ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾದಿ ತಪ್ಪಿದ ನಿರ್ಭಯ್ ಕ್ಷಿಪಣಿ, ಪರೀಕ್ಷೆಯಲ್ಲಿ ಫೇಲ್!

By ಡಾ. ಅನಂತ್ ಕೃಷ್ಣನ್
|
Google Oneindia Kannada News

ಬೆಂಗಳೂರು, ಅ.16: ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ತಯಾರಾದ ಕ್ಷಿಪಣಿ(sub-sonic cruise missile) ನಿರ್ಭಯ ಪರೀಕ್ಷಾರ್ಥ ಹಾರಾಟದಲ್ಲಿ ಫೇಲ್ ಆಗಿದೆ. ನಿರ್ದೇಶಿತ ಹಾದಿ ಬಿಟ್ಟು ಕ್ಷಿಪಣಿ ಬೇರೆ ಪಥ ಹಿಡಿದಿದ್ದರಿಂದ ಪರೀಕ್ಷೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ.

ಒರಿಸ್ಸಾದ ಚಂಡಿಪುರದ ಕೇಂದ್ರದಿಂದ ಈ ಹಿಂದೆ ನಿರ್ಭಯ್ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಅದರೆ, ಈ ಬಾರಿ ಶುಕ್ರವಾರ ಬೆಳಗ್ಗೆ ಹಾರಿ ಬಿಡಲಾದ ಕ್ಷಿಪಣಿಯನ್ನು ಮಧ್ಯದಲ್ಲೇ ತಡೆ ಹಿಡಿಯಲಾಯಿತು ಎಂದು ರಕ್ಷಣಾ ಇಲಾಖೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್ ಡಿಒ) ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. [ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ]

Nirbhay missile fails

ಒರಿಸ್ಸಾದ ಬಾಲಾಸೂರು ಬಳಿಯ ಚಂಡೀಪುರದಲ್ಲಿ ಸಂಯೋಜಿತ ಪರೀಕ್ಷಾ ವಲಯದಲ್ಲಿ ಕ್ಷಿಪಣಿ ಪರೀಕ್ಷೆ ಆರಂಭಗೊಂಡ 10ನಿಮಿಷದಲ್ಲೇ ರದ್ದು ಪಡಿಸಲಾಯಿತು. [ಅಂತರಿಕ್ಷದಲ್ಲಿ ಒಂದು ರೋಮಾಂಚನಕಾರಿ ರೇಸ್!]

ಸುಖೋಯ್ ನಿಂದ ಚೇಸ್: ಈ ರೀತಿ ಕ್ಷಿಪಣಿ ಪರೀಕ್ಷೆ ಇದ್ದಾಗ ಕ್ಷಿಪಣಿಯ ವೇಗ ಅರಿಯಲು ಭಾರತೀಯ ವಾಯುಸೇನೆಯ ಸುಖೋಯ್ ಅಥವಾ ಜಾಗ್ವಾರ್ ಯುದ್ಧ ವಿಮಾನಗಳು ಕ್ಷಿಪಣಿಯನ್ನು ಚೇಸ್ ಮಾಡುತ್ತವೆ.

Nirbhay missile fails

ಈ ಹಿಂದೆ ನಡೆದಿದ್ದ ಕ್ಷಿಪಣಿ vs ಯುದ್ಧ ವಿಮಾನ ಚೇಸ್ ನಲ್ಲಿ ಜಾಗ್ವಾರ್ ಯುದ್ಧ ವಿಮಾನ ತನ್ನ ಶಕ್ತಿ ಪ್ರದರ್ಶನ ಮೂಲಕ ನಿರ್ಭಯ ಕ್ಷಿಪಣಿ ಹಿಂದಿಕ್ಕಿ ಸೈ ಎನಿಸಿಕೊಂಡಿತ್ತು. ಈ ಬಾರಿ ಸುಖೋಯ್ ಯುದ್ಧ ವಿಮಾನ ಬಳಸಲಾಗಿತ್ತು.

ಡಿಆರ್ ಡಿಒ ನಿರ್ದೇಶಕ ಡಾ. ಕೆ.ತಮೀಳ್ ಮಣಿ ಭಾರತೀಯ ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕ್ಷಿಪಣಿ ಹಿಂದಿಕ್ಕುವ ಪ್ರಯತ್ನದಲ್ಲಿ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಲಾಗಿದೆ. ನಿರ್ಭಯದ ಶಕ್ತಿ ಅರಿಯಲು ಸೇನೆ ಸೂಕ್ತ ರೀತಿಯಲ್ಲಿ ನೆರವು ನೀಡಿತು. ಅಲ್ಲದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ತಮಿಳ್ ಮಣಿ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
The much-awaited test of India's sub-sonic cruise missile failed today(Oct.16). Defence Research and Development Organisation (DRDO) told OneIndia that the missile that was launched today morning had to be terminated mid-way after it failed to stick to the designated trajectory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X