ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಮಲ್ಲಪ್ಪುರಂನಲ್ಲಿ ಸ್ಫೋಟ, ಎನ್ ಐಎನಿಂದ ತನಿಖೆ

ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೈಗೆತ್ತಿಕೊಂಡಿದೆ

By Mahesh
|
Google Oneindia Kannada News

ತಿರುವನಂತಪುರಂ, ನವೆಂಬರ್ 02: ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೈಗೆತ್ತಿಕೊಂಡಿದೆ.

ಕೆಲ ತಿಂಗಳುಗಳ ಹಿಂದೆ ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದ ಕೋರ್ಟ್ ಆವರಣಗಳಲ್ಲಿ ಇದೇ ರೀತಿ ಸ್ಫೋಟಗಳು ಸಂಭವಿಸಿತ್ತು. ಮಲ್ಲಪ್ಪುರಂನ ಕಲೆಕ್ಟರೇಟ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಶೆವರ್ಲೆ ಕಾರಿನಲ್ಲಿ ಟಿಫಿನ ಬಾಕ್ಸ್ ಬಾಂಬ್ ಇಟ್ಟು ಮಂಗಳವಾರ ಸ್ಫೋಟಿಸಲಾಗಿತ್ತು.. ಈ ಸ್ಫೋಟದಿಂದ ಮುರ್ನಾಲ್ಕು ಕಾರುಗಳು ಜಖಂಗೊಂಡಿದ್ದವು. [ಕೇರಳ: ಮಲಪ್ಪುರಂ ಕಲೆಕ್ಟರೇಟ್ ಕಚೇರಿ ಬಳಿ ಸ್ಫೋಟ!]

NIA to probe court blast at Mallapuram

ಕಳೆದ ಜೂನ್ ತಿಂಗಳಿನಲ್ಲಿ ಕೊಲ್ಲಂ ಕಲೆಕ್ಟರೇಟ್ ಕಚೇರಿ ಆವರಣದಲ್ಲೂ ಇಂಥದ್ದೇ ಸ್ಫೋಟ ಸಂಭವಿಸಿತ್ತು. ಶೆವರ್ಲೆ ಕಾರಿನ ಮಾಲೀಕ ಜಿಲ್ಲಾ ಮೆಡಿಕಲ್ ಅಧಿಕಾರಿ ರೆಜಿ ಕುಳಿಯೆಲ್ಲಿಲ್ ಎಂದು ಗುರುತಿಸಲಾಗಿದೆ.

ಕಾರಿನ ಬಳಿ ಸಿಕ್ಕ ಪತ್ರದಿಂದ ಇದು Base Movement ಸಂಘಟನೆಯ ಕೃತ್ಯ ಎಂದು ಶಂಕಿಸಲಾಗಿದೆ. ಪತ್ರದಲ್ಲಿ ಭಾರತದ ಭೂಪಟ, ಮೃತ ಉಗ್ರ ಒಸಾಮಾ ಬಿನ್ ಲಾಡೆನ್ ಚಿತ್ರವಿದೆ. ಪತ್ರದ ಕೆಳಗೆ Base Movement ಸಹಿ ಇದೆ.

ಮೈಸೂರಿನ ಕೋರ್ಟ್ ಸ್ಫೋಟ : ಮೈಸೂರಿನ ಕೋರ್ಟ್ ಆವರಣದಲ್ಲಿದ್ದ ಶೌಚಾಲಯದಲ್ಲಿ ಇದೇ ರೀತಿ ಸ್ಫೋಟ ಸಂಭವಿಸಿತ್ತು. ಚಿತ್ತೂರು ಹಾಗೂ ಕೊಲ್ಲಂ ಕೋರ್ಟ್ ಆವರಣಗಳಲ್ಲೂ ಸ್ಫೋಟ ನಡೆದಿತ್ತು. ಚಿತ್ತೂರು ಸ್ಫೋಟದ ನಂತರ ಬೇಸ್ ಮೂವ್ ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತ್ತು.

ಆದರೆ, ಮಲ್ಲಪುರಂ ಪೊಲೀಸರ ಪ್ರಕಾರ ಇದು ಅಲ್ ಉಮ್ಮಾ ಸಂಘಟನೆಯ ಕೃತ್ಯ ಎನ್ನಲಾಗಿದೆ. ಹಲವಾರು ಸ್ಫೋಟ ಪ್ರಕರಣಗಳಲ್ಲಿ ಈ ಸಂಘಟನೆ ಗುರುತಿಸಿಕೊಂಡಿದೆ. ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಬಳಿ ಸ್ಫೋಟಕ್ಕೂ ಇದೇ ಸಂಘಟನೆ ಕಾರಣ. ಆದರೆ, ಆ ಘಟನೆ ನಂತರ ಸಂಘಟನೆಯ ಹೆಸರು ಬದಲಾಯಿಸಿಕೊಳ್ಳಲಾಗಿದ್ದು, ಅಲ್ ಉಮ್ಮಾ ಸಂಘಟನೆಯೇ ಈಗ ಬೇಸ್ ಮೂವ್ ಮೆಂಟ್ ಎಂದಾಗಿದೆ ಎಂಬ ಮಾಹಿತಿ ಸಿಕ್ಕಿದೆ.

English summary
The National Investigation Agency will probe the explosion that took place outside the court in Mallapuram, Kerala on Tuesday(November 01). The blast was claimed by a group called the Base Movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X