ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮತ್ತು ಭಾರತದ ಕೆಲವು ವಿಶೇಷ ಸುದ್ದಿಗಳು

By Vanitha
|
Google Oneindia Kannada News

ಶಿವಮೊಗ್ಗ,ಫೆಬ್ರವರಿ,18: ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಜೋಗದಲ್ಲಿರುವ ಶರಾವತಿ ಜಲವಿದ್ಯುದಾಗರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಮೂವರು ಸಿಬ್ಬಂದಿ ಮೇಲ್ಛಾವಣಿಯಲ್ಲಿ ಸಿಲುಕಿಕೊಂಡಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಅಕ್ರಮ ಗಣಿಗಾರಿಕೆ ವೇಳೆ ವ್ಯಕ್ತಿ ಸಾವು

ಹಾವೇರಿ ತಾಲೂಕಿನ ಬೆಂಚಿಹಳ್ಳಿ ಸಮೀಪದ ವರದಾ ನದಿ ತೀರದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದ ಪರಿಣಾಮ ಹೆಗ್ಗಪ್ಪ ಅಳಲಗೇರಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಹಾವೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸೊಂಟಕ್ಕೆ ಸುತ್ತಿಕೊಂಡ ತಂತಿಯಿಂದ ಚಿರತೆ ಸಾವು

ಅಕ್ಕಿನಾಳು ಗ್ರಾಮದ ತಂತಿ ಬೇಲಿಗೆ ಸಿಲುಕಿದ ಚಿರತೆಯೊಂದು ಸೊಂಟಕ್ಕೆ ಸುತ್ತಿಕೊಂಡ ತಂತಿ ಬಿಡಿಸಿಕೊಳ್ಳಲು ಸಾಧ್ಯವಾಗದೆ ಮೃತಪಟ್ಟಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಸಮೀಪ ನಡೆದಿದೆ.[ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ]

ಹನುಮಂತಪ್ಪ ಎಂಬ ರೈತನ ಮನೆಯ ತಂತಿ ಬೇಲಿಗೆ ಚಿರತೆ ಸಿಕ್ಕಿ ಹಾಕಿಕೊಂಡಿತ್ತು. ಈ ಸಂದರ್ಭದಲ್ಲಿ ಮಾಗಡಿ ಅರಣ್ಯಾಧಿಕಾರಿಗಳು ಚಿರತೆ ರಕ್ಷಿಸಲು ಮುಂದಾದರೂ ಬದುಕುಳಿಯಲಿಲ್ಲ.

ಈ ಎಲ್ಲಾ ಕರ್ನಾಟಕದ ಸುದ್ದಿಯ ಜೊತೆಗೆ ಇನ್ನಷ್ಟು ದೇಶ ವಿದೇಶದ ಸುದ್ದಿಗಳು ಇಲ್ಲಿವೆ. 251 ರೂ ಬೆಲೆ ಬಾಳುವ ಸ್ಮಾರ್ಟ್ ಫೋನ್ ಲೋಕಾರ್ಪಣೆಗೊಂಡಿದೆ. ನವದೆಹಲಿಯಲ್ಲಿ ಜೆಎನ್ ಯು ಪ್ರಕರಣ ಮತ್ತಷ್ಟು ಕಾವೇರಿದೆ. ಪುಣೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.[ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನೋಡಿ]

ಜೋಗದ ವಿದ್ಯುದಾಗರದಲ್ಲಿ ಏಕಾಏಕಿ ಬೆಂಕಿ

ಜೋಗದ ವಿದ್ಯುದಾಗರದಲ್ಲಿ ಏಕಾಏಕಿ ಬೆಂಕಿ

ಜೋಗದ ಶರಾವತಿ ವಿದ್ಯುದಾಗರದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಮತ್ತಿಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಕೆಪಿಸಿಎಲ್ ಅಧಿಕಾರಿ ಆಗಮಿಸಿದ್ದಾರೆ.

ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್

ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್

ನೋಯ್ಡಾ ಮೂಲದ ಮೊಬೈಲ್ ಸಂಸ್ಥೆಯಾದ ರಿಂಗಿಂಗ್ ಸಂಸ್ಥೆಯು 'ಫ್ರೀಡಂ-251' ಎಂಬ ಮೊಬೈಲ್ ನ್ನು ರಿಂಗಿಂಗ್ ಸಂಸ್ಥೆಯ ನಿರ್ದೇಶಕರಾದ ಮೋಹಿತ್ ಗೋಯಲ್ ಮತ್ತು ಧಾರಣ ಗೋಯಲ್ ನವದೆಹಲಿಯಲ್ಲಿ ಲೋಕಾರ್ಪಣೆಗೊಳಿಸಿದರು.

ಧಿಕ್ಕಾರ, ಧಿಕ್ಕಾರ

ಧಿಕ್ಕಾರ, ಧಿಕ್ಕಾರ

ಮುಂಬೈನ ಆಜಾದ್ ಮೈದಾನದಲ್ಲಿ ಬಜರಂಗ ದಳದ ಸದಸ್ಯರು ಭಾರತೀಯ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಕೈಗೊಂಡರು.

ಅಮೃತಸರದಲ್ಲಿ ಐಶ್ವರ್ಯಾ ರೈ

ಅಮೃತಸರದಲ್ಲಿ ಐಶ್ವರ್ಯಾ ರೈ

ಬಾಲಿವುಡ್ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅಮೃತಸರದ ಸ್ವರ್ಣ ದೇವಾಲಯಕ್ಕೆ ತಮ್ಮ ಹೊಸ ಸಿನಿಮಾವಾದ ಸರ್ಬ್ ಜಿತ್ ಗಾಗಿ ಭೇಟಿ ನೀಡಿದ್ದು, ಸ್ವರ್ಣ ದೇವಾಲಯದ ಸೌಂದರ್ಯವನ್ನು ಕಂಡು ಸಂತಸಗೊಂಡರು.

ಕೋರ್ಟಿನಲ್ಲಿ ಕನ್ಹಯ್ಯ ಕುಮಾರ್

ಕೋರ್ಟಿನಲ್ಲಿ ಕನ್ಹಯ್ಯ ಕುಮಾರ್

ವೈದ್ಯರ ಪರಸ್ಪರ ಕಲಹದ ನಡುವೆಯೇ ಜವಾಹರಲಾಲ್ ವಿವಿಯ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಪಟಿಯಾಲ ಹೌಸ್ ಕೋರ್ಟಿನಲ್ಲಿ ಹಾಜರುಪಡಿಸಿದರು.

English summary
News digest Karnataka and India. Bajrang Dal activists staging a protest against alleged anti-national activities at JNU at Azad Maidan in Mumbai. Director of Ringing Bells, Mohit Goel with CEO, Dhaarna Goel during the launch of Smartphone-Ringing Bells Freedom 251, in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X