ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ನವೀದ್‌ಗೆ ಸಹಾಯ ಮಾಡಿದ್ದು ಲಾರಿ ಚಾಲಕ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 21 : ಉಧಾಂಪುರದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಎನ್‌ಐಎ ಬಂಧಿಸಿದೆ. ಉಗ್ರ ಮೊಹಮದ್ ನವೀದ್ ಮತ್ತು ಇತರ ಉಗ್ರರು ಇವರ ಲಾರಿ ಮೂಲಕವೇ ಉಧಾಂಪುರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಭಯೋತ್ಪಾದಕ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಉಗ್ರ ಮೊಹಮ್ಮದ್ ನವೀದ್‌ನನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಕರೆತಂದಿದೆ. ಉಗ್ರ ಭಾರತಕ್ಕೆ ನುಸುಳಿರುವ ಮಾರ್ಗದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ನವೀದ್ ಕರೆತರಲಾಗಿದೆ. [ನವೀದ್ ಲಷ್ಕರ್ ಸೇರಿದ್ದು ಹೇಗೆ?]

mohammad naved

ವಿಚಾರಣೆ ವೇಳೆ ನವೀದ್ ನೀಡಿದ ಮಾಹತಿ ಅನ್ವಯ ಇಂದು ಸಂಜೆ ಲಾರಿ ಚಾಲಕನನ್ನು ಎನ್‌ಐಎ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ. ಲಾರಿ ಚಾಲಕ ಗೊತ್ತಿಲ್ಲದೆಯೇ? ಅಥವ ಗೊತ್ತಿದ್ದೋ ಉಗ್ರರಿಗೆ ಸಹಾಯ ಮಾಡಿದ್ದಾನೆ. ಆದ್ದರಿಂದ, ಆತನ ವಿಚಾರಣೆ ನಡೆಸಲಾಗುತ್ತಿದೆ. [ನವೀದ್ ಸಹಚರರು ನಿಮ್ಮ ಊರಿನಲ್ಲಿದ್ದಾರೆಯೇ?]

ಉಧಾಂಪುರಕ್ಕೆ ಮೂವರು ಉಗ್ರರು ಲಾರಿ ಮೂಲಕ ಆಗಮಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಆದ್ದರಿಂದ, ಕಳೆದ ಎರಡು ವಾರಗಳಿಂದ ಲಾರಿ ಚಾಲಕನಿಗಾಗಿ ಎನ್‌ಐಎ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಹುಡುಕಾಟ ನಡೆಸಿದ್ದರು.

ಉಗ್ರ ನವೀದ್ ವಿಚಾರಣೆ ಮತ್ತು ಇದುವರೆಗೆ ಆಗಿರುವ ತನಿಖೆಯ ಪ್ರಗತಿಯ ವಿವರಗಳನ್ನು ಎನ್‌ಐಎ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ಹಂಚಿಕೊಳ್ಳಲಿದೆ. ಪಾಕಿಸ್ತಾನದಿಂದ ಆಗಮಿಸುವ ಅಧಿಕಾರಿಗಳ ಜೊತೆ ಧೋವಲ್ ಆ.24ರಂದು ಮಾತುಕತೆ ನಡೆಸಬೇಕಾಗಿದೆ.

ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ನವೀದ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇಬ್ಬರು ಉಗ್ರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದರು.

English summary
The National Investigating Agency has arrested a truck driver who had allegedly helped Mohammad Naved an accused in the Udhampur attack. NIA says that, truck driver had transported Naved and his accomplice to Udhampur where the attack was carried out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X