ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೆಗಳೊಂದಿಗೆ ಚೆಲ್ಲಾಟ, ಪ್ರಾಣಕ್ಕೆ ತಂದೀತು ಕಂಟಕ

|
Google Oneindia Kannada News

ನವದೆಹಲಿ, ಜೂ. 23: ಧಾರಾಕಾರ ಮಳೆಯಿಂದ ತತ್ತರಿಸಿ ಹೋಗಿದ್ದ ಮುಂಬೈ ಮಹಾನಗರ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದೆ. ನಾಗರಿಕರು ಸಮುದ್ರ ತೀರದಲ್ಲಿ ನಿಂತು ಪರಿಸರವನ್ನು ಆಸ್ವಾದಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಸುರ್ಪೀಂ ಕೋರ್ಟ್ ನಲ್ಲಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮೇಲ್ಮನವಿ ದಾಖಲಿಸಿದ್ದರೆ ತಮಿಳುನಾಡು ಮುಖ್ಯಮಂತ್ರಿ ಚುನಾವಣಾ ಪ್ರಚಾರದಲ್ಲಿ ಭಾಗಿ.

ಮುಂಗಾರು ಮಾರುತಗಳು ದೇಶಾದ್ಯಂತ ಆರ್ಭಟಿಸುತ್ತಿವೆ, ಮಧ್ಯಪ್ರದೇಶ, ದೆಹಲಿ, ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ದಿನದ ಘಟನಾವಳಿಗಳ ಮೇಲೆ ಒಂದು ರೌಂಡ್ ಅಪ್ ಇಲ್ಲಿದೆ.(ಪಿಟಿಐ ಚಿತ್ರಗಳು)

ಮುಂಬೈ ಕಡಲ ತೀರ

ಮುಂಬೈ ಕಡಲ ತೀರ

ಧಾರಾಕಾರ ಮಳೆಯಿಂದ ತತ್ತರಿಸಿ ಹೋಗಿದ್ದ ಮುಂಬೈ ಮಹಾನಗರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿತ್ತು. ಆದರೆ ಮಂಗಳವಾರ ಮತ್ತೆ ಮಳೆ ಜೋರಾಗಿದೆ. ಮಂಗಳವಾರ ಬೆಳಗ್ಗೆ ನಾಗರಿಕರು ಸಮುದ್ರ ತೀರದಲ್ಲಿ ನಿಂತು ಪರಿಸರವನ್ನು ಆಸ್ವಾದಿಸುತ್ತದ್ದಾಗ ಕಣ್ಣಿಗೆ ಬಿದ್ದ ದೃಶ್ಯ.

ಸಂತೋಷಕ್ಕೆ ಪಾರವೇ ಇಲ್ಲ

ಸಂತೋಷಕ್ಕೆ ಪಾರವೇ ಇಲ್ಲ

ಮುಂಬೈ ಮರಿನಾ ಕಡಲ ತೀರದಲ್ಲಿ ಸಮುದ್ರದ ಅಲೆಗಳ ಆನಂದವನ್ನು ಸವಿಯುತ್ತಿದ್ದ ಯುವತಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

ಸುನಾಮಿ ಅಲ್ಲ

ಸುನಾಮಿ ಅಲ್ಲ

ಧಾರಾಕಾರ ಮಳೆ ಪರಿಣಾಮ ಮುಂಬೈ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಎದ್ದಿವೆ. ಅಲೆಗಳ ಆರ್ಭಟಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನ ಬೆಚ್ಚಿಬಿದ್ದ ಬಗೆ.

ಯೋಗದ ಮಹತ್ವ ಸಾರಿದ ಜೇಟ್ಲಿ

ಯೋಗದ ಮಹತ್ವ ಸಾರಿದ ಜೇಟ್ಲಿ

ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಾನ್ ಫ್ರಾನ್ಸಿಸ್ಕೋ ದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಮಾಡಲಾಗಿದ್ದು ದೆಹಲಿಯ ರಾಜಪಥದಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಅಪ್ಪ ಮಗ ಸಮ್ಮಿಲನ

ಅಪ್ಪ ಮಗ ಸಮ್ಮಿಲನ

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಮಗ ರೋಹನ್ ಮೂರ್ತಿ ಬೆಂಗಳೂರಿನಲ್ಲಿ ನಡೆದ ಸಂಸ್ಥೆಯ 34ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. ಸಿಕ್ಕಾ ಸಿಇಒ ಆಗಿ ಆಯ್ಕೆಯಾದ ನಂತರ ಮೂರ್ತಿ ಸಂಸ್ಥೆಯ ವಿಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.

