ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ತಾಯಿ ನಾಡಿಗೆ ದಶಕದ ನಂತರ ಮರಳಿದ ಗೀತಾ

|
Google Oneindia Kannada News

ನವದೆಹಲಿ, ಅಕ್ಟೋಬರ್. 26: 13 ವರ್ಷಗಳ ಹಿಂದೆ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಗೀತಾ ಅಕ್ಟೋಬರ್ 26 ರಂದು ತಾಯಿ ನಾಡಿಗೆ ಆಗಮಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ಆದರೆ ಕುಟುಂಬದವರು ಎಂದು ಹೇಳಲಾದ ಬಿಹಾರ ಮೂಲದ ಜನಾರ್ದನ ಮೆಹ್ತೋ ಅವರನ್ನು ತಂದೆ ಎಂದು ಗುರುತು ಮಾಡಿಲ್ಲ. ಕಿವುಡು ಮತ್ತು ಮೂಗಿಯಾದ ಯುವತಿಯನ್ನು ವಿದೇಶಾಂಗ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು. ನಂತರ ಗೀತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು.[ಕುಟುಂಬದವರನ್ನು ಗುರುತಿಸದ ಗೀತಾ]

ಸಾಮಾಜಿಕ ತಾಣ ಟ್ವಿಟರ್ ನಲ್ಲಿ ಸಹ ಗೀತಾ ಆಗಮನ ಟ್ರೆಂಡಿಂಗ್ ಆಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರತಿನಿತ್ಯ ಗಡಿ ತಂಟೆ ನಡೆಯುತ್ತಿದ್ರೂ ಗೀತಾ ಆಗಮನಕ್ಕೆ ಯಾವ ತೊಂದರೆ ಆಗಿಲ್ಲ. ಪಾಕಿಸ್ತಾನದಿಂದ ಆಗಮಿಸಿದ ನಂತರ ನಡೆದ ಘಟನಾವಳಿಗಳು ಮತ್ತು ಅವರನ್ನು ಬರಮಾಡಿಕೊಂಡ ಚಿತ್ರಗಳು ಇಲ್ಲಿವೆ. (ಪಿಟಿಐ ಚಿತ್ರಗಳು)

ವಿಮಾನ ನಿಲ್ದಾಣದಲ್ಲಿ ಸ್ವಾಗತ

ವಿಮಾನ ನಿಲ್ದಾಣದಲ್ಲಿ ಸ್ವಾಗತ

ಪಾಕಿಸ್ತಾನದಿಂದ ಬಂದಿಳಿದ ಗೀತಾ ಅವರನ್ನು ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.

ಪಾಕಿಸ್ತಾನದ ಅಧಿಕಾರಿಗಳು ಜತೆಗೆ

ಪಾಕಿಸ್ತಾನದ ಅಧಿಕಾರಿಗಳು ಜತೆಗೆ

ಪಾಕಿಸ್ತಾನದಿಂದ ಬಂದಿಳಿದ ಗೀತಾ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು ಪಾಕಿಸ್ತಾನದ ಹೈ ಕಮೀಷನರ್ ಮಝೂರ್ ಅಲಿ ಮೆನನ್ ಸಹ ಆಗಮಿಸಿದ್ದರು.

ಜನ್ಮಭೂಮಿಗೆ ನಮನ

ಜನ್ಮಭೂಮಿಗೆ ನಮನ

ದಶಕದ ನಂತರ ತಾಯಿ ನಾಡಿಗೆ ಬಂದಿಳಿದ ಗೀತಾ ಜನರತ್ತ ಕೈ ಬೀಸಿದ್ದು ಹೀಗೆ.

ಕರಾಚಿಯಿಂದ ಬೀಳ್ಕೊಡುಗೆ

ಕರಾಚಿಯಿಂದ ಬೀಳ್ಕೊಡುಗೆ

ಭಾರತಕ್ಕೆ ಹೊರಟ ಗೀತಾ ಅವರನ್ನು ಕರಾಚಿಯಲ್ಲಿ ಬೀಳ್ಕೊಡಲಾಯಿತು. ಗೀತಾ ಅವರನ್ನು ಪಾಲಿಸಿದ ಈದಿ ಫೌಂಡೇಶನ್ ಪ್ರಮುಖರು ಈ ವೇಳೆ ಹಾಜರಿದ್ದರು.

ಭಾರತದಿಂದ ದಿಟರ್ನ್ ಗಿಫ್ಟ್

ಪಾಕಿಸ್ತಾನದ ಕರಾಚಿಯಿಂದ ಓಡಿಬಂದಿದ್ದ ಬಾಲಕ ಮೊಹಮದ್ ರಂಜಾನ್ ನನ್ನು ಆತನ ತವರಿಗೆ ಸುರಕ್ಷಿತವಾಗಿ ಕಳಿಸಲು ಭಾರತ ಸಿದ್ಧತೆ ಮಾಡಿಕೊಂಡಿದೆ.

English summary
News In Pics: As Geeta - a hearing and speech impaired young woman who returned to India on Monday from Pakistan after more than a decade - has refused to recognise people who claimed to be her lost family members, a DNA test would be conducted to clear the air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X