ರಾಷ್ಟ್ರಪತಿ ಚುನಾವಣೆ, ಸೋನಿಯಾ ಗಾಂಧಿ ಜತೆ ಬಿಜೆಪಿ ನಾಯಕರ ಚರ್ಚೆ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜೂನ್ 14: ಮುಂದಿನ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಸಂಜೆ ಸೋನಿಯಾ ಗಾಂಧಿಯವರನ್ನು ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಇಂದು ಸಂಜೆ ವಿಪಕ್ಷಗಳ ಸಭೆ ನಡೆಯಲಿದ್ದು ಈ ಸಭೆಯ ನಂತರ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಮೋದಿಯಿಂದ 'ಮೂಲ ಭಾರತದ ಕಲ್ಪನೆ'ಯನ್ನು ರಕ್ಷಿಸಬೇಕಿದೆ - ಸೋನಿಯಾ

 Next President of India: Rajnath, Naidu to meet Sonia Gandhi

ಈಗಾಗಲೆ ಎನ್ಡಿಎ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚುನಾವಣಾ ಸಮಿತಿಯೊಂದನ್ನು ರಚನೆ ಮಾಡಿದೆ. ಈಗಾಗಲೇ ವಿಪಕ್ಷಗಳು ಸರ್ವಸಮ್ಮತ ಅ಻ಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಬೇಡಿಕೆ ಮುಂದಿಟ್ಟಿವೆ.

ಮತ್ತೊಂದು ಹಗರಣ ಬಯಲಿಗೆಳೆದ ಅರ್ನಬ್: ಈ ಬಾರಿ ಸೋನಿಯಾ ಅಳಿಯ

ಇಲ್ಲಿಯವರೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಜೂನ್ 23ರಂದು ಬಿಜೆಪಿ ಕಡೆಯಿಂದ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಜುಲೈ 20ರಂದು ಮತ ಎಣಿಕೆ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajnath SIngh and Venkaiah Naidu will meet with Sonia Gandhi to hold discussions on a candidate for the next President of India. The meeting is expected to held after the opposition meets later today.
Please Wait while comments are loading...