ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆ ತಾಯಿ 'ಬಿಜಿನೆಸ್'ಗೆ ಕೇಂದ್ರದ ಕಡಿವಾಣ

|
Google Oneindia Kannada News

ದೆಹಲಿ, ಆಗಸ್ಟ್ 24: ದಶಕದ ಹಿಂದೆಯೇ ಭಾರತವು ಬಾಡಿಗೆ ತಾಯ್ತನದ ವ್ಯವಹಾರಕ್ಕೆ ತೆರೆದುಕೊಂಡಿತು. ಆದರೆ ಈಗ ಈ ರೀತಿ ಬಾಡಿಗೆ ತಾಯಂದಿರ ಮೂಲಕ ಮಗುವನ್ನು ಪಡೆಯಲು ನಿಷೇಧ ಹೇರುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದೆ.

ಸಲಿಂಗಿ ಜೋಡಿಗಳು ಮಕ್ಕಳು ಪಡೆಯಬೇಕು ಎಂದರೂ 'ನಮ್ಮ ತತ್ವಗಳಿಗೆ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ' ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅಷ್ಟೇ ಅಲ್ಲ, ಒಬ್ಬಂಟಿಯಾಗಿರುವವರು, ವಿದೇಶೀಯರೂ ಇನ್ನು ಮುಂದೆ ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುವ ಹಾಗಿಲ್ಲ.[ಬಾಡಿಗೆ ತಾಯ್ತನ: ಅನುಮತಿ ಇನ್ಮುಂದೆ ಕಡ್ಡಾಯ]

pregnant

ದಂಪತಿ ಮದುವೆಯಾಗಿ ಕನಿಷ್ಠ 5 ವರ್ಷ ಆಗಿರಬೇಕು, ಅಂಥವರಿಗೆ ಮಕ್ಕಳಿಲ್ಲ ಅಂದರೆ ಬಾಡಿಗೆ ತಾಯ್ತನದ ಮೂಲಕ ಪಡೆಯಬಹುದು. ಅದೂ ಕೂಡ ಹತ್ತಿರದ ಸಂಬಂಧಿಗಳ ಮೂಲಕ ಮಾತ್ರ. ವಿದೇಶೀಯರು, ಸಾಗರದಾಚೆಗಿನ ಭಾರತೀಯರು, ಸಿಂಗಲ್ ಪೇರೆಂಟ್ಸ್, ಲಿವ್ ಇನ್ ಸಂಬಂಧ ಇರುವು ಜೋಡಿಗಳು ಇನ್ನು ಮುಂದೆ ಬಾಡಿಗೆ ತಾಯಂದಿರಿಂದ ಮಗು ಪಡೆಯಲು ಸಾಧ್ಯವಿಲ್ಲ.

ಎರಡು ಮಕ್ಕಳಾದ ನಂತರ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಶಾರುಖ್ ಖಾನ್ ಹಾಗೂ ಮದುವೆ ಆಗದಿದ್ದರೂ ಇದೇ ಮಾದರಿಯಲ್ಲಿ ಮಗು ಪಡೆದ ತುಷಾರ್ ಕಪೂರ್ ನನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಯಾವ ಹೆಸರನ್ನು ಹೇಳದ ಸುಷ್ಮಾ ಸ್ವರಾಜ್, ಎರಡು ಮಗುವಿದ್ದರೂ ಬಾಡಿಗೆ ತಾಯಂದಿರ ಮೂಲಕ ಮೂರನೇ ಮಗು ಪಡೆದ ಸೆಲೆಬ್ರಿಟಿಗಳಿಗೆ, ತಮ್ಮ ಹೆಂಡತಿ ಹೆರಿಗೆ ನೋವು ಸಹಿಸಲು ಸಾಧ್ಯವಿಲ್ಲ ಎನಿಸಿರಬಹುದು. ಅದಕ್ಕೆ ಬೇರೆಯವರ ಮೂಲಕ ಮಗು ಪಡೆದಿರಬಹುದು ಎಂದರು.[ಮೆಟರ್ನಿಟಿ ಬಿಲ್ ಪ್ರಸವ ಸುಸೂತ್ರ : ಹೆರಿಗೆ ರಜಾ 6 ತಿಂಗಳಿಗೆ ವಿಸ್ತರಣೆ]

ದಂಪತಿ ತಮ್ಮ ಸಂಬಂಧಿಕರಿಂದ ಈ ವಿಚಾರದಲ್ಲಿ ಸಹಾಯ ಪಡೆಯುವವರು ಆಸ್ಪತ್ರೆ ಖರ್ಚು ಮಾತ್ರ ನೀಡಬೇಕು. ಯಾವುದೇ ಬಾಡಿಗೆ ತಾಯ್ತನದ ಕ್ಲಿನಿಕ್ ಗಳಿಗೆ ಅವಕಾಶ ನೀಡಕೂಡದು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಮೇಲೆ ಕಣ್ಣಿಡುವುದಕ್ಕೆ ಹೊಸ ಬೋರ್ಡ್ ವೊಂದನ್ನು ರಚಿಸಲಿದೆ.

ಭಾರತ ಸೇರಿ ಕೆಲವು ದೇಶಗಳು ಹಾಗೂ ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಹಾಗೂ ಎಂಬ್ರ್ಯೋ ಟ್ರಾನ್ಸ್ ಫರ್ ಮೂಲಕ ಜೈವಿಕವಾಗಿ ಮಗು ಪಡೆಯುವುದಕ್ಕೆ ಹಣ ನೀಡಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಾಡಿಗೆ ತಾಯ್ತನ ವರ್ಷಕ್ಕೆ 400 ಮಿಲಿಯನ್ ಡಾಲರ್ ನ ದೊಡ್ಡ ವ್ಯವಹಾರವಾಗಿದೆ. 3 ಸಾವಿರಕ್ಕೂ ಹೆಚ್ಚು ಫರ್ಟಿಲಿಟಿ ಕ್ಲಿನಿಕ್ ಗಳಿವೆ. ಮಕ್ಕಳಿಲ್ಲ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಭಾರತಕ್ಕೆ ಬರ್ತಾರೆ. ಏಕೆಂದರೆ, ಅಮೆರಿಕಾದಲ್ಲಿ ಆಗುವ ಖರ್ಚಿನ ಮೂರನೇ ಒಂದು ಭಾಗವಷ್ಟೇ ಇಲ್ಲಾಗುತ್ತದೆ.

English summary
India, which opened up to commercial surrogacy a decade ago, will ban the hiring of women to carry babies, the government said in a new proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X