊಂದರಲ್ಲಿ ಭಾಷಣ ಮಾಡುವಾಗ ಪ್ರಚೋದನಾಕಾರಿ ಭಾಷಣ ಮಾಡಿದ್ದ ಬಾಬಾ ರಾಮ್ ದೇವ್. ಭಾರತ ಮಾತಾ ಕೀಜೈ ಎನ್ನದವರ ಶಿರಚ್ಛೇದ ಮಾಡಬೇಕೆಂದು ಹೇಳಿದ್ದ ರಾಮ್ ದೇವ್. ಈ ಪ್ರಕರಣ

|
Google Oneindia Kannada News

ರೋಹ್ಟಕ್ (ಹರ್ಯಾಣ), ಜೂನ್ 15: ಕಳೆದ ವರ್ಷ ಇಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ ಪ್ರಚೋದನಾಕಾರಿ ಮಾತುಗಳನ್ನಾಡಿದ್ದ ಹಿನ್ನೆಲೆಯಲ್ಲಿ ಬಾಬಾ ರಾಮ್ ದೇವ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.

ದೇಗುಲಗಳಲ್ಲಿ ಕಾಮಸೂತ್ರ ಪುಸ್ತಕ ಮಾರಾಟ ನಿಷೇಧಕ್ಕೆ ಆಗ್ರಹ ದೇಗುಲಗಳಲ್ಲಿ ಕಾಮಸೂತ್ರ ಪುಸ್ತಕ ಮಾರಾಟ ನಿಷೇಧಕ್ಕೆ ಆಗ್ರಹ

ಇಲ್ಲಿನ ಅಡಿಷನಲ್ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿರುವ ಹರೀಶ್ ಗೋಯಲ್ ಅವರು, ಈ ವಾರಂಟ್ ಜಾರಿಗೊಳಿಸಿದ್ದಾರೆ.

Non-bailable warrant against Baba Ramdev in beheading remark case

ತಮ್ಮ ಭಾಷಣದ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಪದೇ ಪದೇ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಹಾಗೂ ಈ ಹಿಂದೆ ಜಾರಿಗೊಳಿಸಲಾಗಿದ್ದ ವಾರಂಟ್ ಗೂ ಯಾವುದೇ ರೀತಿಯಲ್ಲಿ ಸ್ಪಂದಿಸದಿದ್ದ ಹಿನ್ನೆಯಲ್ಲಿ ಈ ಬಾರಿ ಬಂಧನ ರಹಿತ ವಾರಂಟ್ ಜಾರಿಗೊಳಿಸಲಾಗಿದೆ.

ಗೋಹತ್ಯೆ ನಿಷೇಧ ಕುರಿತು ಸುಪ್ರೀಂನಲ್ಲಿಂದು ವಿಚಾರಣೆ ಗೋಹತ್ಯೆ ನಿಷೇಧ ಕುರಿತು ಸುಪ್ರೀಂನಲ್ಲಿಂದು ವಿಚಾರಣೆ

ಕಳೆದ ವರ್ಷ ಜಾಟ್ ಸಮುದಾಯದ ಮೀಸಲಾತಿ ಹಿನ್ನೆಲೆಯಲ್ಲಿ ರೋಹ್ಟಕ್ ನಲ್ಲಿ ಭಾರೀ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆದಿದ್ದವು.

ಅದೆಲ್ಲಾ ಮುಗಿದ ನಂತರ ಕಳೆದ ವರ್ಷ ಏಪ್ರಿಲ್ ನಲ್ಲಿ ಶಾಂತಿ ಸಮ್ಮೇಳನ ಆಯೋಜಿಸಲಾಗಿತ್ತು. ಆ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಲ್ಲೊಬ್ಬರಾಗಿ ಬಂದಿದ್ದ ರಾಮ್ ದೇವ್ ಅವರು, ಭಾಷಣದ ವೇಳೆ 'ಭಾರತ್ ಮಾತಾ ಕೀ ಜೈ' ಎಂದು ಹೇಳದ ವ್ಯಕ್ತಿಗಳ ಶಿರಚ್ಛೇದ ಮಾಡಬೇಕು ಎಂದು ತಾಕೀತು ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದರಿಂದ ಕುಪಿತಗೊಂಡಿದ್ದ ಹರ್ಯಾಣದ ಮಾಜಿ ಸಚಿವ ಸುಭಾಷ್ ಬಾತ್ರಾ ಅವರು ನ್ಯಾಯಾಲಯದಲ್ಲಿ, ಬಾಬಾ ರಾಮ್ ದೇವ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿ ದೂರು ಸಲ್ಲಿಸಿದ್ದರು.

English summary
A court here today issued a non-bailable warrant (NBW) against yoga guru Ramdev in a case over his remarks made last year against those refusing to raise the slogan of Bharat mata ki jai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X