ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 1 ರಿಂದ ಈ ವಿಮಾನ ನಿಲ್ದಾಣಗಳಲ್ಲಿ ಬ್ಯಾಗೇಜ್ ಸ್ಟಾಂಪಿಂಗ್ ರದ್ದು!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ 7 ನಿಲ್ದಾಣಗಳಲ್ಲಿ ಏಪ್ರಿಲ್ 1 ರಿಂದ ಬ್ಯಾಗೇಜ್ ಸ್ಟಾಪಿಂಗ್ ಇರುವುದಿಲ್ಲ ಎಂದು ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಗುರುವಾರದಂದು ಟ್ವೀಟ್ ಮಾಡಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 30: ಸೆಲ್ಫ್ ಚೆಕ್ ಇನ್ ಹಾಗೂ ಬ್ಯಾಗೇಜ್ ಟ್ಯಾಗ್ ವ್ಯವಸ್ಥೆ ಜಾರಿ ತಂದಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ 7 ನಿಲ್ದಾಣಗಳಲ್ಲಿ ಏಪ್ರಿಲ್ 1 ರಿಂದ ಬ್ಯಾಗೇಜ್ ಸ್ಟಾಪಿಂಗ್ ಇರುವುದಿಲ್ಲ ಎಂದು ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಗುರುವಾರದಂದು ಟ್ವೀಟ್ ಮಾಡಿದ್ದಾರೆ.

ಕಾಮನ್ ಯೂಸ್ ಸೆಲ್ಫ್ ಸರ್ವೀಸ್ ಕಿಯೋಸ್ಕ್(ಸಿಯುಎಸ್ಎಸ್) ನಿಂದ ಬೋರ್ಡಿಂಗ್ ಪಾಸ್ ಹಾಗೂ ಬ್ಯಾಗೇಜ್ ಟ್ಯಾಗ್ ಪಡೆಯುವ ವ್ಯವಸ್ಥೆ ಈಗಾಗಲೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜಾರಿಯಲ್ಲಿದೆ. ಈಗ ಬ್ಯಾಗೇಜ್ ಸ್ಟಾಪಿಂಗ್ ರದ್ದುಗೊಳಿಸಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.[ಕೆಂಪೇಗೌಡ ವಿ. ನಿಲ್ದಾಣದಲ್ಲಿ ಚೆಕ್ ಇನ್ ಸಮಸ್ಯೆ ಇನ್ನಿಲ್ಲ!]

No more hand baggage stamping at 7 airports

ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಅಹಮದಾಬಾದ್, ಬೆಂಗಳೂರು ಹಾಗೂ ಕೊಚ್ಚಿಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.


ಪ್ರಯಾಣಿಕರು ಹಾಗೂ ನಿಲ್ದಾಣಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಬ್ಯಾಗೇಜ್ ಗಳಿಗೆ ಸ್ಟಾಪಿಂಗ್ ವ್ಯವಸ್ಥೆ ರದ್ದುಗೊಂಡಿರುವ ಬಗ್ಗೆ ಪ್ರಯಾಣಿಕರಿಗೆ ಕರಪತ್ರಗಳ ಮೂಲಕ ತಿಳಿಸಲಾಗುತ್ತದೆ. ಪ್ರಯಾಣಿಕ ಸ್ನೇಹಿ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶ ಎಂದು ಸಿಐಎಸ್ ಎಫ್ ಮಹಾ ನಿರ್ದೇಶಕ ಒಪಿ ಸಿಂಗ್ ಹೇಳಿದ್ದಾರೆ.

English summary
Come April 1 and the hassle of stamping and tagging hand baggage will be done away with in at least 7 airports across the country. Civil Aviation minister Ashok Gajapathi Raju took to twitter to announce that there would be no more stamping of hand baggage in 7 airports including Delhi, Mumbai and Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X