ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯ ಚಳಿ ದೂರ ಮಾಡಿದ ಪ್ರತಿಭಟನೆ ಕಾವು

|
Google Oneindia Kannada News

ನವದೆಹಲಿ, ಫೆಬ್ರವರಿ, 12: ಭಾರತವೇ ಹಾಗೆ, ದಿನಂಪ್ರತಿ ವಿವಿಧ ಸುದ್ದಿಗಳು ಸದ್ದು ಮಾಡುತ್ತಿರುತ್ತವೆ. ಅದು ನಮಗೆ ಬೇಕಿದ್ದು ಇರಲಿ ಅಥವಾ ಬೇಡವಾದ್ದಾಗಿರಲಿ. ಸುದ್ದಿಗಳಿಗೆ ಕೊರತೆ ಇರುವುದಿಲ್ಲ. ಕೆಲ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಕೆಲ ಸುದ್ದಿಗಳು ಅಂದೇ ಸಾಯುತ್ತವೆ. ಅವುಗಳ ಲೆಕ್ಕ ಇಡುವ ಬದಲು ಒಂದು ನೋಟ ಹಾಕಿಕೊಂಡು ಬರುವುದೇ ಒಳಿತು.

ಇಡೀ ದೇಶವೇ ಯೋಧ ಹನುಮಂತಪ್ಪ ಕೊಪ್ಪದ್ ಮರಣಕ್ಕೆ ಕಂಬನಿ ಮಿಡಿಯಿತು. ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ.[ಸಿಎಂ ಸಿದ್ದರಾಮಯ್ಯ ವಾಚ್ ಬೆಲೆ ಎಷ್ಟು]

ಪ್ರಧಾನಿ ನರೇಂದ್ರ ಮೋದಿ ಅವರನ್ನು ಒರಾಕಲ್ ಸಿಇಒ ಅವರನ್ನು ಭೇಟಿ ಮಾಡಿದರು. ಗುಹವಾಟಿಯಲ್ಲಿ ನಡೆಯುತ್ತಿರುವ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ಸಂಭ್ರಮಿಸಿದ ಭಾರತೀಯ ಆಟಗಾರರು. ಸತತ ಜಯದ ಹಾದಿಯಲ್ಲಿ ಮುಂದಕ್ಕೆ ನುಗ್ಗುತ್ತಿರುವ ಮಾರ್ಟಿನಾ ಹಿಂಗೀಸ್ ಮತ್ತು ಸಾನಿಯಾ ಮಿರ್ಜಾ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ ನಿಮ್ಮ ಮುಂದೆ.....(ಪಿಟಿಐ ಚಿತ್ರಗಳು)'

ಮಮತಾ ಜಾಲ

ಮಮತಾ ಜಾಲ

ಕೋಲ್ಕತಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ನ ಸಭೆಯಲ್ಲಿ ಹಾಜರಿದ್ದ ಜಗಮೋಹನ್ ದಾಲ್ಮಿಯಾ ಪುತ್ರಿ ವೈಶಾಲಿ ದಾಲ್ಮಿಯಾ, ಕ್ರಿಕೆಟಿಗ ಲಕ್ಷ್ಮೀ ರತನ್ ಶುಕ್ಲಾ ಮತ್ತು ಪಶ್ಮಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರೋಮಾ ಕಾನ್ಫರೆನ್ಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಂಗಳೂರಲ್ಲಿ ಅನುಪಮ್

ಬೆಂಗಳೂರಲ್ಲಿ ಅನುಪಮ್

ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಸನ್ಮಾನಿಸಲಾಯಿತು.

ಗ್ಲಾಮರ್ ಮಾಸಿಲ್ಲ

ಗ್ಲಾಮರ್ ಮಾಸಿಲ್ಲ

ಚೆನ್ನೈ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ನಟಿಯರಾದ ನಗ್ಮಾ ಮತ್ತು ದಕ್ಷಿಣ ಭಾರತದ ಖ್ಯಾತ ತಾರೆ ಖುಷ್ಬೂ.

ಕುಶಲೋಪರಿ

ಕುಶಲೋಪರಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಒರಾಕಲ್ ಸಿಇಒ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಾನಿಯಾಗೆ ಸೋಲಿಲ್ಲ

ಸಾನಿಯಾಗೆ ಸೋಲಿಲ್ಲ

ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಟೆನಿಸ್ ಪಂದ್ಯಾವಳಿಯಲ್ಲಿ ಜಯ ದಾಖಲಿಸಿ ಮಾರ್ಟಿನಾ ಹಿಂಗೀಸ್ ಮತ್ತು ಸಾನಿಯಾ ಮಿರ್ಜಾ ಜೋಡಿ.

ಪ್ರತಿಭಟನೆ ಕಾವು

ಪ್ರತಿಭಟನೆ ಕಾವು

ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಾಕಿ ತಂಡದ ಸಂಭ್ರಮ

ಹಾಕಿ ತಂಡದ ಸಂಭ್ರಮ

ಗುಹವಾಟಿಯಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಅಥ್ಲೇಟಿಕ್ಸ್ ನಲ್ಲಿ ಪ್ರಶಸ್ತಿ ಬಾಚಿಕೊಂಡ ಭಾರತದ ವನಿತೆಯರ ಹಾಕಿ ತಂಡದ ಸಂಭ್ರಮ.

ಎಬಿವಿಪಿ ಹೋರಾಟ

ಎಬಿವಿಪಿ ಹೋರಾಟ

ಜವಹರಲಾಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳು ಅಫ್ಜಲ್ ಗುರು ಬೆಂಬಲಿಸಿ ನಡೆಸುತ್ತಿರುವ ಪ್ರತಿಭನಟೆಯನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೆರವಣಿಗೆ.

English summary
News In Pics: The president of Jawaharlal Nehru University's students union was on Friday arrested in a case of sedition and criminal conspiracy, police said. Indian Women Hockey Team who won Gold medal in the Hockey event, poses for a photo at the 12th South Asian Games, in Guwahati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X