ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ಷಿಪ್ತ ಸುದ್ದಿ: ಲಾತೂರ್ ನಲ್ಲಿ ಮೊದಲ ಮಳೆಯ ಸಿಂಚನ

By Mahesh
|
Google Oneindia Kannada News

ಬೆಂಗಳೂರು, ಮೇ 01: ವಿದೇಶ, ದೇಶ, ರಾಜ್ಯ, ನಗರ, ಪಟ್ಟಣ, ಹಳ್ಳಿ ಹೀಗೆ ಎಲ್ಲೆಡೆಯಿಂದ ಆಯ್ದ ಸಂಕ್ಷಿಪ್ತ ಸುದ್ದಿಗಳನ್ನು ಇಲ್ಲಿ ಓದಬಹುದು.

* ಮಹಾರಾಷ್ಟ್ರದಲ್ಲಿ ಅತ್ಯಂತ ಬರಪೀಡಿತ ಪ್ರದೇಶ ಲಾತೂರ್ ನಲ್ಲಿ ಭಾನುವಾರ ಮಧ್ಯಾಹ್ನ ಮೊದಲ ಮಳೆಯ ಸಿಂಚನದಿಂದ ಆಶಾಭಾವನೆ ಮೂಡಿದೆ.

* ಉತ್ತರಾಖಂಡ್ ನ ಕಾಡ್ಗಿಚ್ಚು ನಂದಿಸಲು ಭಾರತೀಯ ವಾಯುಸೇನೆಯ ಎಂ ಐ 17 ಹೆಲಿಕಾಪ್ಟರ್ ಬಳಸಲಾಗುತ್ತಿದ್ದು, ಭೀಮ್ ತಳ್ ಕೆರೆಯಿಂದ ನೀರು ತೆಗೆದುಕೊಂಡು ಬೆಂಕಿ ನಂದಿಸುವ ಕಾರ್ಯ ಮುಂದುವರೆಸಲಾಗಿದೆ.

Latur

* ನರೇಂದ್ರ ಮೋದಿ ಅವರು 'ಪ್ರಧಾನಮಂತ್ರಿ ಉಜ್ವಾಲ ಯೋಜನೆ' ಗೆ ಮೇ 1 ರಂದು ಚಾಲನೆ ನೀಡಲಿದ್ದಾರೆ. ಸುಮಾರು 8,000 ಕೋಟಿ ಮೌಲ್ಯದ ಈ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಜನರಿಗೆ ಉಚಿತವಾಗಿ ಎಲ್ ಪಿಜಿ ಸೌಲಭ್ಯ ಸಿಗಲಿದೆ.

* ಉತ್ತರಾಖಂಡ್ ಅಗ್ನಿ ಆಕಸ್ಮಿಕದಿಂದ 1,900 ಹೆಕ್ಟೇರ್ ಅರಣ್ಯ ಪ್ರದೇಶ, 5 ಜಿಲ್ಲೆಗಳು ಹಾನಿಗೊಳಗಾಗಿದೆ.

News Flash: PM Modi to launch Pradhan Mantri Ujjwala Yojana in UP

* ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ ಇ ರಿಕ್ಷಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಸ್ಸಿ ಘಾಟ್ ನಲ್ಲಿ ಇ ಬೋಟ್ ಗಳು ಕೂಡಾ ಇಂದಿನಿಂದ ಚಲಿಸಲಿದೆ.
* ಶನಿವಾರ ಮಧ್ಯರಾತ್ರಿಯಿಂದ ಇಂಧನ ದರ ಏರಿಕೆ. ಪ್ರತಿ ಲೀಟರ್​ ಪೆಟ್ರೋಲ್ 1.06 ರಿ., ಡೀಸೆಲ್ 2.94 ರು. ಹೆಚ್ಚಳವಾಗಿದೆ. ಏಪ್ರಿಲ್ 15ರಂದು ಅಲ್ಪ ಪ್ರಮಾಣದಲ್ಲಿ ತೈಲ ಬೆಲೆ ಇಳಿಕೆಯಾಗಿತ್ತು.
English summary
News Flash: PM Modi to launch Pradhan Mantri Ujjwala Yojana in UP. May 1 is globally observed as International Labour Day. Get all the latest national and international news updates of Sunday, May 1 here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X