{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/india/navy-commissions-weapon-storage-facility-ins-vajrakosh-in-karwar-096807.html" }, "headline": "ಕಾರವಾರ: ಲೋಕಾರ್ಪಣೆಯಾದ ವಜ್ರಕೋಶ ವಿಶೇಷಗಳೇನು?", "url":"http://kannada.oneindia.com/news/india/navy-commissions-weapon-storage-facility-ins-vajrakosh-in-karwar-096807.html", "image": { "@type": "ImageObject", "url": "http://kannada.oneindia.com/img/1200x60x675/2015/09/10-1441888098-indianarmy.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/09/10-1441888098-indianarmy.jpg", "datePublished": "2015-09-10T17:58:46+05:30", "dateModified": "2015-09-10T18:10:09+05:30", "author": { "@type": "Person", "name": "ಒನ್ ಇಂಡಿಯಾ ಸ್ಟಾಫ್ " }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"India", "description": "Indian Navy on Wednesday added another critical installation under its command with the commissioning of INS Vajrakosh at Karwar.", "keywords": "Navy commissions weapon storage facility INS Vajrakosh in Karwar, ಕಾರವಾರ: ಲೋಕಾರ್ಪಣೆಯಾದ ವಜ್ರಕೋಶ ವಿಶೇಷಗಳೇನು? Indian Army News In Kannada ", "articleBody":"ಕಾರವಾರ, ಸೆಪ್ಟೆಂಬರ್. 10: ಭಾರತೀಯ ನೌಕಾಸೇನೆಯ ಬಲ ಮತ್ತಷ್ಟು ಹೆಚ್ಚಿದೆ. ಐಎನ್ ಎಸ್ ವಜ್ರಕೋಶ ಕಾರವಾರದಲ್ಲಿ ಲೋಕಾರ್ಪಣೆಯಾಗಿದ್ದು ಸೇನೆಯ ಶಕ್ತಿ ಹೆಚ್ಚಿದೆ. ಈ ವಿಶೇಷ ಸಂಗ್ರಹ ಕೇಂದ್ರವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಲೋಕಾರ್ಪಣೆ ಮಾಡಿದ್ದಾರೆ.ಕಾರವಾರ ಬಳಿಯ ನೌಕಾನೆಲೆಯಿಂದ 40 ಕಿ.ಮೀ ದೂರದ ಹಟ್ಟಿಕೇರಿ ಎಂಬಲ್ಲಿ ನೌಕಾಪಡೆ ಶಸ್ತ್ರಾಸ್ತ್ರ ಸಂಗ್ರಹಾಗಾರ ನಿರ್ಮಿಸಿದೆ. ಸೀಬರ್ಡ್& zwnj ಯೋಜನೆಯ ಎರಡನೇ ಹಂತದ-ಎ ಕಾಮಗಾರಿಗಳಲ್ಲಿ ಮೊದಲ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಕ್ಷಿಪಣಿಗಳನ್ನು ಸಂಗ್ರಹಿಸಿ ಇಡಲು ವಿಶೇಷ ವ್ಯವಸ್ಥೆ ವಜ್ರಕೋಶದಲ್ಲಿದೆ.ವಿಶೇಷ ಬಗೆಯ ಸಂಗ್ರಹಾಗಾರದಲ್ಲಿ ಯುದ್ಧ ಉಪಕರಣಗಳನ್ನು ರಕ್ಷಿಸಿ ಇಡಬಹುದು. ದೇಶದ ರಕ್ಷಣಾ ವ್ಯವಸ್ಥೆಯ ಬಲ ಹೆಚ್ಚಾಗಿದ್ದು ಕರಾವಳಿ ತೀರದಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಬಹುದು ಎಂದು ನೌಕಾದಳದ ವಕ್ತಾರ ಡಿ ಕೆ ಶರ್ಮಾ ಹೇಳಿದರು. ಮಳೆ ನಡುವೆಯೇ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಯಿತು. ಕ್ಯಾಪ್ಟನ್ ಅರವಿಂದ್ ಚಾರಿ ಸೇರಿದಂತೆ ಅನೇಕರು ಹಾಜರಿದ್ದರು.ಮೀನುಗಾರನಿಗೆ ಸನ್ಮಾನಗೋವಾ ತೀರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಪೈಲಟ್ ನ್ನು ಕಳೆದ ಮಾರ್ಚ್ ನಲ್ಲಿ ರಕ್ಷಿಸಿದ ಮೀನನುಗಾರರನ್ನು ಕೇಂದ್ರ ರಕ್ಷಣಾ ಸಚಿವ ಪರಿಕ್ಕರ್ ಸನ್ಮಾನಿಸಿದರು.ನೌಕಾ ಪಡೆಯ ಮುಖ್ಯಸ್ಥ ಆರ್ ಕೆ. ಧವನ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಕಾರವಾರ ಸೇನೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಪಶ್ಚಿಮ ಕರಾವಳಿ ಕಾಯಲು ಕಾರವಾರದಿಂದಲೇ ಕಾರ್ಯಭಾರ ನಡೆಸಲಾಗುತ್ತಿದೆ. ಸದ್ಯ ಹೊಂದಿರುವ ಬಲವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲಾಗುತ್ತಿದ್ದು ದೇಶದಮ ರಕ್ಷಣೆಗೆ ಸದಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.(ಒನ್ ಇಂಡಿಯಾ ಸುದ್ದಿ)" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರ: ಲೋಕಾರ್ಪಣೆಯಾದ ವಜ್ರಕೋಶ ವಿಶೇಷಗಳೇನು?

