ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಎಸ್ಎಸ್ ಕೇಂದ್ರ ಕಚೇರೀಲಿ 52 ವರ್ಷ ತ್ರಿವರ್ಣ ಧ್ವಜ ಇರ್ಲಿಲ್ಲ: ರಾಹುಲ್

ಉತ್ತರಾಖಂಡ್ ನ ಹೃಷಿಕೇಶದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಹಾಗೂ ಆರ್ ಎಸ್ ಎಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ

|
Google Oneindia Kannada News

ಉತ್ತರಾಖಂಡ್, ಜನವರಿ 16: ಹೃಷಿಕೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

ಭಾರತ ಸ್ವಾತಂತ್ರ್ಯ ಪಡೆದ 52 ವರ್ಷ ನಾಗ್ಪುರದಲ್ಲಿ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ. ಅಲ್ಲಿ ಹಾರಾಡುತ್ತಿದ್ದದ್ದು ಭಗವಾ ಧ್ವಜ, ಅವರು ನಮಸ್ಕರಿಸುತ್ತಿದ್ದದ್ದು ಅದಕ್ಕೆ ಹೊರತು ತ್ರಿವರ್ಣ ಧ್ವಜಕ್ಕಲ್ಲ ಎಂದರು.

ಕಳೆದ ಏಳೆಂಟು ತಿಂಗಳಿಂದ ನಾನು ಸಂಶೋಧನೆ ನಡೆಸುತ್ತಿದ್ದೇನೆ. ಗೂಗಲ್ ನಲ್ಲಿ ಸಹ ನಮ್ಮ ಪಕ್ಷದ ಬಗ್ಗೆ ನೋಡಿದೆ. ಬಿಜೆಪಿ-ಆರ್ ಎಸ್ ಎಸ್ ಸೇರಿ ನಾಶ ಮಾಡುವಂಥದ್ದು ಕಾಂಗ್ರೆಸ್ ನಲ್ಲಿ ಏನಿದೆ ಎಂದು ರಾಹುಲ್ ವ್ಯಂಗ್ಯವಾಡಿದರು.[ಬಚ್ಚನ್ ಶೈಲಿಯಲ್ಲಿ ಮೋದಿ ಡೈಲಾಗ್ ಹೊಡೆದ ರಾಹುಲ್!]

No tri colour flag in RSS HQ till 52 years of independence

ಕಾಂಗ್ರೆಸ್ ಪಕ್ಷ ಬಲಗೊಳಿಸಿದ ಆರ್ ಬಿಐ ಮೇಲೆ ಸರಕಾರದ ಒತ್ತಡ ಇರಲಿಲ್ಲ. ಆರ್ಥಿಕ ನಿರ್ಧಾರಗಳನ್ನು ಅದೇ ತೆಗೆದುಕೊಳ್ಳುತ್ತಿತ್ತು. ಆದರೆ ನಿಮಿಷದಲ್ಲಿ ಆರ್ ಬಿಐನ ಆತ್ಮದ ಹತ್ಯೆಯನ್ನು ಮಾಡಿಬಿಟ್ಟರು ಮೋದಿ. ತ್ರಿವರ್ಣ ಧ್ವಜಕ್ಕಾಗಿ ಮೂರು ಗುಂಡೇಟು ತಿಂದವರ (ಮಹಾತ್ಮ ಗಾಂಧಿ) ಭಾವಚಿತ್ರವನ್ನೇ ಮೋದಿ ತೆಗೆಸಿಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು

ಚರಕ ಅನ್ನೋದು ಬಡವರ ರಕ್ತದ ಬೆವರ ಹನಿ. ಒಂದು ಕಡೆ ಮೋದಿ ಚರಕದ ಜತೆ ಫೊಟೋ ತೆಗೆಸಿಕೊಳ್ಳುತ್ತಾರೆ. ಒಂದು ದಿನ ದಿನದ ನಂತರ ಐವತ್ತು ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಾರೆ. ರಾಮ್ ಲೀಲಾದಲ್ಲಿ ಶ್ರೀರಾಮ ಮೋದಿಜೀ ಮುಕವಾಡ ಧರಿಸಿ ಬರುತ್ತಾರಾ ಎಂದು ರಾಹುಲ್ ಕೇಳಿದರು.[ಹಣಕಾಸು ವ್ಯವಸ್ಥೆ ಮೂಳೆ ಮುರಿದ ಪ್ರಧಾನಿ ಮೋದಿ: ರಾಹುಲ್]

ಮೋದಿ ಜೀ ಸ್ವಲ್ಪ ತಪಸ್ಸು ಮಾಡಿ. ಪದ್ಮಾಸನ ಹಾಕಿ. ಜಗತ್ತಿಗೆ ತೋರಿಸಬೇಕಿದೆ: ನಮ್ಮ ಪ್ರಧಾನಿ ತಪಸ್ಸು ಮಾಡ್ತಾರೆ, ಮತ್ತವರು ಯೋಗದ ರಾಯಭಾರಿ ಎಂದು ರಾಹುಲ್ ಹೇಳಿದರು. ಇಡೀ ದೇಶವನ್ನು ಹೆದರಿಸಿಟ್ಟಿದ್ದಾರೆ. ಹೇಳ್ತಾರೆ: ಪೇಟಿಎಂ ಇಲ್ಲವೆ? ಹಾಗಿದ್ದರೆ ಇಲ್ಲಿಂದ ಹೊರಡಿ ಅಂತಾರೆ ಎಂದು ಅವರು ಹೇಳಿದರು.

ಹೇಗೆ ನಿಮಿಷಗಳಲ್ಲಿ ಅಪನಗದೀಕರಣದ ನಿರ್ಧಾರ ತೆಗೆದುಕೊಳ್ತೀರಲ್ಲ ಮೋದೀಜಿ, ಅದೇ ರೀತಿ ಏಕ ಶ್ರೇಣಿ, ಏಕ ಪಿಂಚಣಿ ಬಗ್ಗೆಯೂ ತೀರ್ಮಾನ ಕೈಗೊಳ್ಳಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.

English summary
There was no tri colour flag in RSS HQ till 52 years of independence, they salute to Bhagawa dhwaja said by AICC vice president Rahul gandhi in Congress party workers convention in Rishikesh, Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X