ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದ ತುಣುಕು ಸುದ್ದಿಗಳ ಚಿತ್ರಸಂಪುಟ

|
Google Oneindia Kannada News

ನವದೆಹಲಿ, ಜು. 03: ಸಂಸತ್ ಅಧಿವೇಶನ ಸೋಮವಾರದಿಂದ ಮತ್ತೆ ಆರಂಭವಾಗಿದೆ. ಲಲಿತ್ ಮೋದಿ ಹಗರಣದಲ್ಲಿ ಯಾವ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಮರ್ಥನೆ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸ್ನೇಹಿತರ ದಿನವನ್ನು ವಿಶಿಷ್ಟವಾಗಿ ಆಚರಿಸಿದ ಅಹಮದಾಬಾದ್ ನ ವಿದ್ಯಾರ್ಥಿನಿಯರು. ಆನೆ ಮೇಲೆ ಬಿಹಾರ ವಿಧಾನ ಸಭೆಗೆ ಆಗಮಿಸಿದ ಜೆಡಿಯು ಶಾಸಕ...

ಎಐಐಎಂಎಸ್ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಿನಗಳಿಂದ ಬಂದ್ ವಾತಾವರಣ ಮುಂದುವರಿದಿದೆ. ಈ ವೇಳೆ ನಡೆಯುತ್ತಿದ್ದ ಪ್ರತಿಭಟನೆಯನ್ನು ನಿಯಂತ್ರಿಸಲು ಓಡಿದ ಪೊಲೀಸರು. ಹರಿದ್ವಾರದ ಗಂಗಾನದಲ್ಲಿಯಲ್ಲಿ 'ಹರಿ ಕೀ ಪೈಡಿ' ಹಬ್ಬದ ನಿಮಿತ್ತ ಪುಣ್ಯ ಸ್ನಾನ ಮಾಡಿದ ಸಾವಿರಾರು ಭಕ್ತರು. ಇಡೀ ಸೋಮವಾರದ ಘಟನಾವಳಿಗಳ ಮೇಲೆ ಒಂದು ಚಿತ್ರ ನೋಟ ಇಲ್ಲಿದೆ.(ಪಿಟಿಐ ಚಿತ್ರಗಳು)

ಸ್ನೇಹಕ್ಕೆ ವಯಸ್ಸಿನ ಮಿತಿ ಇಲ್ಲ

ಸ್ನೇಹಕ್ಕೆ ವಯಸ್ಸಿನ ಮಿತಿ ಇಲ್ಲ

ಹಿರಿಯ ಜೀವಗಳಿಗೆ ಗೆಳೆತನದ ಬ್ಯಾಂಡ್ ಕಟ್ಟಿ ಮಾನವ ಸಂಬಂಧಕ್ಕೆ ಹೊಸ ಅರ್ಥ ನೀಡಿದ ಅಹಮದಾಬಾದ್ ನ ಕಾಲೇಜು ವಿದ್ಯಾರ್ಥಿನಿಯರು.

ಎಂದೆಂದಿಗೂ ಇರಲಿ ಈ ಬಂಧ

ಎಂದೆಂದಿಗೂ ಇರಲಿ ಈ ಬಂಧ

ಉತ್ತಮ ಸ್ನೇಹಿತರಿಗೆ ಪ್ರತಿ ದಿನವೂ ಅವರದ್ದೇ. ಆದರೆ ಅದಕ್ಕೊಂದು ಸಾಂಕೇತಿ ದಿನವೂ ಇದೆಯಲ್ಲ. ಹೌದು ಸ್ನೇಹಿತರ ದಿನಾಚರಣೆ ಸಂಭ್ರಮವನ್ನು ಕೈಗೆ ಬ್ಯಾಂಡ್ ಕಟ್ಟುವುದರ ಮೂಲಕ ಆಚರಿಸಿದ ನಾಗಪುರ ವಿದ್ಯಾರ್ಥಿನಿಯರು.

ತಲೆಕೆಳಗಾದ ಲಾರಿ

ತಲೆಕೆಳಗಾದ ಲಾರಿ

ಗುರ್ ಗಾಂವ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕೆಳಕ್ಕೆ ಉದುರಿಬಿದ್ದ ದೃಶ್ಯ .

