ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಂದು ದಿನ ನಿಮ್ಮ ಅಣ್ಣ (ನೇತಾಜಿ) ವಾಪಸ್ ಬರುತ್ತಾರೆ'

By ವಿಕಾಸ್ ನಂಜಪ್ಪ
|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್ 19 : 'ನನಗೆ ನಂಬಿಕೆ ಇದೆ, ಒಂದು ದಿನ ನಿಮ್ಮ ಅಣ್ಣ ವಾಪಸ್ ಬರುತ್ತಾರೆ' ಎಂದು ಸುಭಾಷ್ ಚಂದ್ರ ಬೋಸ್ ಪತ್ನಿ ಎಮಿಲಿ ಬೋಸ್ ನೇತಾಜಿ ಸಹೋದರ ಶರತ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರ ಈಗ ಬಹಿರಂಗಗೊಂಡಿದೆ.

ಸುಭಾಷ್ ಚಂದ್ರ ಬೋಸ್ ಪತ್ನಿ ಎಮಿಲಿ ಬೋಸ್ ಅವರು ನೇತಾಜಿ ಕುಟುಂಬದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದರು ಎಂಬುದು ಇದರಿಂದ ಬಹಿರಂಗಗೊಂಡಿದೆ. 1945ರಲ್ಲಿ ನೇತಾಜಿ ಸಾವಿನ ಸುದ್ದಿ ಕೇಳಿದ ಬಳಿಕ ಈ ಪತ್ರ ವ್ಯವಹಾರ ಹೆಚ್ಚಾಗಿತ್ತು. [ನೇತಾಜಿ ರಹಸ್ಯ ಬಯಲು : ಮಮತಾ ಸೂಪರ್ ಟೈಮಿಂಗ್]

mamata banerjee

ಪತ್ರದಲ್ಲಿ ತಮ್ಮ ಪುತ್ರಿ ಅನಿತಾ ಫಫ್ ಅವರ ಬೆಳವಣಿಗೆ ಬಗ್ಗೆ ಎಮಿಲಿ ಬೋಸ್ ಮಾಹಿತಿ ನೀಡುತ್ತಿದ್ದರು. ಆದರೆ, ಅವರು ಎಂದೂ ನೇತಾಜಿ ಕುಟುಂಬದಿಂದ ಆರ್ಥಿಕ ನೆರವನ್ನು ಕೇಳಿರಲಿಲ್ಲ ಎಂಬುದು ಪಶ್ಚಿಮ ಬಂಗಾಳ ಸರ್ಕಾರ ಬಹಿರಂಗಗೊಳಿಸಿದ 64 ಕಡತಗಗಳಿಂದ ತಿಳಿದುಬಂದಿದೆ. [ಕಡತದೊಳಗಿನ ಸತ್ಯ: ನೇತಾಜಿ 1945ರ ನಂತರವೂ ಬದುಕಿದ್ದರು]

ಎಮಿಲಿ ಬೋಸ್ ಬರೆಯುತ್ತಿದ್ದ ಎಲ್ಲಾ ಪತ್ರಗಳ ಬಗ್ಗೆ ಸರ್ಕಾರ ಮಾಹಿತಿ ಸಂಗ್ರಹಣೆ ಮಾಡುತ್ತಿತ್ತು. ನೇತಾಜಿ ಬದುಕಿದ್ದಾರೋ? ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಈ ಕ್ರಮಗಳನ್ನು ಅನುಸರಿಸುತ್ತಿತ್ತು. [ನೇತಾಜಿಗೆ ಸಂಬಂಧಿಸಿದ ರಹಸ್ಯ ಕಡತ ಬಹಿರಂಗ]

ಪತ್ನಿ ಬಗ್ಗೆ ಕಡತದಲ್ಲಿ ಮಾಹಿತಿ : 1946ರ ಮೇ 4ರ ಕಡತದಲ್ಲಿ ನೇತಾಜಿ ಪತ್ನಿಯ ಬಗ್ಗೆ ಮಾಹಿತಿ ಇದೆ. 1941ರಲ್ಲಿ ಎಮಿಲಿ ಅವರು ಬರ್ಲಿನ್‌ನಲ್ಲಿ ಬೋಸ್ ಅವರನ್ನು ಭೇಟಿ ಮಾಡುತ್ತಾರೆ ಮತ್ತು 1942ರಲ್ಲಿ ಇಬ್ಬರ ವಿವಾಹವಾಗುತ್ತದೆ.

1945ರಲ್ಲಿ ನೇತಾಜಿ ಬದುಕಿರುವ ಕುರಿತು ತಿಳಿಯಲು ಎಮಿಲಿ ನೇತಾಜಿ ಕುಟುಂಬಕ್ಕೆ ಪತ್ರ ಬರೆಯುತ್ತಾರೆ. ನಿಮ್ಮ ಕುಟುಂಬದಿಂದ ಆರ್ಥಿಕ ಸಹಾಯ ಬೇಡ ಎಂದು ಪತ್ರದಲ್ಲಿ ತಿಳಿಸುವ ಎಮಿಲಿ ಅವರು ಪುತ್ರಿಯ ಬಗ್ಗೆ ಅದರಲ್ಲಿ ಮಾಹಿತಿ ನೀಡುತ್ತಾರೆ.

ಹಿಂದೂ ಸಂಪ್ರದಾಯದಂತೆ ನೇತಾಜಿ ಅವರ ಜೊತೆ ವಿವಾಹವಾಗಿದ್ದೇವೆ. ಜರ್ಮನಿಯಲ್ಲಿ ಕಾನೂನು ತೊಡಕುಗಳಿಂದಾಗಿ ವಿವಾಹ ನೋಂದಣಿ ಮಾಡಿಸಲಾಗಲಿಲ್ಲ ಎಂದು ತಿಳಿಸುತ್ತಾರೆ.

ಪಶ್ಚಿಮ ಬಂಗಾಳ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳಲ್ಲಿ ಇಂತಹ ಹಲವಾರು ಪತ್ರಗಳಿವೆ. ಒಂದು ಒತ್ರದಲ್ಲಿ ಎಮಿಲಿ ಅವರು 'ನಿಮ್ಮ ಅಣ್ಣ ಒಂದು ದಿನ ಬಂದೇ ಬರುತ್ತಾರೆ. ಈ ಕನಸು ನನಸಾಗುತ್ತದೆ' ಎಂದು ಬರೆದಿದ್ದಾರೆ. [ಪಿಟಿಐ ಚಿತ್ರ]

English summary
Emilie Schenkl the wife of Netaji Subhas Chandra Bose was in constant touch with the family of the revolutionary leader. The correspondence with the family members of Netaji are part of the 64 files de-classified by the West Bengal government yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X