ಉಗ್ರ ಮೊಹಮದ್ ನವೀದ್ ವಿರುದ್ಧ ಚಾರ್ಜ್ ಶೀಟ್

Written by: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 29 : ಜಮ್ಮು-ಕಾಶ್ಮೀರದ ಉದಾಮ್‌ಪುರದಲ್ಲಿ ನಡೆದ ಉಗ್ರರ ದಾಳಿ ಪ್ರಕರಣದ ಕುರಿತು ಎನ್‌ಐಎ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದೆ. ಜೀವಂತವಾಗಿ ಸೆರೆ ಸಿಕ್ಕ ಉಗ್ರ ಮೊಹಮದ್ ನವೀದ್ ದಾಳಿಯ ಪ್ರಮುಖ ಆರೋಪಿ ಎಂದು ಎನ್‌ಐಎ ಹೇಳಿದ್ದು, ಇತರ 8 ಜನರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

2015ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರದಲ್ಲಿ ಬಿಎಸ್‌ಎಫ್ ಶಿಬಿರದ ಮೇಲೆ ಲಷ್ಕರ್ ಎ ತೋಯ್ಬಾ ಉಗ್ರರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದರು. ಮೊಹಮದ್ ನವೀದ್ ಮತ್ತು ಆತನ ಸಹಚರನನ್ನು ಸ್ಥಳೀಯರ ನೆರವಿನಿಂದಾಗಿ ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. [ಕಾಶ್ಮೀರದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಉಗ್ರ]

mohammad naved

ರಾಷ್ಟ್ರೀಯ ತನಿಖಾ ದಳ ಈ ಉಗ್ರರ ದಾಳಿಯ ತನಿಖೆ ನಡೆಸುತ್ತಿದ್ದು ಗುರುವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ದಾಳಿ ಪ್ರಕರಣದಲ್ಲಿ ಮೊಹಮದ್ ನವೀದ್ ಮೊದಲ ಆರೋಪಿಯಾಗಿದ್ದು, ಇತರ 8 ಜನರು ಆರೋಪಿಗಳು ಎನ್‌ಐಎ ಉಲ್ಲೇಖಿಸಿದೆ. ದಾಳಿಯ ಬಗ್ಗೆ ತನಿಖೆ ಮುಂದುವರೆಯುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದೆ. ['ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ']

ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್ ಎ ತೋಯ್ಬಾ ಈ ದಾಳಿ ನಡೆಸಿದೆ ಎಂದು ಎನ್‌ಐಎ ಚಾರ್ಜ್ ಶೀಟ್‌ನಲ್ಲಿ ಹೇಳಿದೆ. ಮೊಹಮದ್ ನವೀದ್ ಮತ್ತು ಇತರ ಉಗ್ರರು ಈ ದಾಳಿಯನ್ನು ನಡೆಸಲು ಗಡಿನುಸುಳಿ ಬಂದಿದ್ದರು. ಕಾಶ್ಮೀರದ ಸ್ಥಳೀಯರು ಇವರಿಗೆ ನೆರವು ನೀಡಿದ್ದರು ಎಂದು ಎನ್‌ಐಎ ಹೇಳಿದೆ. [ಸೆರೆಸಿಕ್ಕ ಉಗ್ರ ನವೀದ್ ಯಾರು?]

ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀದ್ ಹಲವಾರು ಮಾಹಿತಿಗಳನ್ನು ನೀಡಿದ್ದಾನೆ. ಜಮ್ಮ ಮತ್ತು ಕಾಶ್ಮೀರದಲ್ಲಿ ದಾಳಿಗೆ ಸಹಕಾರ ನೀಡಿದ ಹಲವು ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

English summary
The National Investigating Agency has filed a charge sheet in the Udhampur terror attack case. The NIA in its charge sheet has named Mohammad Naved as the prime accused. The charge-sheet also names 8 others as accused in the case.
Please Wait while comments are loading...