ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹತ್ತು ಮಂದಿಯಲ್ಲಿ ಯಾರಾದಾರೂ ಆಗಬಹುದೇ ರಾಷ್ಟ್ರಪತಿ!

By ವಿಕಾಸ್ ನಂಜಪ್ಪ
|
Google Oneindia Kannada News

ಭಾರತದ ಮುಂದಿನ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಎನ್ ಡಿಎ ಹಾಗೂ ಯುಪಿಎ ಎರಡೂ ಗುಂಪಿನಿಂದಲೂ ತುರುಸಿನ ಚಟುವಟಿಕೆಗಳು ಶುರುವಾಗಿವೆ. ಇನ್ನು ಬಿಜೆಪಿ ಆಯ್ಕೆ ಮಾಡುವ ಅಭ್ಯರ್ಥಿ ರಾಷ್ಟ್ರಪತಿ ಹುದ್ದೆಗೆ ಏರುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಪ್ರಶ್ನೆ ಅಂತ ಇರೋದು, ಯಾರು-ಯಾರು ಮುಂದಿನ ರಾಷ್ಟ್ರಪತಿ?

ಕಳೆದ ಕೆಲ ತಿಂಗಳಿನಿಂದ ಹಲವು ಹೆಸರುಗಳು ಗಿರಕಿ ಹೊಡೆಯುತ್ತಿವೆ. ಅದರಲ್ಲಿ ನಟ ರಜನಿಕಾಂತ್ ಹೆಸರು ಸಹ ಇದೆ. ಇದೀಗ ಹೊಸದಾಗಿ ಸೇರ್ಪಡೆಯಾಗಿರುವುದು ಇ ಶ್ರೀಧರನ್. ಈಗ ಯಾವೆಲ್ಲ ಹೆಸರು ಗಿರಗಿಟ್ಲೆ ಸುತ್ತುತ್ತಿವೆ, ಅವೆಲ್ಲವೂ ಕೇವಲ ಊಹಾಪೋಹಾ ಎಂದು ಒಂದೇ ಮಾತಿನಲ್ಲಿ ನಿವಾಳಿಸಿ ಬಿಡುತ್ತವೆ ಬಿಜೆಪಿ ಮೂಲಗಳು.

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ 'ಎಲೆಕ್ಷನ್ ಕಿಂಗ್'ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ 'ಎಲೆಕ್ಷನ್ ಕಿಂಗ್'

ಜೂನ್ ಇಪ್ಪತ್ಮೂರರಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವವರೆಗೆ ಮಾಧ್ಯಮಗಳು ಅವರನ್ ಬಿಟ್ಟು, ಇವರನ್ ಬಿಟ್ಟು ಅವರ್ಯಾರು ಎಂದು ಸುದ್ದಿ ಮಾಡುವುದನ್ನಂತೂ ನಿಲ್ಲಿಸೋದಿಲ್ಲ. ಆದರೆ ಬಿಜೆಪಿ ಪಕ್ಷದಿಂದಲೇ ಅಂದರೆ ಪಕ್ಷಕ್ಕೆ ಸೇರಿದವರೊಬ್ಬರು ರಾಷ್ಟ್ರಪತಿ ಆಗೋದು ನಿಕ್ಕಿ. ಅದರಲ್ಲಿ ಯಾವ ಅನುಮಾನವೂ ಇಲ್ಲ.

