ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದ ಸಮಗ್ರ ಸುದ್ದಿಗಳ ಮೇಲೆ ಚಿತ್ರ ನೋಟ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್. 03: ಗುರುವಾರ ಬೆಳ್ಳಂಬೆಳಗ್ಗೆ ಗಡಿಯಲ್ಲಿ ಗುಂಡಿನ ಕಾಳಗ. ಸೇನಾಪಡೆ ಮತ್ತು ಉಗ್ರರ ನಡುವಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಯೋಧ. ಮಕ್ಕಳೊಂದಿಗೆ ಬೆರೆತು ನೃತ್ಯ ಮಾಡಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಇಂಥ ಹಲವಾರು ಘಟನಾವಳಿಗಳಿಗೆ ಗುರುವಾರ ಸಾಕ್ಷಿಯಾಯಿತು.

ಶಿಷ್ಯ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಿರಿಯ ವೈದ್ಯರು ಸೋಮವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು ಗುರುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ .ಶ್ರೀಲಂಕಾದ ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ ಅವರನ್ನು ನವದೆಹಲಿಯಲ್ಲಿನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.

ಸ್ಮೈಲ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪರಿಸರ ಜಾಗೃತಿ ಮತ್ತು ಗಿಡಮೂಲಿಕೆಗಳ ಬಗ್ಗೆ ಮಾತನಾಡಿದರು. ಮಕ್ಕಳಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು. ಹೈದ್ರಾಬಾದ್ ನಲ್ಲಿ ನಡೆದ ಕೈ ಮಗ್ಗ ಉದ್ಯಮಗಳ ಪ್ರದರ್ಶನ ಮತ್ತು ಮಾರಾಟ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ಗೃಹ ಕೈಗಾರಿಕೆಗಳ ಮಹತ್ವವನ್ನು ಸಾರಿ ಹೇಳಿದರು. ಗುರುವಾರ ದೇಶಾದ್ಯಂತ ನಡೆದ ಸುದ್ದಿಗಳ ಮೇಲೆ ಚಿತ್ರ ನೋಟ ಇಲ್ಲಿದೆ...(ಪಿಟಿಐ ಚಿತ್ರಗಳು)

ಗುಂಡಿನ ಕಾಳಗದ ನಂತರ

ಗುಂಡಿನ ಕಾಳಗದ ನಂತರ

ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಹತ್ಯೆಮಾಡಲಾಗಿದೆ. ಉಗ್ರರ ಗುಂಡಿಗೆ ಓರ್ವ ಯೋಧ ಸಾವನಪ್ಪಿದ್ದು ರಕ್ಷಣಾ ಪಡೆಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದವು.

ವಿದ್ಯಾ ಭೂಷಣ!

ವಿದ್ಯಾ ಭೂಷಣ!

ಹೈದ್ರಾಬಾದ್ ನಲ್ಲಿ ನಡೆದ ಕೈ ಮಗ್ಗ ಉದ್ಯಮಗಳ ಪ್ರದರ್ಶನ ಮತ್ತು ಮಾರಾಟ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್.

ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ಶ್ರೀಲಂಕಾದ ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ ಅವರನ್ನು ನವದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬರಮಾಡಿಕೊಂಡ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.

ವೈದ್ಯರ ಪ್ರತಿಭಟನೆ

ವೈದ್ಯರ ಪ್ರತಿಭಟನೆ

ನೀಡುತ್ತಿರುವ ಸ್ಟೈಫಂಡ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಿರಿಯ ವೈದ್ಯರು ಬೆಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಬೆಂಗಳೂರಲ್ಲಿ ಸೈನಾ

ಬೆಂಗಳೂರಲ್ಲಿ ಸೈನಾ

ಸ್ಮೈಲ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್.

ಬರಾಕ್ ಒಬಾಮಾ ನೃತ್ಯ

ಬರಾಕ್ ಒಬಾಮಾ ನೃತ್ಯ

ಉತ್ತರ ಧ್ರುವದ ಆಲಸ್ಕಾದಲ್ಲಿ ಮಕ್ಕಳೊಂದಿಗೆ ಬೆರೆತು ಸಂಗೀತಕ್ಕೆ ಹೆಜ್ಜೆ ಹಾಕಿದ ಅಬೆರಿದ ಅಧ್ಯಕ್ಷ ಬರಾಕ್ ಒಬಾಮಾ. ಆರ್ಕ್ಟಿಕ್ ವೃತ್ತವನ್ನು ದಾಟಿದ ಅಮೆರಿಕದ ಅಧ್ಯಕ್ಷರು ಪರಿಸರ ಜಾಗೃತಿ ಬಗ್ಗೆ ಮಾತನಾಡಿದ್ದಾರೆ.

ಕೆಳಕ್ಕೆ ಬಿದ್ದ ಟ್ಯಾಂಕರ್

ಕೆಳಕ್ಕೆ ಬಿದ್ದ ಟ್ಯಾಂಕರ್

ಚಾಲಕನ ನಿಯಂತ್ರಣ ತಪ್ಪಿ ಸೂರತ್ ನಲ್ಲಿ ಪ್ರಪಾತಕ್ಕೆ ಉರುಳಿದ ಟ್ಯಾಂಕರ್. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಬಲಿಯಾಗಿದ್ದರು.

ಬಾಲಕೃಷ್ಣ ಬಂದ

ಬಾಲಕೃಷ್ಣ ಬಂದ

ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಾಣಿಸಿಕೊಳ್ಳುತ್ತಿದ್ದು, ಬಿಕೆನಾರ್ ನಲ್ಲಿ ಬಾಲ ಕೃಷ್ಣನ ಅವತಾರ ಧರಿಸಿ ಗಮನ ಸೆಳೆದ ಬಾಲಕ.

ಪ್ರಣಾಮಗಳು ಸ್ವಾಮೀಜಿ!

ಪ್ರಣಾಮಗಳು ಸ್ವಾಮೀಜಿ!

ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ರವಿಶಂಕರ್ ಗುರುಜಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಕೆ ಮಾಡಿದ್ದು ಹೀಗೆ.

English summary
News in Pics: An Indian Army soldier and four militants were killed in a night-long gunfight in Jammu and Kashmir's Kupwara district. Hundreds of house surgeons, post graduates and super speciality residents, junior doctors hold placards as they sit on a dharna demanding hike in their stipend at Victoria hospital in Bengaluru. The whole day news in Pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X