ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ : ದೇಶದ ಘಟನಾವಳಿಗಳ ಮೇಲೆ ಪಕ್ಷಿನೋಟ

By Kiran B Hegde
|
Google Oneindia Kannada News

ಬೆಂಗಳೂರು, ಜ. 29: ದೇಶದೆಲ್ಲೆಡೆ ಗುರುವಾರ ನಡೆದ ವಿವಿಧ ಕಾರ್ಯಕ್ರಮಗಳ ಸುದ್ದಿಗಳ ಚಿತ್ರ ಸಹಿತ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ಉಗ್ರರಿಂದ ಹತರಾದ ಸೇನಾಧಿಕಾರಿ ಎಂ.ಎನ್. ರಾಯ್ ಅವರಿಗೆ ಪುತ್ರಿಯ ಅಂತಿಮ ನಮನ ಹಾಗೂ ಆಕ್ರಂದನ, ನವದೆಹಲಿಯಲ್ಲಿ ಆಯೋಜಿಸಿದ್ದ ವಿಜಯೋತ್ಸವ, ಗರಿಗೆದರಿರುವ ವಿಧಾನಸಭೆ ಚುನಾವಣೆ, ನವದೆಹಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಉತ್ಸಾಹದಿಂದ ಧಾವಿಸಿದ ಮಕ್ಕಳು, ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸ್ಥಾನ ಗಳಿಸಿರುವ ಬಿಜೆಪಿ ರಾಜ್ಯಸಭೆ ಚುನಾವಣೆ ಮೇಲೂ ಕಣ್ಣಿಟ್ಟಿದ್ದು ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ ಪಕ್ಷದ ಮುಖಂಡರು, ಬೆಂಗಳೂರಿನಲ್ಲಿ ಹಾಲಿ ಮತ್ತು ಮಾಜಿ ರೈಲ್ವೆ ಸಚಿವರ ಚರ್ಚೆ, ಕಾಶ್ಮೀರದಲ್ಲಿ ಬೀಳುತ್ತಿರುವ ಹಿಮ ಮಳೆಯಿಂದ ದಾರಿ ಮುಚ್ಚಿಹೋಗಿರುವುದು ಸೇರಿದಂತೆ ಹಲವು ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.

ಮಕ್ಕಳ ಉತ್ಸಾಹ

ಮಕ್ಕಳ ಉತ್ಸಾಹ

ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಲ್ ಶ್ರೀ ಗೌರವ 2011 ಮತ್ತು 2012ರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಧಾವಿಸಿದ ಮಕ್ಕಳು.

ವಿಜಯೋತ್ಸವದಲ್ಲಿ ಪ್ರಧಾನಿ

ವಿಜಯೋತ್ಸವದಲ್ಲಿ ಪ್ರಧಾನಿ

ನವದೆಹಲಿಯ ವಿಜಯ ಚೌಕದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ.

ವಿಜಯೋತ್ಸವ

ವಿಜಯೋತ್ಸವ

ನವದೆಹಲಿಯ ವಿಜಯ ಚೌಕದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಭಾರತೀಯ ವಾಯು ದಳದ ಸಿಬ್ಬಂದಿ.

ಅಂತಿಮ ನಮನ

ಅಂತಿಮ ನಮನ

ಕಾಶ್ಮೀರದಲ್ಲಿ ಮಂಗಳವಾರ ಉಗ್ರರ ಗುಂಡಿಗೆ ಹತನಾದ ಕರ್ನಲ್ ಎಂ.ಎನ್. ರಾಯ್ ಅವರ ಪಾರ್ಥಿವ ಶರೀರಕ್ಕೆ ಅವರ ಪುತ್ರಿ ಅಂತಿಮ ನಮನ ಸಲ್ಲಿಸಿದರು.

ರಾಜ್ಯಸಭೆ ಮೇಲೆ ಕಣ್ಣು

ರಾಜ್ಯಸಭೆ ಮೇಲೆ ಕಣ್ಣು

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕದ ಮುಖಂಡರೊಂದಿಗೆ ಮುಂಬರುವ ರಾಜ್ಯಸಭೆ ಚುನಾವಣೆ ನಿಮಿತ್ತ ಚರ್ಚೆ ನಡೆಸಿದರು.

ಹಾಯ್ ಎಂದ ರಾಹುಲ್

ಹಾಯ್ ಎಂದ ರಾಹುಲ್

ನವದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜನರತ್ತೆ ಕೈ ಬೀಸಿದರು.

ಬಾಲಕನೊಂದಿಗೆ ಕಿರಣ್

ಬಾಲಕನೊಂದಿಗೆ ಕಿರಣ್

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಿರಣ್ ಬೇಡಿ ಅವರು ತಮ್ಮನ್ನು ಭೇಟಿಯಾಗಲು ಬಂದ ಬಾಲಕನೋರ್ವನನ್ನು ಮಾತನಾಡಿಸಿದ್ದು ಹೀಗೆ.

ಬೇಡಿಗೆ ಖಡ್ಗ

ಬೇಡಿಗೆ ಖಡ್ಗ

ನವದೆಹಲಿಯ ಅಕಾಲಿ ಕಚೇರಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರಿಗೆ ಡಿಎಸ್‌ಜಿಎಂಸಿ ಅಧ್ಯಕ್ಷ ಮಂಜೀತ್ ಸಿಂಗ್ ಜಿ.ಕೆ. ಅವರು ಖಡ್ಗ ನೀಡಿದರು.

ಸೈಕಲ್, ಫಿಟ್‌ನೆಸ್ ಪ್ರದರ್ಶನ

ಸೈಕಲ್, ಫಿಟ್‌ನೆಸ್ ಪ್ರದರ್ಶನ

ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಸೈಕಲ್ ಹಾಗೂ ಫಿಟ್‌ನೆಸ್ ಪ್ರದರ್ಶನ 2015 ಉದ್ಘಾಟನೆ ಸಮಾರಂಭದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಕಂಡುಬಂದಿದ್ದು ಹೀಗೆ.

ಹಾಲಿ, ಮಾಜಿ ಚರ್ಚೆ

ಹಾಲಿ, ಮಾಜಿ ಚರ್ಚೆ

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕಾನೂನು ಸಚಿವ ಸದಾನಂದ ಗೌಡ ಅವರೊಂದಿಗೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಗಹನ ಚರ್ಚೆ ನಡೆಸಿದರು.

ಹಿಮದ ಹಾದಿ

ಹಿಮದ ಹಾದಿ

ಕಾಶ್ಮೀರದ ಶ್ರೀನಗರದಲ್ಲಿ ಬೀಳುತ್ತಿರುವ ಹಿಮ ಮಳೆಯಿಂದ ದಾರಿಗಳು ಮುಚ್ಚಿಹೋಗಿವೆ. ವ್ಯಕ್ತಿಯೋರ್ವ ಈ ದಾರಿಯಲ್ಲಿ ನಡೆಯುತ್ತಿದ್ದಾಗ ಕಂಡುಬಂದಿದ್ದು ಹೀಗೆ.

ಬೌದ್ಧ ಪ್ರಾರ್ಥನೆ

ಬೌದ್ಧ ಪ್ರಾರ್ಥನೆ

ಭೋಪಾಲದಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿ ಸಾಂಪ್ರದಾಯಿಕ ಬೌದ್ಧ ಪ್ರಾರ್ಥನೆಗೆ ಲಡಾಖ್‌ನ ಮಹಿಳೆಯೋರ್ವಳು ಚಾಲನೆ ನೀಡಿದರು.

English summary
Here are the news with photos of many events and incidents happened in the nation on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X