ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ಪರೀಕ್ಷೆಗೆ ಕಾಗದದ ಅಡ್ಮಿಟ್ ಕಾರ್ಡ್ ಇರಲ್ಲ!

By Mahesh
|
Google Oneindia Kannada News

ನವದೆಹಲಿ, ಡಿ.13: ಪ್ರಸಕ್ತ ವರ್ಷದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಯಾವುದೇ ರೀತಿಯ ಪ್ರವೇಶ ಪತ್ರಗಳನ್ನು (ಅಡ್ಮಿಷನ್ ಕಾರ್ಡ್) ವಿತರಣೆ ಮಾಡುವುದಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರಕಟಣೆ ಹೊರಡಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಇನ್ನು ಮುಂದೆ ಅಂತರ್ಜಾಲದಲ್ಲಿ ಇ-ಅಡ್ಮಿಟ್ ಕಾರ್ಡ್‌ಗಳನ್ನು ಪಡೆದು ಬಳಸಬಹುದಾಗಿದೆ.

ಯುಪಿಎಸ್ ಸಿ ವೆಬ್ ಸೈಟ್ ನಿಂದ ಇ -ಅಡ್ಮಿಟ್ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು. ಅದೇ ಪ್ರವೇಶಾತಿ ಪತ್ರವನ್ನು ಪರೀಕ್ಷೆಗೆ ತರಬೇಕು ಎಂದು ಯುಪಿಎಸ್‌ಸಿ ಹೇಳಿದೆ. ಯುಪಿಎಸ್‌ಸಿ ಡಿ.18 ರಿಂದ 23ರವರೆಗೆ ದೇಶದ 23 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಿದೆ. [ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ]

No paper admit cards for civil services main exam: UPSC

ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನಗಳನ್ನು ಈ ಪರೀಕ್ಷೆ ಒಳಗೊಂಡಿರುತ್ತದೆ. ಈ ಮೂಲಕ ಕೇಂದ್ರವು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆಗಳು (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.[ಯುಪಿಎಸ್ಸಿ ಅರ್ಹತಾ ಪರೀಕ್ಷಾ ಫಲಿತಾಂಶ ಪ್ರಕಟ]

ಯುಪಿಎಸ್‌ಸಿ ಪ್ರವೇಶ ಪತ್ರಗಳನ್ನು ಈಗಾಗಲೇ ಅಪ್‌ಲೋಡ್ ಮಾಡಿದ್ದು, www.upsc.gov.in ವೆಬ್ ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕೇಂದ್ರ ಲೋಕಸೇವಾ ಆಯೋಗದ ಪ್ರಕಟಣೆ ತಿಳಿಸಿದೆ. [ಯುಪಿಎಸ್ಸಿ: ರಾಜ್ಯಕ್ಕೆ ಹೆಮ್ಮೆ ತಂದ ಅಭ್ಯರ್ಥಿಗಳು]

ಅಕ್ಟೋಬರ್ 12ರಂದು ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ ಈ ಬಾರಿ 15 ಸಾವಿರ ಮಂದಿ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ದಾಖಲೆಯ 9,45,908 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಹಾಕಿದ್ದದು. ಈ ಪೈಕಿ 4.63 ಲಕ್ಷ ಮಂದಿ ಆಗಸ್ಟ್ 23ರಂದು ಪರೀಕ್ಷೆ ಬರೆದಿದ್ದರು. (ಪಿಟಿಐ)

English summary
No paper admit card will be issued for this year’s civil services main examination, scheduled to begin from Friday, the Union Public Service Commission (UPSC) has said. The candidates will have to download their e-admit cards and take a printout thereof.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X