ಜಯಾ ಪ್ರಚಾರದ ವೈಖರಿ

ಜಯಾ ಪ್ರಚಾರದ ವೈಖರಿ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚೆನ್ನೈನ ಆರ್ ಕೆ ನಗರ ಉಪಚುನಾವಣೆ ಪ್ರಚಾರದಲ್ಲಿ ಭಾಷಣ ಮಾಡಿ ಮತಯಾಚಿಸಿದರು. ಜಯಾ ಆಪ್ತೆ ಶಶಿಕಲಾ ಸಹ ಇದ್ದರು. ಇತ್ತ ಕರ್ನಾಟಕ ಜಯಲಲಿತಾ ಅಕ್ರಮ ಆಸ್ತಿ ಗಳಿಗೆ ಪ್ರಕರಣಕ್ಕೆ ಸಂಬಂಧಿಸಿ 4000 ಪುಟಗಳ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಲು ತೀರ್ಮಾನಿಸಿದೆ.

ಮಧ್ಯಪ್ರದೇಶದ ಭೋಪಾಲ್

ಮಧ್ಯಪ್ರದೇಶದ ಭೋಪಾಲ್

ಧಾರಾಕಾರ ಮಳೆಗೆ ಮಧ್ಯಪ್ರದೇಶ ಸಹ ತತ್ತರಿಸಿದೆ. ಮಳೆ ಪರಿಣಾಮ ರಸ್ತೆಗೆ ನೀರು ನುಗ್ಗಿದ್ದು ಮನೆಗೆ ತೆರಳಲು ಹರಸಾಹಸ ಮಾಡುತ್ತಿರುವ ಯುವತಿ.

ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರಲ್ಲಿ ಪ್ರತಿಭಟನೆ

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಕ್ರಮಗಳನ್ನು ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಸದಸ್ಯರು ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ದ್ವೀತಿಯ ಪಿಯು ಮೌಲ್ಯಮಾಪನ, ಕಾಮೆಡ್ ಕೆ, ವೈದ್ಯಕೀಯ ಸೀಟು ಸೇರಿದಂತೆ ಅನೇಕ ವಿಚಾರಗಳಲ್ಲಿ ರಾಜ್ಯ ಸರ್ಕಾರ ಟೀಕೆಗೆ ಒಳಗಾಗಿತ್ತು.

ಸಂಚಾರ ಅಸ್ತವ್ಯಸ್ತ

ಸಂಚಾರ ಅಸ್ತವ್ಯಸ್ತ

ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಮಳೆ ಜೋರಾಗಿದ್ದು ನಾಗರಿಕರು ಪರಿತಪಿಸುವಂತಾಗಿದೆ. ಚರಂಡಿ ನೀರು ರಸ್ತೆಗೆ ನುಗ್ಗಿದೆ.

ಮಳೆಗೆ ಮನೆ ಸೇರುವುದು ಹೇಗೆ?

ಮಳೆಗೆ ಮನೆ ಸೇರುವುದು ಹೇಗೆ?

ಮುಂಬೈ ಥಾಣೆ ರೈಲ್ವೆ ನಿಲ್ದಾಣದ ದೃಶ್ಯ ಕಂಡುಬಂದಿದ್ದು ಹೀಗೆ. ಕಳೆದ ವಾರ ಸುರಿದಿದ್ದ ವ್ಯಾಪಕ ಮಳೆ ಜನಜೀವನಕ್ಕೆ ತೊಂದರೆ ನೀಡಿತ್ತು. ಎರಡು ದಿನ ಬಿಡಿವು ಮಾಡಿಕೊಂಡ ವರುಣ ಮತ್ತೆ ಆರ್ಭಟಿಸತೊಡಗಿದ್ದಾನೆ.

ಮಳೆಯಲಿ ಜತೆಯಲಿ

ಮಳೆಯಲಿ ಜತೆಯಲಿ

ಭಾರೀ ಮಳೆಗೆ ಮುಂಬೈನಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು ರಸ್ತೆಯಲ್ಲಿ ತುಂಬಿದ್ದ ನೀರಿನ ನಡುವೆಯೇ ಹೆಜ್ಜೆಹಾಕಿದ ಜೋಡಿ.

English summary
News in Pics: Mumbaikars enjoy high tide at the Marine drive in Mumbai.Tamil Nadu Chief Minister J Jayalalithaa along with her close aide Sasikala Natarajan addressing during the election campaign for her R K Nagar constituency for the by poll in Chennai. Here are some photos with news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X