ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣನ ಆರ್ಭಟಕ್ಕೆ ತೇಲಿದ ಮುಂಬೈ ಮಹಾನಗರ!

|
Google Oneindia Kannada News

ನವದೆಹಲಿ, ಜೂ. 19: ಭಾರೀ ಮಳೆ ಮುಂಬೈನಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಸಾವಿನ ಸರಣಿಯ ಪೂರ್ಣ ಲೆಕ್ಕ ಇಲ್ಲಿಯವರೆಗೆ ಸಿಕ್ಕಿಲ್ಲ. ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆ ಪರಿಣಾಮದ ಕೆಲ ಚಿತ್ರಗಳನ್ನು ನೋಡಿದರೆ ಅದರ ಭೀಕರತೆ ನಮ್ಮ ಅರಿವಿಗೆ ಬರುತ್ತದೆ.[ಮುಂಬೈ ಮಹಾಮಳೆ: ರೈಲು ಬಂದ್, ಕರೆಂಟ್ ಇಲ್ಲ]

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ದೇಶ ಇಡೀ ದೇಶವೇ ಸನ್ನದ್ಧವಾಗುತ್ತಿದೆ. ನವದೆಹಲಿ, ಬೆಂಗಳೂರು, ಅಲಹಾಬಾದ್ ಸೇರಿದಂತೆ ಅನೇಕ ಕಡೆ ಪೂರ್ವಭಾವಿ ತರಬೇತಿ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ.ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗೆ ಶುಕ್ರವಾರ 45 ನೇ ಹುಟ್ಟುಹಬ್ಬದ ಸಂಭ್ರಮ. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ.(ಪಿಟಿಐ ಚಿತ್ರಗಳು)

ವಾಣಿಜ್ಯ ನಗರಿ ಪೀಕಲಾಟ

ವಾಣಿಜ್ಯ ನಗರಿ ಪೀಕಲಾಟ

ಧಾರಾಕಾರ ಮಳೆಯಿಂದ ತತ್ತರಿಸಿರುವ ಮುಂಬೈನ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ನಾಗರಿಕರು ಮನೆ ಸೇರಲು ಹರಸಾಹಸ ಪಟ್ಟ ರೀತಿ.

ಮುಳುಗಿದ ಕಾರು

ಮುಳುಗಿದ ಕಾರು

ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಪರಿಣಾಮ ಮುಂಬೈನ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಸಿಕ್ಕಿಹಾಕಿಕೊಂಡ ಕಾರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿರುವುದು.

ಹಾಲೋ ..ನೀರೋ?

ಹಾಲೋ ..ನೀರೋ?

ಜನರು ಮನೆಯಿಂದ ಹೊರಗೆ ಬಾರದಂತೆ ಮುಂಬೈ ಮಹಾನಗರ ಪಾಲಿಕೆ ಸೂಚನೆ ನೀಡಿದೆ. ಮುಂಬೈ ಕಡಲ ಕಿನಾರೆಯಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು, ಸಮುದ್ರ ಕಿನಾರೆ ಪ್ರದೇಶದಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹಾಗೂ ಸಮುದ್ರ ಪ್ರದೇಶದ ಬಳಿ ತೆರಳದಂತೆ ಜನರಲ್ಲಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಮಳೆಯಲೂ ಸೆಲ್ಫಿ!

ಮಳೆಯಲೂ ಸೆಲ್ಫಿ!

ಮಳೆ ಆವಾಂತರ ಸೃಷ್ಟಿಸಿ ಜಗವೆಲ್ಲ ನೀರು ತುಂಬಿಕೊಂಡಿದ್ದರೂ ಈ ಯುವತಿಗೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು. ಸೆಲ್ಫಿ ತೆಗೆದುಕೊಳ್ಳುವುದು ಒಂದು ರೋಗ ಎಂದು ಇತ್ತೀಚೆಗೆ ಸಮೀಕ್ಷೆಯೊಂದು ಹೇಳಿತ್ತು.

