ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ಮಾಡಿದ ಯುವತಿಯರ ಸಂಭ್ರಮ, ಕರೀನಾ ಹೆಜ್ಜೆ

|
Google Oneindia Kannada News

ನವದೆಹಲಿ, ಏಪ್ರಿಲ್, 04: ಸುದ್ದಿಗಳಿಗೇನು? ಅವಷ್ಟಕ್ಕೆ ಅವು ನಡೆದುಕೊಂಡು, ಓಡಿಕೊಂಡು, ಸದ್ದು ಮಾಡಿಕೊಂಡು ಹೋಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಮಹತ್ವದ್ದಾರೆ ಇನ್ನು ಕೆಲವಕ್ಕೆ ಒಂದೇ ದಿನದ ಆಯುಷ್ಯ.

ನಮ್ಮ ರಾಜ್ಯದ್ದು ನಮಗೆ ಮಹತ್ವದ್ದು ಎನಿಸಿದರೂ ಸಹ ಒಮ್ಮೆಮ್ಮೆ ಇತರ ರಾಜ್ಯಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಮೇಲೆ ಕಣ್ಣು ಹರಿಸಬೇಕಾಗುತ್ತದೆ. ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬದಲಾವಣೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ.

ದೇಶದಲ್ಲಿನ ಎಲ್ಲ ಸಂಗತಿಗಳು ಸುದ್ದಿಯಾಗಬೇಕೆಂದೇನೂ ಇಲ್ಲ. ಒಂದೊಂದಕ್ಕೆ ಒಂದೊಂದು ರೀತೀಯ ಮಹತ್ವ ಇರುತ್ತದೆ. ಶ್ರೀಲಂಕಾದ ವಾಯು ಸೇನೆ ಮುಖ್ಯಸ್ಥರು ಭಾರತಕ್ಕೆ ಆಗಮಿಸಿದ್ದಾರೆ, ಅಸ್ಸಾಂ ನಲ್ಲಿ ಮೊದಲ ಹಂತದ ಚುನಾವಣಾ ಮತದಾನವೂ ಆಗಿದೆ. ವಿಂಡೀಸ್ ಆಟಗಾರರು ಇಂಗ್ಲೆಂಡ್ ಮಣಿಸಿ ಟಿ-20 ವಿಶ್ವಕಪ್ ಕಿರೀಟವನ್ನು ಮುಡಿಗೆ ಏರಿಸಿಕೊಂಡು ಬೀಗಿದ್ದಾರೆ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ಗೌರವ ವಂದನೆ

ಗೌರವ ವಂದನೆ

ಶ್ರೀಲಂಕಾದ ಏರ್ ಮಾರ್ಷಲ್ ಕೊಲಿಥಾ ಗುಣತಿಲಕೆ ನವದೆಹಲಿಯಲ್ಲಿ ಭಾರತೀಯ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು.

ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ಭಾರತದ ವಾಯುಸೇನೆ ಮುಖ್ಯಸ್ಥ ಅರುಪ್ ರಹಾ ಶ್ರೀಲಂಕಾದ ಏರ್ ಮಾರ್ಷಲ್ ಕೊಲಿಥಾ ಗುಣತಿಲಕೆ ಅವರಿಗೆ ಸೇನಾ ಶೈಲಿಯಲ್ಲಿ ಗೌರವ ಸಲ್ಲಿಕೆ ಮಾಡಿ ಸ್ವಾಗತ ಕೋರಿದರು.

ಮಾದರಿ ಮಹಿಳೆ

ಮಾದರಿ ಮಹಿಳೆ

ನವದೆಹಲಿಯಲ್ಲಿ ನಡೆದ ಸಿಐಐ ನ ವಾರ್ಷಿಕ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಖಿಲಾ ಸಯ್ಯೀದ್ ಅವರಿಗೆ ಮಾದರಿ ಮಹಿಳೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

 ಮತದಾನ ಸಂಭ್ರಮ

ಮತದಾನ ಸಂಭ್ರಮ

ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಹೊರ ಬಂದ ಸಿಲ್ಚಾರ್ ಯುವತಿಯರ ಸಂಭ್ರಮ.

 ನಾನೂ ಓಟ್ ಮಾಡಿದೆ

ನಾನೂ ಓಟ್ ಮಾಡಿದೆ

ಮಗುವಿನೊಂದಿಗೆ ತೆರಳಿ ಮತದಾನ ಮಾಡಿ ಹೊರಬಂದ ಅಸ್ಸಾಂ ನ ಮಹಿಳೆ.

ಮೇಧಾ ಪಾಟ್ಕರ್ ಗೆ ತಡೆ

ಮೇಧಾ ಪಾಟ್ಕರ್ ಗೆ ತಡೆ

ಹೈದರಾಬಾದ್ ಸೆಂಟ್ರಲ್ ವಿವಿ ಆವರಣ ಪ್ರವೇಶ ಮಾಡಲು ಮುಂದಾದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಭದ್ರತಾ ಸಿಬ್ಬಂದಿ ತಡೆದರು.

ಕರೀನಾ ಹೆಜ್ಜೆ

ಕರೀನಾ ಹೆಜ್ಜೆ

ಲಾಕ್ಮೆ ಫ್ಯಾಷನ್ ಶೋ ನಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ತಾರೆ ಕರೀನಾ ಕಪೂರ್ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ...

ವಿಂಡೀಸರ ಸಂಭ್ರಮ

ವಿಂಡೀಸರ ಸಂಭ್ರಮ

ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಟಿ-20 ವಿಶ್ವ ಕಪ್ ಕಿರೀಟವನ್ನು ಮುಡಿಗೆ ಏರಿಸಿಕೊಂಡ ವೆಸ್ಟ್ ಇಂಡೀಸ್ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು.

English summary
News In Pics: Voters showing their inked fingers after casting vote during the 1st phase of Assam assembly polls in Silchar on Monday. Air Chief Marshal Arup Raha shakes hands with Sri Lankan Chief of Defence Staff Air Chief Marshal Kolitha Gunathilake before inspecting a guard of honour at South Block in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X