By ಒನ್ ಇಂಡಿಯಾ ಸ್ಟಾಫ್
|
Google Oneindia Kannada News

ಕಾರವಾರ, ಸೆಪ್ಟೆಂಬರ್. 10: ಭಾರತೀಯ ನೌಕಾಸೇನೆಯ ಬಲ ಮತ್ತಷ್ಟು ಹೆಚ್ಚಿದೆ. ಐಎನ್ ಎಸ್ ವಜ್ರಕೋಶ ಕಾರವಾರದಲ್ಲಿ ಲೋಕಾರ್ಪಣೆಯಾಗಿದ್ದು ಸೇನೆಯ ಶಕ್ತಿ ಹೆಚ್ಚಿದೆ. ಈ ವಿಶೇಷ ಸಂಗ್ರಹ ಕೇಂದ್ರವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಲೋಕಾರ್ಪಣೆ ಮಾಡಿದ್ದಾರೆ.

ಕಾರವಾರ ಬಳಿಯ ನೌಕಾನೆಲೆಯಿಂದ 40 ಕಿ.ಮೀ ದೂರದ ಹಟ್ಟಿಕೇರಿ ಎಂಬಲ್ಲಿ ನೌಕಾಪಡೆ ಶಸ್ತ್ರಾಸ್ತ್ರ ಸಂಗ್ರಹಾಗಾರ ನಿರ್ಮಿಸಿದೆ. ಸೀಬರ್ಡ್‌ ಯೋಜನೆಯ ಎರಡನೇ ಹಂತದ-ಎ ಕಾಮಗಾರಿಗಳಲ್ಲಿ ಮೊದಲ ಭಾಗವಾಗಿ ಇದನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ಕ್ಷಿಪಣಿಗಳನ್ನು ಸಂಗ್ರಹಿಸಿ ಇಡಲು ವಿಶೇಷ ವ್ಯವಸ್ಥೆ ವಜ್ರಕೋಶದಲ್ಲಿದೆ.

Navy commissions weapon storage facility INS Vajrakosh in Karwar

ವಿಶೇಷ ಬಗೆಯ ಸಂಗ್ರಹಾಗಾರದಲ್ಲಿ ಯುದ್ಧ ಉಪಕರಣಗಳನ್ನು ರಕ್ಷಿಸಿ ಇಡಬಹುದು. ದೇಶದ ರಕ್ಷಣಾ ವ್ಯವಸ್ಥೆಯ ಬಲ ಹೆಚ್ಚಾಗಿದ್ದು ಕರಾವಳಿ ತೀರದಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಬಹುದು ಎಂದು ನೌಕಾದಳದ ವಕ್ತಾರ ಡಿ ಕೆ ಶರ್ಮಾ ಹೇಳಿದರು. ಮಳೆ ನಡುವೆಯೇ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಯಿತು. ಕ್ಯಾಪ್ಟನ್ ಅರವಿಂದ್ ಚಾರಿ ಸೇರಿದಂತೆ ಅನೇಕರು ಹಾಜರಿದ್ದರು.

ಮೀನುಗಾರನಿಗೆ ಸನ್ಮಾನ
ಗೋವಾ ತೀರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಪೈಲಟ್ ನ್ನು ಕಳೆದ ಮಾರ್ಚ್ ನಲ್ಲಿ ರಕ್ಷಿಸಿದ ಮೀನನುಗಾರರನ್ನು ಕೇಂದ್ರ ರಕ್ಷಣಾ ಸಚಿವ ಪರಿಕ್ಕರ್ ಸನ್ಮಾನಿಸಿದರು.

army

ನೌಕಾ ಪಡೆಯ ಮುಖ್ಯಸ್ಥ ಆರ್ ಕೆ. ಧವನ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಕಾರವಾರ ಸೇನೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಪಶ್ಚಿಮ ಕರಾವಳಿ ಕಾಯಲು ಕಾರವಾರದಿಂದಲೇ ಕಾರ್ಯಭಾರ ನಡೆಸಲಾಗುತ್ತಿದೆ. ಸದ್ಯ ಹೊಂದಿರುವ ಬಲವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲಾಗುತ್ತಿದ್ದು ದೇಶದಮ ರಕ್ಷಣೆಗೆ ಸದಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.(ಒನ್ ಇಂಡಿಯಾ ಸುದ್ದಿ)

English summary
Indian Navy on Wednesday added another critical installation under its command with the commissioning of INS Vajrakosh at Karwar. Navy said the commissioning of INS Vajrakosh, the third naval establishment in Karwar, will bolster the offensive and defensive capabilities of its platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X