ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡತದೊಳಗಿನ ಸತ್ಯ: ನೇತಾಜಿ 1945ರ ನಂತರವೂ ಬದುಕಿದ್ದರು

By ವಿಕಾಸ್ ನಂಜಪ್ಪ
|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್. 18: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರ ನಂತರವೂ ಬದುಕಿದ್ದರು ಎಂಬುದಕ್ಕೆ ಕೆಲ ಕಡತಗಳು ಸಾಕ್ಷಿ ಹೇಳುತ್ತವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಈ ಆಧಾರದಲ್ಲಿಯೇ ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ. ನೇತಾಜಿ ಆಗಸ್ಟ್ 18, 1945 ರಂದು ತೈವಾನ್ ವಿಮಾನ ದುರಂತದಲ್ಲಿ ಕಣ್ಮರೆಯಾದರು ಎಂದು ಇತಿಹಾಸ ಹೇಳುತ್ತದೆ.[ನೇತಾಜಿ ರಹಸ್ಯ ಬಯಲು : ಮಮತಾ ಸೂಪರ್ ಟೈಮಿಂಗ್]

india

ದಾಖಲೆಗಳು ನೇತಾಜಿ ಬದುಕಿದ್ದರು ಎನ್ನುತ್ತವೆ
ನೇತಾಜಿಗೆ ಸಂಬಂಧಿಸಿದ 64 ದಾಖಲೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ನೇತಾಜಿ ಮತ್ತು ಒಂದು ಮಗುವಿನ ಬಗ್ಗೆ ಉಲ್ಲೇಖ ಬರುತ್ತಿದ್ದು ಅದರ ಆಧಾರದಲ್ಲಿಯೇ ಬೇಹುಗಾರಿಕೆ ನಡೆದಿದೆ ಎಂದು ಹೇಳಿದ್ದಾರೆ.

ಕುಟುಂಬದ ಮೂಲ ಹುಡುಕಾಟ
ನೇತಾಜಿ ಕುಟುಂಬದ ಮೇಲೆ ಒಟ್ಟು 14 ಗುಪ್ತಚರ ದಳಗಳು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಲೇ ಇದ್ದವು. ಪಶ್ಚಿಮ ಬಂಗಾಳ 1967ರ ತನಕ ಕಾಂಗ್ರೆಸ್ ಆಡಳಿತದ ಅಡಿಯಲ್ಲೇ ಇತ್ತು. ಹಾಗಾಗಿ ಸರ್ಕಾರದ ಆದೇಶಕ್ಕೆ ಅನುಗುಣವಾಗಿಯೇ ಸಂಸ್ಥೆಗಳು ನಡೆದುಕೊಳ್ಳುತ್ತಿದ್ದವು ಎಂದು ಮಮತಾ ಹೇಳಿದರು.[ಸುಭಾಷ್ ಚಂದ್ರ ಬೋಸ್ ಗೆ ಸಂಬಂಧಿಸಿದ 64 ರಹಸ್ಯ ದಾಖಲೆ ಬಹಿರಂಗ]

ದಾಖಲೆಗಳ ಬಗ್ಗೆ ಸ್ಪಷ್ಟನೆ
ಕೇಂದ್ರ ಸರ್ಕಾರದ ಮೇಲೆ ಈ ಎಲ್ಲ ದಾಖಲೆಗಳ ಬಗ್ಗೆ ಸ್ಪಷ್ಟವಾದ ವಿವರ ನೀಡುವ ಜವಾಬ್ದಾರಿ ಇದೆ. ಇಂಥ ವಿಚಾರಗಳನ್ನು ಅಡಗಿಸುವುದರಿಂದ ಯಾವ ಲಾಭವಿದೆ ಎಂಬುದು ತಿಳಿಯುತ್ತಿಲ್ಲ. ನಾನು ನನ್ನ ಆಡಳಿತದ ಅಡಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಕೇಂದ್ರ ಸರ್ಕಾರ ಇನ್ನು 130 ಫೈಲ್ ಗಳನ್ನು ಬಹಿರಂಗ ಮಾಡಬೇಕಿದೆ ಎಂದು ಹೇಳಿದರು.

English summary
The statement made by West Bengal Chief Minister, Mamata Banerjee indicate that Netaji Subhas Chandra Bose was alive after 1945. She was basing the statement on the de-classified files released by the West Bengal government today. The statement made by Mamata Banerjee is incidentally the first by a head of state (government) in which it has been stated that Netaji Bose may have been alive after 1945. The official line that has been taken by successive governments is that Bose had died in a plane crash at Taihoku, Taiwan on August 18 1945.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X