ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವ ಭಜನೆ ಮಾಡುತ್ತ ಸಾಗಿದ ಅಮರನಾಥ ಯಾತ್ರಿಕರು

|
Google Oneindia Kannada News

ನವದೆಹಲಿ, ಜು. 03: ಅಮರನಾಥ ಯಾತ್ರೆಗೆ ಚಾಲನೆ ದೊರೆತಿದ್ದು ಭಕ್ತರ ದಂಡು ವಿವಿಧ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಂವ್ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗಗಳಲ್ಲಿ ಯಾತ್ರೆ ಸಾಗುತ್ತಿದ್ದು ಎರಡೂ ಮಾರ್ಗಗಳ ಉದ್ದಕ್ಕೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಜುಲೈ 1 ರಂದು ಯಾತ್ರೆಗೆ ಚಾಲನೆ ದೊರೆತಿದ್ದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಯಾತ್ರಾರ್ಥಿಗಳನ್ನು ಬೀಳ್ಕೊಟಡ್ಟರು. ಇನ್ನೊಂದು ಯಾತ್ರಿಕರ ತಂಡವನ್ನು ರಾಜ್ಯಖಾತೆ ಆರೋಗ್ಯ ಸಚಿವ ಚೌಧರಿ ಲಾಲ್‌ಸಿಂಗ್ ಬೀಳ್ಕೊಟ್ಟರು.[ಹಿಮಲಿಂಗ ದರ್ಶನಕ್ಕೆ ಹೊರಟವರ ರಕ್ಷಣೆಗೆ 'ಆಪರೇಷನ್ ಶಿವ']

ಜುಲೈ 29 ರವರೆಗೆ ಪವಿತ್ರ ಯಾತ್ರೆ ನಡೆಯಲಿದೆ. ಭಕ್ತರು ಸಾಗುವ ದಾರಿಯುದ್ದಕ್ಕೂ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ದು ಉಗ್ರ ಕಾರ್ಯಚಟುವಟಿಕೆ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ. ಆಪರೇಶನ್ ಶಿವ ಹೆಸರಿನಲ್ಲಿ ಸೇನೆ ಭದ್ರತಾ ಕಾರ್ಯಗಳನ್ನು ಕೈಗೊಂಡಿದೆ.(ಪಿಟಿಐ ಚಿತ್ರಗಳು)

ಇನ್ನೊಂದೆಡೆ ಭಕ್ತರ ಮೇಲೆ ದಾಳಿ ಮಾಡಲು 11 ಜನ ಉಗ್ರರು ಸಿದ್ಧವಾಗಿದ್ದಾರೆ ಮತ್ತು ಅವರ ಗ್ರೂಪ್ ಫೋಟೋ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ ಎಂಬ ವದಂತಿಯೂ ಕೇಳಿ ಬಂದಿದೆ.

ಭಕ್ತರ ರಕ್ಷಣೆಗೆ ಸದಾ ಸಿದ್ಧ

ಭಕ್ತರ ರಕ್ಷಣೆಗೆ ಸದಾ ಸಿದ್ಧ

ಯಾತ್ರಿಕರ ಸುರಕ್ಷತೆಗಾಗಿ ಸೇನೆ, ಅರೆ ಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಮೂರು ಹಂತಗಳ ಭದ್ರತೆ ಒದಗಿಸಲಾಗಿದೆ. ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗಿದೆ.

ತೊಂದರೆ ನೀಡಿದರೆ ಸುಮ್ಮನಿರಲ್ಲ

ತೊಂದರೆ ನೀಡಿದರೆ ಸುಮ್ಮನಿರಲ್ಲ

ಸಾಧ್ವಿ ಪ್ರಾಚಿ ಮತ್ತೆ ಅಮರನಾಥ ಯಾತ್ರೆ ಕುರಿತು ಮತ್ತೊಂದು ವಿವಾದಾದ್ಮಕ ಹೇಳಿಕೆ ನೀಡಿದ್ದಾರೆ. ತಾತ್ರಿಗಳ ಮೇಲೆ ಹಲ್ಲೆ ಅಥವಾ ಅವರಿಗೆ ಯಾವುದೇ ರೀತಿಯ ತೊಂದರೆಯಾದರೆ ನೀಡಿದರೆ ಹಜ್ ಯಾತ್ರಾರ್ಥಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

7,500 ಸೇನಾ ಸಿಬ್ಬಂದಿ

7,500 ಸೇನಾ ಸಿಬ್ಬಂದಿ

'ಆಪರೇಷನ್ ಶಿವ' ಎಂಬ ಹೆಸರಿನಲ್ಲಿ ಅಮರನಾಥ ಯಾತ್ರೆ ಕೈಗೊಂಡಿರುವ ಭಕ್ತಾದಿಗಳ ರಕ್ಷಣೆಗಾಗಿ 7,500 ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಉಗ್ರವಾದಿ ಸಂಘಟನೆಗಳ ದಾಳಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ತೆಗೆದುಕೊಳ್ಳಲಾಗಿದೆ.

ಟೆಲಿಕಾಂ ಸೆಕ್ಟರ್ ಟಾರ್ಗೆಟ್

ಟೆಲಿಕಾಂ ಸೆಕ್ಟರ್ ಟಾರ್ಗೆಟ್

ಭಾರತದೊಳಕ್ಕೆ 15 ಉಗ್ರರು ನುಸುಳಿ ಬಂದಿರುವ ಮಾಹಿತಿಯೂ ಲಭ್ಯವಾಗಿದೆ. ಮೊದಲು ಸಂಪರ್ಕ ಸಾಧನಗಳ ಕೆಲಸ ಸ್ಥಗಿತಗೊಳಿಸಿ ನಂತರ ದಾಳಿ ಮಾಡುವ ಹುನ್ನಾರ ಉಗ್ರರದ್ದಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಸೇನೆ ಸಕಲ ಕಟ್ಟೆಚ್ಚರ ತೆಗೆದುಕೊಂಡಿದೆ.

English summary
Thousands of pilgrims stepping towards the annual Amarnath Yatra under the eye of Indian army. In an audacious move, 11 young Kashmiri terrorists donning army fatigues and holding firearms, posted their photographs on Facebook, forcing the security forces to sit up and take notice. Here are some Pics of Amarnath Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X