ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಿವುಡ್ ನ ವರ್ಣಭೇದ ನೀತಿ ಬಗ್ಗೆ ನವಾಜುದ್ದೀನ್ ಸಿದ್ಧಿಕಿ ಬೇಸರ

ಬಾಲಿವುಡ್ ನಲ್ಲಿರುವ ವರ್ಣಭೇದ ನೀತಿಯ ವಿರುದ್ಧ ನವಾಜುದ್ದೀನ್ ಸಿದ್ಧಿಕಿ ಬೇಸರ. ಟ್ವಿಟರ್ ನಲ್ಲಿ ಬೇಸರ ತೋಡಿಕೊಂಡ ನವಾಜುದ್ದೀನ್.

|
Google Oneindia Kannada News

ನವದೆಹಲಿ, ಜುಲೈ 18: ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿರುವ ವರ್ಣಭೇದ ನೀತಿಯ ಕುರಿತಂತೆ ನವಾಜುದ್ದೀನ್ ಸಿದ್ಧಿಕಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಶ್ರೀದೇವಿ ಅವರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಚಿತ್ರ ರಸಿಕರ ಗಮನ ಸಳೆದಿರುವ ನವಾಜುದ್ದೀನ್ ಗೆ ಭಾರತೀಯ ಚಿತ್ರರಂಗ ರೂಪಿಸಿದ ಪ್ರತಿಭಾನ್ವಿತ ಕಲಾವಿದರೊಬ್ಬರು ಎಂಬ ಹೆಗ್ಗಳಿಕೆ ಇದೆ. ವಿಶ್ವ ಮಟ್ಟದಲ್ಲಿ ಅವರಿಗೆ ಮನ್ನಣೆಯಿದೆ.

Nawazuddin Siddiqui’s cryptic tweet points toward discrimination on the basis of appearance

ಆದರೂ, ತಮ್ಮ ಅಭಿನಯದ ಚಿತ್ರಗಳು ತೆರೆಗೆ ಬಂದಾಗ ಅದರಲ್ಲಿ ಅವರ ಅಭಿನಯವನ್ನು ಹೆಚ್ಚಾಗಿ ಬಾಲಿವುಡ್ ನ ನಟ, ನಟಿಯರು ಪರಿಗಣಿಸುವುದಿಲ್ಲ. ಚಿತ್ರದ ಪ್ರಚಾರ ಕಾರ್ಯದಲ್ಲಾಗಲೀ, ವಿಮರ್ಶೆಗಳಲ್ಲಾಗಲೀ, ತಮ್ಮ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂಬ ಬೇಸರ ಅವರಲ್ಲಿ ಮೂಡಿದೆಯಂತೆ. ಇದಕ್ಕೆ ಕಾರಣ, ತಾವು ಸುಂದರವಾಗಿಲ್ಲದಿರುವುದು ಎಂದು ಭಾವಿಸಿರುವ ಅವರು, ಈ ಬಗ್ಗೆ ಬೇಸರಪಟ್ಟುಕೊಂಡಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ''ನನ್ನನ್ನು ಕಟ್ಟುಮಸ್ತಾದ, ಸುಂದರವಾದ ಬಾಲಿವುಡ್ ಕಲಾವಿದರೊಂದಿಗೆ ನಿಲ್ಲಿಸಿ ಹೊಗಳದೇ ಇದ್ದಿದ್ದಕ್ಕಾಗಿ ಧನ್ಯವಾದಗಳು. ಹೌದು. ನಾನು ಕಪ್ಪಾಗಿದ್ದೇನೆ. ನೋಡಲು ಸುಂದರವಾಗಿಲ್ಲ. ಆದರೆ, ನಾನು ಆ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದಿಲ್ಲ'' ಎಂದು ತಿಳಿಸಿದ್ದಾರೆ.

English summary
Nawazuddin Siddiqui is one of the finest talents Indian cinema has ever produced. The powerhouse of talent, who has worked with some of the biggest names in the industry evidently hinted at discrimination in an obscure tweet Monday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X