ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಅಧಿಕೃತ, ಎನ್ ಡಿಎ ಮೈತ್ರಿಕೊಟದೊಳಗೆ ಜೆಡಿಯು ಸೇರ್ಪಡೆ

|
Google Oneindia Kannada News

ಪಾಟ್ನಾ, ಆಗಸ್ಟ್ 19: ನಿತೀಶ್ ಕುಮಾರ್ ಜೆಡಿಯು ಮತ್ತೆ ಎನ್ ಡಿಎಗೆ ಮರಳಿದೆ. ನಾಲ್ಕು ವರ್ಷಗಳ ಕಾಲ ಎನ್ ಡಿಎ ದೋಸ್ತಿಯಿಂದ ದೂರವಿದ್ದ ನಂತರ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ದೀರ್ಘ ಕಾಲದ ಅಸಮಾಧಾನ ಬಗೆಹರಿದು ಒಂದುಗೂಡಿದ ವಿಚಾರವನ್ನು ಶನಿವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಘೋಷಿಸಲಾಗಿದೆ.

ನಿತೀಶ್ ಅವರು ಅಮಿತ್ ಶಾ ಅವರ ಸೇವಕ: ಕಾಂಗ್ರೆಸ್ನಿತೀಶ್ ಅವರು ಅಮಿತ್ ಶಾ ಅವರ ಸೇವಕ: ಕಾಂಗ್ರೆಸ್

ಕಳೆದ ಎರಡು ದಶಕಗಳಿಂದ ಬಿಜೆಪಿ ಹಾಗೂ ಜೆಡಿಯು ಮಧ್ಯೆ ದೋಸ್ತಿ ಇತ್ತು. ಅದು ಕಳೆದ ಲೋಕಸಭೆ ಚುನಾವಣೆವರೆಗೆ ಗಟ್ಟಿಯಾಗೇ ಇತ್ತು. ಆ ನಂತರ ಆರ್ ಜೆಡಿಯ ಲಾಲೂ ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಜತೆಗೆ ಸೇರಿ ನಿತೀಶ್ ಕುಮಾರ್ 'ಮಹಾಘಟಬಂಧನ್' ಅಂತ ಮಾಡಿಕೊಂಡು, ಎನ್ ಡಿಎನಿಂದ ಹೊರಬಂದಿದ್ದರು.

Nitish Kumar's JDU To Join BJP-Led NDA

ಆದರೆ, ಕಳೆದ ತಿಂಗಳು ಎರಡೂ ಪಕ್ಷದ ಸ್ನೇಹ ಮುರಿದುಕೊಂಡು ಮತ್ತೆ ಬಿಜೆಪಿ ಜತೆಗೆ ಸೇರಿ ಬಿಹಾರದಲ್ಲಿ ಸರಕಾರ ರಚಿಸಿದ್ದರು. ಲಾಲೂ ಪ್ರಸಾದ್ ಯಾದವ್ ಮಗ, ಬಿಹಾರದ ಉಪಮುಖ್ಯಮಂತ್ರಿ ಆಗಿದ್ದ ತೇಜಸ್ವಿ ಯಾದವ್ ಮೇಲೆ ಭ್ರಷ್ಟಾಚಾರದ ಆರೋಪ ಬಂದಿತ್ತು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿತೀಶ್ ಸೂಚಿಸಿದರೂ ಒಪ್ಪಲಿಲ್ಲ.

ಎನ್.ಡಿ.ಎ ಸಂಚಾಲಕರಾಗಿ ಮತ್ತೆ ನಿತೀಶ್ ಕುಮಾರ್?ಎನ್.ಡಿ.ಎ ಸಂಚಾಲಕರಾಗಿ ಮತ್ತೆ ನಿತೀಶ್ ಕುಮಾರ್?

ಆಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್, ಮಹಾಘಟಬಂಧನ್ ನಿಂದ ಹೊರಬಂದು, ಬಿಜೆಪಿ ಜತೆ ಸೇರಿ ಅಧಿಕಾರದ ಗದ್ದುಗೆ ಏರಿದರು. ಆಗಸ್ಟ್ ಹತ್ತೊಂಬತ್ತರ ಶನಿವಾರ ಜೆಡಿಯು ಅಧಿಕೃತವಾಗಿ ಎನ್ ಡಿಎ ಮೈತ್ರಿಯೊಳಗೆ ಬಂದಂತಾಗಿದೆ.

English summary
Nitish Kumar's JDU is back with the BJP-led NDA after nearly 4 years of separation. A patch-up between the long-lost partners was announced at the party's national executive meeting on Saturday morning in Patna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X