ಉಪ್ರ ಮುಖ್ಯಮಂತ್ರಿ ಯಾರೆಂದು ತಿಳಿಯಲು ಸಂಜೆವರೆಗೆ ತಡೀರಿ: ನಾಯ್ಡು

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 18: ಮಾಧ್ಯಮಗಳಲ್ಲಿ ಬರುತ್ತಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಆಯ್ಕೆ ಹೆಸರು ಮಾಧ್ಯಮಗಳ ಊಹೆ ಅಷ್ಟೇ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶನಿವಾರ ಸಂಜೆ 4ರವರೆಗೆ ಕಾಯಿರಿ, ಆ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಯಾರು ಎಂಬುದು ಗೊತ್ತಾಗುತ್ತದೆ ಎಂದು ನಾಯ್ಡು ಮಾಧ್ಯಮದವರಿಗೆ ಶನಿವಾರ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಬಹಳ ಹೆಸರುಗಳು ಕೇಳಿಬರುತ್ತಿವೆ. ಇವೆಲ್ಲ ತಪ್ಪು. ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಹೆಸರು ಘೋಷಣೆ ಮಾಡುತ್ತೀವಿ ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಲಖನೌದಲ್ಲಿ ಸಂಜೆ 4ಕ್ಕೆ ನಡೆಯಲಿದೆ. ಆ ಸಭೆಯ ಬಳಿಕ ಪಕ್ಷದ ನಾಯಕನ ಹೆಸರನ್ನು ಘೋಷಣೆ ಮಾಡಲಾಗುತ್ತದೆ.[ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಮನೋಜ್ ಸಿನ್ಹಾ!]

Next UP CM? Wait till 4 pm says Naidu

ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರ ಹೆಸರು ಕೇಳಿಬರುತ್ತಿದೆ. ಆದರೆ ಮನೋಜ್ ಸಿನ್ಹಾ ಹೆಸರು ಬಹುತೇಕ ಅಂತಿಮವಾಗಿದೆ. ಅವರೇ ಮುಖ್ಯಮಂತ್ರಿ ಎಂದು ಹಲವು ಮೂಲಗಳಿಂದ ತಿಳಿದುಬಂದಿದೆ. ಶನಿವಾರ ಬೆಳಗ್ಗೆಯಿಂದ ಈ ಬಗ್ಗೆ ಹಲವು ಸೂಚನೆಗಳನ್ನು ಸಿನ್ಹಾ ಅವರು ಕೊಟ್ಟಿದ್ದಾರೆ.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]

ವಾರಣಾಸಿಯ ಎರಡು ದೇವಾಲಯಕ್ಕೆ ಅವರು ಭೇಟಿ ನೀಡಿದ್ದಾರೆ. ಆದರೆ ತಮ್ಮ ಹೆಸರು ಸಿಎಂ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವುದನ್ನು ಸಿನ್ಹಾ ನಿರಾಕರಿಸಿದ್ದಾರೆ.

English summary
All that you are reading in the media about the next Uttar Pradesh Chief Minister is just speculation, Union Minister, Venkaiah Naidu said. Wait till 4 pm and you will get to know who the next Chief Minister of UP is Naidu also told reporters.
Please Wait while comments are loading...