ರಾಷ್ಟ್ರಪತಿ ಆಯ್ಕೆಗೆ ಬಿಜೆಪಿಯಿಂದ ಬ್ರಾಹ್ಮಣ-ದಲಿತ ಸಮೀಕರಣರಾಷ್ಟ್ರಪತಿ ಆಯ್ಕೆಗೆ ಬಿಜೆಪಿಯಿಂದ ಬ್ರಾಹ್ಮಣ-ದಲಿತ ಸಮೀಕರಣ

ಏಕೆಂದರೆ ಸ್ವಾತಂತ್ರ್ಯಾ ನಂತರದಲ್ಲಿ ಬಿಜೆಪಿ ಇಂಥ ದೊಡ್ಡ ಬಹುಮತ ಪಡೆದು, ಅವಕಾಶವನ್ನು ಅಷ್ಟು ಸುಲಭಕ್ಕೆ ಕೈ ಚೆಲ್ಲುವುದಿಲ್ಲ. ಆದ್ದರಿಂದ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಕೇಳಿಬರುತ್ತಿರುವ ಹೆಸರುಗಳ ಬಗ್ಗೆ ಗಮನ ಹರಿಸೋಣ.

ಸುಮಿತ್ರಾ ಮಹಾಜನ್

ಸುಮಿತ್ರಾ ಮಹಾಜನ್

ಹಲವರು ಹೇಳುವ ಪ್ರಕಾರ ಸುಮಿತ್ರಾ ಮಹಾಜನ್ ಬಿಜೆಪಿಯ ಆಯ್ಕೆ ಅಂತಲೇ. ಮಧ್ಯಪ್ರದೇಶದಿಂದ ಆಯ್ಕೆಯಾದ ಸಂಸದೆ, ಸದ್ಯಕ್ಕೆ ಲೋಕಸಭೆಯ ಸ್ಪೀಕರ್ ಆಗಿದ್ದಾರೆ.

ದ್ರೌಪದಿ ಮುರ್ಮು

ದ್ರೌಪದಿ ಮುರ್ಮು

ಈ ಸಾಧ್ಯತೆಯನ್ನು ಮೊದಲಿಗೆ ಬಯಲು ಮಾಡಿದ್ದು ಒನ್ ಇಂಡಿಯಾ. ಜಾರ್ಖಂಡ್ ನ ರಾಜ್ಯಪಾಲೆ, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಆದಂತೆ ಆಗುತ್ತದೆ ಎಂಬುದನ್ನು ತಿಳಿಸಲಾಗಿತ್ತು.

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರು ನಲವತ್ತೆಂಟು ಗಂಟೆಗೆ ಮುಂಚೆಯಷ್ಟೇ ಚಾಲ್ತಿಗೆ ಬಂದಿದೆ. ಬಿಜೆ ಹಾಗೂ ಆರೆಸ್ಸೆಸ್ ಎರಡೂ ಕಡೆಯಿಂದ ಸುಷ್ಮಾಗೆ ಬೆಂಬಲವಿದೆ. ಅನಾರೋಗ್ಯದ ಕಾರಣದಿಂದ ಆಕೆಗೆ ಸಚಿವೆಯಾಗಿ ಮುಂದುವರಿಯುವುದು ಕಷ್ಟ. ಆದ್ದರಿಂದ ರೈಸಿನಾ ಹಿಲ್ ನಲ್ಲಿ ಪ್ರತಿಷ್ಠಾಪನೆ ಆಗುವ ಸಾಧ್ಯತೆ ಹೆಚ್ಚಿದೆ.

ಕರಿಯ ಮುಂಡಾ

ಕರಿಯ ಮುಂಡಾ

ಲೋಕಸಭೆಯ ಮಾಜಿ ಡೆಪ್ಯೂಟಿ ಸ್ಪೀಕರ್ ಮತ್ತು ಜಾರ್ಖಂಡ್ ಬುಡಕಟ್ಟು ಸಮುದಾಯದ ನಾಯಕ ಕರಿಯ ಮುಂಡಾ ಹೆಸರು ಸಹ ಗಿರಕಿ ಹೊಡೆಯುತ್ತಿದೆ. ಇವರು ಜಾರ್ಖಂಡ್ ನ ಖುಂಟಿಯಲ್ಲಿ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.