ನಡಾಲ್ ಮತ್ತೆ ಚಾಂಪಿಯನ್

ನಡಾಲ್ ಮತ್ತೆ ಚಾಂಪಿಯನ್

ವಿಂಬಲ್ಡನ್ ನಲ್ಲಿ ನಿರಾಸೆ ಅನುಭವಿಸಿದ್ದ ಸ್ಪೇನ್ ಟೆನಿಸ್ ದೊರೆ ರಫೆಲ್ ನಡಾಲ್ ಹ್ಯಾಂಗ್ ಬರ್ಗ್ ಟ್ರೋಫೀಯನ್ನು ಜಯಿಸಿದ ನಂತರ ಸಂಭ್ರಮಿಸಿದ್ದು ಹೀಗೆ.

ರಾಜೀನಾಮೆ ಕೊಡಲ್ಲ

ರಾಜೀನಾಮೆ ಕೊಡಲ್ಲ

ಲಲಿತ್ ಮೋದಿ ಹಗರಣದಲ್ಲಿ ನನ್ನ ಪಾತ್ರವಿಲ್ಲ. ತಪ್ಪು ಮಾಡದ ನಾನೇಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಲೋಕಸಭೆಯಲ್ಲಿ ಪ್ರಶ್ನಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.

ರಾಹುಲ್ ಆಗಮನ

ರಾಹುಲ್ ಆಗಮನ

ವಿದ್ಯಾರ್ಥಿಗಳೊಂದಿಗೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರದ ಸಂಸತ್ ಕಲಾಪಕ್ಕೆ ಆಗಮಿಸಿದರು.

ಪವಿತ್ರ ಸ್ನಾನ

ಪವಿತ್ರ ಸ್ನಾನ

ಹರಿದ್ವಾರದ ಗಂಗಾನದಲ್ಲಿಯಲ್ಲಿ 'ಹರಿ ಕೀ ಪೈಡಿ' ಹಬ್ಬದ ನಿಮಿತ್ತ ಪುಣ್ಯ ಸ್ನಾನ ಮಾಡಿದ ಸಾವಿರಾರು ಭಕ್ತರು.

 ಪೊಲೀಸರ ಓಟ

ಪೊಲೀಸರ ಓಟ

ಎಐಐಎಂಎಸ್ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಿನಗಳಿಂದ ಬಂದ್ ವಾತಾವರಣ ಮುಂದುವರಿದಿದೆ. ಈ ವೇಳೆ ನಡೆಯುತ್ತಿದ್ದ ಪ್ರತಿಭಟನೆಯನ್ನು ನಿಯಂತ್ರಿಸಲು ಓಡಿದ ಪೊಲೀಸರು.

ಆನೆ ಮೇಲೆ ಬಂದ ಶಾಸಕ

ಆನೆ ಮೇಲೆ ಬಂದ ಶಾಸಕ

ಬಿಹಾರದ ಜೆಡಿಯು ಶಾಸಕ ಶ್ಯಾಮ್ ಬಹಾದ್ದೂರ್ ಸೋಮವಾರ ಆರಂಭವಾದ ಬಿಹಾರ ವಿಧಾನಸಭೆ ಕಲಾಪಕ್ಕೆ ಆನೆ ಮೇಲೆ ಸವಾರಿ ಮಾಡಿಕೊಂಡು ಆಗಮಿಸಿದ ಪರಿ.

ಸೀರೆಯಲ್ಲಿ ಸಾನಿಯಾ ಮಿರ್ಜಾ

ಸೀರೆಯಲ್ಲಿ ಸಾನಿಯಾ ಮಿರ್ಜಾ

ಮುಂಬೈನ ಆಭರಣ ಮಳಿಗೆಯ ಕಾರ್ಯಕ್ರಮವೊಂದರಲ್ಲಿ ಸೀರೆ ಉಟ್ಟು ಹೆಜ್ಜೆ ಹಾಕಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ. ವಿಂಬಲ್ಡನ್ ಜಯಿಸಿದ ಸಾನಿಯಾ ಮಿರ್ಜಾ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಲಾಗಿದೆ.

English summary
News In Pics: After issuing a statement on the first day of the monsoon session of Parliament that she was open to making her stance on the Lalit Modi controversy public, External Affairs Minister Sushma Swaraj managed to make a statement in the Rajya Sabha on Monday in which she pleaded innocence. College students tie friendship bands and celebrate Friendship day in Nagpur. The whole day news in Pics, August 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X