ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ರಾಜೀವ್ ಗಾಂಧಿಗೆ ನಮನ ಸಲ್ಲಿಸಿದ ನಾಯಕರು

|
Google Oneindia Kannada News

ನವದೆಹಲಿ, ಮೇ 21 : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 25ನೇ ಪುಣ್ಯ ತಿಥಿ ಅಂಗವಾಗಿ ಶನಿವಾರ ದೇಶಾದ್ಯಂತ ಅವರಿಗೆ ವಂದನೆ ಸಲ್ಲಿಸಲಾಗುತ್ತಿದೆ. 1991ರ ಮೇ 21ರಂದು ತಮಿಳುನಾಡಿನ ಶ್ರೀ ಪೆರಂಬೂರಿನಲ್ಲಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇ ಉಗ್ರರು ಹತ್ಯೆ ಮಾಡಿದ್ದರು.

ರಾಜೀವ್ ​ಗಾಂಧಿ ಅವರ ಪುಣ್ಯ ತಿಥಿ ಅಂಗವಾಗಿ ನವದೆಹಲಿಯ ವೀರಭೂಮಿಯಲ್ಲಿ ರಾಜೀವ್ ಗಾಂಧಿ ಅವರ ಸಮಾಧಿ ಸ್ಥಳಕ್ಕೆ ಹಲವು ನಾಯಕರು ಶನಿವಾರ ಭೇಟಿ ನೀಡಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಮನ ಸಲ್ಲಿಸಿದರು. [ರಾಜೀವ್‌ ಗಾಂಧಿ ಮಾನವಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ]

rajiv gandhi

ಕರ್ನಾಟಕದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ರಾಜೀವ್ ಗಾಂಧಿ ಅವರಿಗೆ ನಮನ ಸಲ್ಲಿಸಿದರು. [ರಾಜೀವ್ ಹಂತಕರ ಬಿಡುಗಡೆ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ!]

ಅಂದು ಏನಾಗಿತ್ತು? : 1991ರ ಮೇ 21 ರಂದು ವಿಶಾಖಪಟ್ಟಣದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಚೆನ್ನೈ ಸಮೀಪದ ಶ್ರೀ ಪೆರಂಬೂರಿಗೆ ರಾಜೀವ್ ಗಾಂಧಿ ಆಗಮಿಸಿದ್ದರು. ರಾತ್ರಿ 10.20ರ ಸುಮಾರಿಗೆ ರಾಜೀವ್ ವೇದಿಕೆಯತ್ತ ತೆರಳುವಾಗ ಆಶೀರ್ವಾದ ಬೇಡುವ ನೆಪದಲ್ಲಿ ಕಾಲಿಗೆ ಬಿದ್ದಿದ್ದ ಎಲ್‌ಟಿಟಿಇ ಸದಸ್ಯೆ ತನ್ನನ್ನು ಸ್ಫೋಟಿಸಿಕೊಂಡಿದ್ದಳು. [ಮೋದಿ ಸರ್ಕಾರಕ್ಕೆ ಇಂದಿರಾ, ರಾಜೀವ್ ಮೇಲೇಕೆ ಕೋಪ?]

ಆ ಕರಾಳ ದಿನದ ನೆನಪು ಇನ್ನೂ ಮಾಸಿಲ್ಲ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಉಗ್ರರ ಕೃತ್ಯಕ್ಕೆ ದೇಶವೆ ಬೆಚ್ಚಿ ಬಿದ್ದಿತ್ತು. ಇಂದು ಆ ಕರಾಳ ದಿನಕ್ಕೆ 25 ವರ್ಷಗಳು. [ಪಿಟಿಐ ಚಿತ್ರಗಳು]

English summary
Congress president Sonia Gandhi and party Vice President Rahul Gandhi tributes to former Prime Minister Rajiv Gandhi on May 21, Saturday on his 25th death anniversary, at his memorial Vir Bhumi New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X