ಯೋಧರ ಯೋಗ

ಯೋಧರ ಯೋಗ

ಸಿಆರ್ ಪಿಎಫ್ ಯೋಧರು ಶ್ರೀನಗರದಲ್ಲಿ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆ ನಡೆಸಿದರು. ದೆಹಲಿಯಲ್ಲಿ ಜೂನ್ 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಾವಿರಾರು ಜನ ಭಾಗಿ

ಸಾವಿರಾರು ಜನ ಭಾಗಿ

ನವದೆಹಲಿಯ ರಾಜಪಥದಲ್ಲಿ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕಂಡು ಬಂದ ದೃಶ್ಯ. ಯೋಗ ಪ್ರದರ್ಶನದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಎಲ್ಲರೂ ಕೈ ಒಂದುಗೂಡಿಸಿ

ಎಲ್ಲರೂ ಕೈ ಒಂದುಗೂಡಿಸಿ

ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಶ್ವೇತ ವಸ್ತ್ರಧಾರಿಗಳಾಗಿ ಯೋಗ ದಿನಾಚರಣೆ ಪೂರ್ವಸಿದ್ಧತೆಯಲ್ಲಿ ಭಾಗವಹಿಸಿದ್ದ ಸಾವಿರಾರು ನಾಗರಿಕರು ಕಂಡುಬಂದಿದ್ದು ಹೀಗೆ.

ನಾವು ಯಾರಿಗೂ ಕಡಿಮೆ ಇಲ್ಲ

ನಾವು ಯಾರಿಗೂ ಕಡಿಮೆ ಇಲ್ಲ

ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪೂರ್ವಸಿದ್ಧತೆಯಲ್ಲಿ ಶಾಲಾ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇಡೀ ರಾಷ್ಟ್ರ ಸಿದ್ಧವಾಗಿತ್ತಿದೆ.

ಶಿಸ್ತಿನ ಸಿಪಾಯಿಗಳು

ಶಿಸ್ತಿನ ಸಿಪಾಯಿಗಳು

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ನವದೆಹಲಿ ಸಂಪೂರ್ಣ ಸಿದ್ಧವಾಗಿದೆ. ಮಕ್ಕಳು, ಯುವತಿಯರ ಆದಿಯಾಗಿ ಎಲ್ಲರೂ ಯೋಗ ದಿನ ಆಚರಣೆಗೆ ಭರದ ಸಿದ್ಧತೆ ಮಾಡಿಕೊಂಡಿರುವುದರೊಂದಿಗೆ ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗೆ ಶುಕ್ರವಾರ 45 ನೇ ಹುಟ್ಟುಹಬ್ಬದ ಸಂಭ್ರಮ. ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ರಾಹುಲ್ ಜನ್ಮದಿನ ಆಚರಣೆ ಮಾಡಿದರು.

ನೀರಿನಲ್ಲಿ ಓಡಿದ ರೈಲು!

ನೀರಿನಲ್ಲಿ ಓಡಿದ ರೈಲು!

ಮುಂಬೈನ ರೈಲ್ವೆ ನಿಲ್ದಾಣಗಳು ಜಲಾವೃತವಾಗಿದ್ದು ಸಂಚಾರ ಬಂದ್ ಆಗಿದೆ. ಶುಕ್ರವಾರ ಮಳೆ ಹೊಡೆತಕ್ಕೆ ಸಿಲುಕಿದ ಮುಂಬೈ ರೈಲ್ವೆ ನಿಲ್ದಾಣ ಕಂಡು ಬಂದ ದೃಶ್ಯ.