ಥಾವರ್ ಚಂದ್ ಗೆಹ್ಲೋಟ್

ಥಾವರ್ ಚಂದ್ ಗೆಹ್ಲೋಟ್

ಕಳೆದ ವಾರ ಹರಿದಾಡಿದ ವದಂತಿ ಪ್ರಕಾರ ಗೆಹ್ಲೋಟ್ ಅವರು ಬಿಜೆಪಿಯ ಆಯ್ಕೆ ಎಂದಾಗಿತ್ತು. ಕೇಂದ್ರ ಸಚಿವ ಹಾಗೂ ದಲಿತ ಮುಖಂಡ ಗೆಹ್ಲೋಟ್ ಅವರಿಗೆ ಆರೆಸ್ಸೆಸ್ ಬೆಂಬಲ ಕೂಡ ಇದೆ. ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ. ಅದೇನೆಂದರೆ, ಗೆಹ್ಲೋಟ್ ಉಪರಾಷ್ಟ್ರಪತಿ ಆದರೂ ಆಗಬಹುದು.

ರಜನಿಕಾಂತ್

ರಜನಿಕಾಂತ್

ತನ್ನೆಡೆಗೆ ಗುರಿ ಮಾಡಿಕೊಂಡು ಬರುವ ಗುಂಡನ್ನೇ ಹಲ್ಲಿನಿಂದ ಎರಡು ತುಂಡು ಮಾಡುವ ಭಾರತೀಯ ಸಿನಿಮಾದ ಸೂಪರ್ ಸ್ಟಾರ್ ರಜನಿಕಾಂತ್ ಹೆಸರು ಕೇಳಿಬಂದಿದೆ. ಈ ಆಯ್ಕೆ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ಏಕೆಂದರೆ ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ರಜನಿಯನ್ನು ಆಯ್ಕೆ ಮಾಡಬಹುದು ಎಂಬುದು ಸುದ್ದಿ.

ಮೀರಾ ಕುಮಾರ್

ಮೀರಾ ಕುಮಾರ್

ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಹೆಸರು ಕೂಡ ಗಿರಗಿಟ್ಲೆ ಆಡುತ್ತಿದ್ದು, ಆಕೆ ಹೆಸರನ್ನು ಸೂಚಿಸಿರುವುದು ಪ್ರತಿಪಕ್ಷಗಳು.

ಇ ಶ್ರೀಧರನ್

ಇ ಶ್ರೀಧರನ್

ಇದೀಗ ಈ ಹೆಸರು ಅಚ್ಚರಿಯಾಗಿ ಕಾಣುತ್ತಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ 'ಮೆಟ್ರೋ ಮ್ಯಾನ್' ಶ್ರೀಧರನ್ ಎ ಡಿಎ ಆಯ್ಕೆ. ಇದು ನರೇಂದ್ರ ಮೋದಿಯವರ ಅಚ್ಚರಿಯ ಆಯ್ಕೆ.

ಗೋಪಾಲಕೃಷ್ಣ ಗಾಂಧಿ

ಗೋಪಾಲಕೃಷ್ಣ ಗಾಂಧಿ

ಗಾಂಧೀಜಿ ಮೊಮ್ಮಗ, ಪಶ್ಚಿಮ ಬಂಗಾಲದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಪ್ರತಿಪಕ್ಷಗಳು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ. ಇದು ಬಹುತೇಕ ಖಚಿತ ಕೂಡ ಆಗಿದೆ.

ಶರದ್ ಯಾದವ್

ಶರದ್ ಯಾದವ್

ಜೆಡಿಯುನ ಶರದ್ ಯಾದವ್ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಎಂದು ಹೆಸರು ಓಡಾಡುತ್ತಿದೆ. ಆದರೆ ನಾನು ಆ ರೇಸ್ ನಲ್ಲಿ ಇಲ್ಲ ಎಂದು ಸ್ವತಃ ಯಾದವ್ ಹೇಳಿದ್ದಾರೆ.

English summary
The point is that the BJP has such a large majority for the first time after independence. Why will the party let go of the opportunity. Meanwhile let us see the names doing the rounds to be elected as the Next President of India in the Presidential elections 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X