ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಾಜ್ ಇ ಪಂಜಾಬ್ ಪಕ್ಷ ಸೇರಲಿರುವ ನವಜ್ಯೋತ್ ಸಿಧು

By Mahesh
|
Google Oneindia Kannada News

ಚಂಡೀಗಢ, ಸೆ.02: ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಅವರು ಹೊಸ ರಾಜಕೀಯ ಪಕ್ಷಕ್ಕೆ ನಾಂದಿ ಹಾಡಿದ್ದಾರೆ. ಮುಂದಿನ ವಾರ ಪಕ್ಷಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಪಂಜಾಬಿನ ಅಸೆಂಬ್ಲಿ ಚುನಾವಣೆಯಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.[ರಾಜ್ಯಸಭೆಗೆ ಗುಡ್ ಬೈ ಹೇಳಿದ ನವಜ್ಯೋತ್ ಸಿಂಗ್ ಸಿಧು]

ಸೆಪ್ಟೆಂಬರ್ 09ರಂದು ಅವಾಜ್ ಇ ಪಂಜಾಬ್ ಹೆಸರಿನ ಪಕ್ಷ ಉದಯವಾಗಲಿದೆ ಎಂದು ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

Navjot Singh Sidhu to lead Awaz-e-Punjab political front Punjab

ಕಳೆದ ತಿಂಗಳು ಬಿಜೆಪಿ ಸಂಸತ್ ಸ್ಥಾನದಿಂದ ಕೆಳಗಿಳಿದಿದ್ದ ಸಿಧು ಅವರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಜತೆಗೆ ಕಾಂಗ್ರೆಸ್ ನಿಂದಲೂ ಸಿಧುಗೆ ಆಹ್ವಾನ ಬಂದಿತ್ತು.[ಸಿಕ್ಸರ್ ಸಿಧು ಚುನಾವಣೆ ಫೀಲ್ಡ್ ನಿಂದ ಹೊರಕ್ಕೆ!]

2014ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ತಮ್ಮ ಅಮೃತಸರ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಪಂಜಾಬಿನ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಕೌರ್ ಅವರು ಕೂಡಾ ಸದ್ಯದಲ್ಲೇ ಬಿಜೆಪಿ ತೊರೆಯುವ ಸಾಧ್ಯತೆಯಿದೆ.

English summary
Navjot Singh Sidhu will lead a new political front Awaz-e-Punjab which will be launched on september 9 in Punjab, where assembly elections will be held early next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X