ಆಶೀರ್ವಾದ ಪಡೆದ ರಾಹುಲ್

ಆಶೀರ್ವಾದ ಪಡೆದ ರಾಹುಲ್

ಹುಟ್ಟುಹಬ್ಬದ ದಿನವೂ ಹೋರಾಟದಲ್ಲೇ ತೊಡಗಿಕೊಂಡಿರುವ ರಾಹುಲ್ ಗಾಂಧಿ ದೆಹಲಿಯಲ್ಲಿ ಮಹಿಳೆಯರಿಂದ ಆಶೀರ್ವಾದ ಪಡೆದರು. ಆತ್ಮಹತ್ಯೆ ಮಾಡಿಕೊಂಡ ಪಂಜಾಬ್ ನ ರೈತನ ಮನೆಗೆ ಗುರುವಾರ ಭೇಟಿ ನೀಡಿದ್ದ ರಾಹುಲ್ ಸಾಂತ್ವನ ಹೇಳಿದ್ದರು.

ಸುಪ್ರೀಂ ಕೋರ್ಟ್ ಆವರಣ

ಸುಪ್ರೀಂ ಕೋರ್ಟ್ ಆವರಣ

ನವದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿ ಶುಕ್ರವಾರ ಮುಂಜಾನೆ ಕಂಡು ಬಂದ ದೃಶ್ಯ.

ಎಲ್ಲಿಗೆ ಪಯಣ

ಎಲ್ಲಿಗೆ ಪಯಣ

ಮಳೆ ಪರಿಣಾಮ ವ್ಯಾಪಾರ ವಹಿವಾಟು ನಷ್ಟಕ್ಕೆ ಈಡಾಗಿದ್ದು ತಮ್ಮ ಸಾಮಗ್ರಿಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಹೊರಟ ಮಹಿಳೆಯರು.

ನೀರಿನಲ್ಲಿ ಮಕ್ಕಳಾಟ

ನೀರಿನಲ್ಲಿ ಮಕ್ಕಳಾಟ

ಮುಂಬೈನ ಎಲ್ಲ ರಸ್ತೆಗಳು ಜಲಾವೃತವಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಮಳೆ ನೀರಿನಲ್ಲೇ ಮಕ್ಕಳು ಸಂಭ್ರಮಿಸಿದ ಪರಿ.

ಧರೆಗೆ ಉರುಳಿದ ಮರ

ಧರೆಗೆ ಉರುಳಿದ ಮರ

ಮುಂಬೈನ ಎಲ್ಲ ಪ್ರಮುಖ ರಸ್ತೆಗಳ ಮೇಲೆ ಮರಗಳು ಉರುಳಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದು ಕರೆಂಟ್ ಇಲ್ಲದೇ ನಾಗರಿಕರು ಪರಿತಪಿಸುವಂತಾಗಿದೆ.

ಇದು ಛತ್ರಿ ಕಾಲ

ಇದು ಛತ್ರಿ ಕಾಲ

ನಾಗರಿಕರು ಸುರಕ್ಷಿತ ಸ್ಥಳ ಅರಿಸಿ ಹೊರಟಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

ಮಳೆಗಾಲದ ಸಂಭ್ರಮ

ಮಳೆಗಾಲದ ಸಂಭ್ರಮ

ಒಂದೆಡೆ ಮಳೆ ನೂರಾರು ಆವಾಂತರಗಳನ್ನು ಸೃಷ್ಟಿ ಮಾಡಿದ್ದರೆ, ಮಕ್ಕಳಿಗೆ ಮಾತ್ರ ಸಂಭ್ರಮವೋ ಸಂಭ್ರಮ..

ಮಳೆ ಕಾರು ಬಾರು!

ಮಳೆ ಕಾರು ಬಾರು!

ಕಾರಿನಲ್ಲಿ ಜುಂ ಎಂದು ಮನೆ ಸೇರಬೇಕಾಗಿದ್ದವರ ಕಾರು ಬಾರು ಮಳೆಗೆ ಸಿಕ್ಕಿ ನುಚ್ಚು ನೂರಾದ ಪರಿ.

English summary
News in Pics: Heavy rain since last night has flooded large parts of Mumbai, affecting flights, trains and bus services in a replay of an annual monsoon nightmare in India's financial capital. CRPF Jawans participate in a rehearsal for International Yoga Day at CRPF Headquarters in Srinagar on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X