ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಕಾರಿ ತಿನ್ನಿ, ಶಾಖಾಹಾರಿಗಳಾಗಿ ಎಂದ ಅರೆಬೆತ್ತಲೆ ಜೋಡಿ

|
Google Oneindia Kannada News

ನವದೆಹಲಿ, ಮಾರ್ಚ್, 16: ಸುದ್ದಿಗಳಿಗೇನು ಬರವೇ? ಸುದ್ದಿ ಇದ್ದರೂ ಸುದ್ದಿ, ಸುದ್ದಿ ಇಲ್ಲವಾದರೂ ಸುದ್ದಿ... ಟಿ-20 ವಿಶ್ವ ಕಪ್ ಹಬ್ಬ ಆರಂಭವಾಗಿದ್ದು ಪಾಕಿಸ್ತಾನ ಬಾಂಗ್ಲಾದೇಶವನ್ನು ಬಗ್ಗು ಬಡಿದಿದೆ.

ಪಂಚ ರಾಜ್ಯಗಳಲ್ಲಿ ಚುನಾವಣಾ ಕಣಾ ರಂಗೇರುತ್ತಿದೆ. ಪಶ್ಚಿಮ ಬಂಗಾಳಲ್ಲಿ ಬೌಚಿಂಗ್ ಬುಟಿಯಾ ಪ್ರಚಾರವನ್ನು ನೀವೇ ಕಣ್ಣು ತುಂಬಿಕೊಳ್ಳಬೇಕು. ಮಾಂಸಹಾರ ಬೇಡ, ತರಕಾರಿ ತಿನ್ರಪ್ಪಾ ಎಂದು ಬೆಂಗಳೂರಲ್ಲಿ ಜಾಗೃತಿ ಮೂಡಿಸಿದ ಪರಿಯನ್ನು ನೋಡಲೇಬೇಕು.

ಆಂಧ್ರ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಷಣದ ವೇಳೆ ಮೈಕ್ ಸರಿ ಮಾಡಿ ಕೊಟ್ಟ ರಾಹುಲ್ ಗಾಂಧಿ, ರಾಜಸ್ಥಾನಿ ಮೀಸೆ ಖದರ್... ಎಲ್ಲವನ್ನು ಚಿತ್ರದಲ್ಲಿ ನೋಡಿಕೊಂಡು ಬನ್ನಿ ...(ಪಿಟಿಐ ಚಿತ್ರಗಳು)

ಸಸ್ಯಹಾರಿಗಳಾಗಿ

ಸಸ್ಯಹಾರಿಗಳಾಗಿ

ಮಾಂಸಹಾರವನ್ನು ತ್ಯಜಿಸಿ ಸಸ್ಯಹಾರ ಬಳಕೆ ಮಾಡುವಂತೆ ಬೆಂಗಳೂರಿನ ಲಾಲ್ ಬಾಗ್ ಎದುರು ಜಾಗೃತಿ ಮೂಡಿಸಿದ ಪೆಟಾ ಸಂಸ್ಥೆಯ ಕಾರ್ಯಕರ್ತರು.

ಮೈಕ್ ಸರಿ ಮಾಡಿದ ರಾಹುಲ್

ಮೈಕ್ ಸರಿ ಮಾಡಿದ ರಾಹುಲ್

ಆಂಧ್ರಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾತನಾಡಲು ಮೈಕ್ ಸರಿ ಮಾಡಿಕೊಟ್ಟ ರಾಹುಲ್ ಗಾಂಧಿ.

ಮೀಸೆ ಖದರ್ ಹೇಗಿದೆ?

ಮೀಸೆ ಖದರ್ ಹೇಗಿದೆ?

ರಾಜಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ವಿದೇಶಿ ಪ್ರವಾಸಿಗರೊಂದಿಗೆ ಜಾನಪದ ತೊಡುಗೆ ತೊಟ್ಟವರ ಮೀಸೆ ಖದರ್.

ಬುಟಿಯಾ ಪ್ರಚಾರ

ಬುಟಿಯಾ ಪ್ರಚಾರ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು ಟಿಎಂಸಿ ಅಭ್ಯರ್ಥಿ, ಫುಟ್ ಬಾಲ್ ಆಟಗಾರ ಬೌಚಿಂಗ್ ಬುಟಿಯಾ ಪ್ರಚಾರ ಮಾಡಿದ ನಂತರ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು.

ಕಾರ್ಪೋರೇಶನ್ ನಲ್ಲಿ ಮಾರಾಮಾರಿ

ಕಾರ್ಪೋರೇಶನ್ ನಲ್ಲಿ ಮಾರಾಮಾರಿ

ಕೋಲ್ಕತಾದ ಮುನ್ಸಿಪಲ್ ಕಾರ್ಪೋರೇಶನ್ ವೊಂದರ ಸಭೆಯಲ್ಲಿ ಕಂಡು ಬಂದ ದೃಶ್ಯ..ಇದಕ್ಕೆ ಶೀರ್ಷಿಕೆ ಬೇಡ ಎಂದೆನಿಸುತ್ತದೆ.

ಸೈನ್ಯದ ಸಿದ್ಧತೆ

ಸೈನ್ಯದ ಸಿದ್ಧತೆ

ಜಲಂದರ್ ನಲ್ಲಿ ಶಕ್ತಿ ಪ್ರದರ್ಶನ ಮಾಡಿದ ಭಾರತದ ಭೂ ಸೇನೆಯ ಟ್ಯಾಂಕರ್.

ಬಾಂಗ್ಲಾ ಅಭಿಮಾನಿಗಳು

ಬಾಂಗ್ಲಾ ಅಭಿಮಾನಿಗಳು

ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ನಡುವೆ ನಡೆದ ಟಿ-20 ಪಂದ್ಯದ ವೇಳೆ ಕಂಡು ಬಾಂಗ್ಲಾ ಅಭಿಮಾನಿಗಳ ಸಂಭ್ರಮ.

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪ್ರತಿಭಟನೆ

ಮಲ್ಯ ಪ್ರಕರಣವನ್ನು ಖಂಡಿಸಿ ನವದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯಲು ಮುಂದಾದ ಪೊಲೀಸರು.

English summary
News In Pics: TMC candidate and footballer Baichung Bhutia clicks selfie with college students during his election campaign in a college in Siliguri. Members of People for the Ethical Treatment of Animals (PETA) paint their body with green colour as they hold the placards to urge the citizens to "Eat Green! Go Vegan" at the entrance of the Lal Bagh Botanical Garden in Bengaluru. Here are some other pics tells the whole day story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X