ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮದರ್ ಇಂಡಿಯಾ' ನರ್ಗಿಸ್ ದತ್ ಗೆ ಗೂಗಲ್ ನಮನ

|
Google Oneindia Kannada News

ನವದೆಹಲಿ, ಜೂ. 1: 'ಮದರ್ ಇಂಡಿಯಾ' ಎಂದೇ ಪ್ರಖ್ಯಾತಿ ಪಡೆದಿರುವ ನಟಿ ನರ್ಗಿಸ್ ದತ್ ಅವರಿಗೆ ಗೂಗಲ್ ನಮನ ಸಲ್ಲಿಸಿದೆ. ಅವರ 86 ನೇ ಹುಟ್ಟುಹಬ್ಬವನ್ನು ತನ್ನ ಡೂಡಲ್ ನಲ್ಲಿ ಅನಾವರಣ ಮಾಡಿರುವ ಗೂಗಲ್ ನಲ್ಲಿ ಸೀರೆ ಸೆರಗು ಹೊದ್ದ ನರ್ಗೀಸ್ ಕಾಣಿಸುತ್ತಾರೆ.

ನರ್ಗಿಸ್ ದತ್ ಎಂದು ಖ್ಯಾತರಾದ ಫಾತಿಮಾ ರಶೀದ್ ಜನಿಸಿದ್ದು 1929 ರ ಜೂನ್ 1 ರಂದು. ಬಾಲನಟಿಯಾಗಿ 1935 ರಲ್ಲಿ ಹಿಂದಿ ಚಿತ್ರರಂಗವನ್ನು ಪ್ರವೇಶ ಮಾಡಿದರು. ನಂತರ 1942 ರಲ್ಲಿ ನಾಯಕನಟಿಯಾಗಿ 'ತಮನ್ನಾ' ಚಿತ್ರದ ಮೂಲಕ ಪರಿಚಿತರಾದರು.[ಮಾನವ ಕಂಪ್ಯೂಟರ್ ಶಕುಂತಲಾಗೆ ಗೂಗಲ್ ನಮನ]

nargis dutt

ರಾಜ್ ಕಪೂರ್ ಜತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ ನರ್ಗಿಸ್ 1960ರ ತನಕ ನಾಯಕ ನಟಿಯಾಗಿ ಮೆರೆದರು. ಮದರ್ ಇಂಡಿಯಾ (1957) ರ ಆಕೆಯ ರಾಧಾ ಪಾತ್ರ ಫಿಲ್ಮ್ ಫೇರ್ ಪ್ರಶಸ್ತಿ ತಂದುಕೊಡುವುದರ ಜತೆಗೆ ಜನಮನ್ನಣೆಯನ್ನು ಗಳಿಸಿತು.

1949ರಲ್ಲಿ ತೆರೆಕಂಡ 'ಬರ್ಸಾತ್' ಮತ್ತು 'ಅಂದಾಜ್', 1951 'ಆವಾರಾ' ಮತ್ತು 'ದೀದಾರ್', 1955ರ 'ಶ್ರೀ 420' ಮತ್ತು 1956ರ 'ಚೋರಿ ಚೋರಿ' ಅತ್ಯಂತ ಜನಪ್ರಿಯ ಚಿತ್ರಗಳಾದವು. 1981ರಲ್ಲಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ನರ್ಗೀಸ್‌ ಸಾವನ್ನಪ್ಪಿದರು. ಇವರ ಸಾವಿಗೆ ಸ್ವಲ್ಪ ಸಮಯದ ಮೊದಲು ಮಗ ಸಂಜಯ್‌ ದತ್‌ ಚಿತ್ರರಂಗ ಪ್ರವೇಶಿಸಿದ್ದರು. [ಆರ್.ಕೆ.ನಾರಾಯಣ್ ಒಂದು ನೆನಪು]

ನಟ ಸುನೀಲ್ ದತ್ ಅವರರನ್ನು ಮದುವೆಯಾದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು. ರಾಜ್ಯಸಭೆಯ ಸದಸ್ಯೆಯಾಗಿಯೂ ನರ್ಗಿಸ್ ಕೆಲಸ ಮಾಡಿದರು.

1982ರಲ್ಲಿ ಅವರ ಸ್ಮರಣಾರ್ಥವಾಗಿ ನರ್ಗಿಸ್ ದತ್ ಮೆಮೋರಿಯಲ್ ಕ್ಯಾನ್ಸರ್ ಫೌಂಡೇಶನ್ ಸ್ಥಾಪಿಸಲಾಯಿತು. ಅವರು ಚಲನಚಿತ್ರರಂಗ ಮತ್ತು ಸಮಾಜಕ್ಕೆ ಸಲ್ಲಿಸಿದ ಶ್ರೇಷ್ಠ ಸೇವೆಯ ಗೌರವಾರ್ಥ 'ನರ್ಗಿಸ್ ದತ್ : ರಾಷ್ಟ್ರೀಯ ಭಾವೈಕ್ಯತೆಗಾಗಿನ ಶ್ರೇಷ್ಠ ಚಿತ್ರ ಪ್ರಶಸ್ತಿ'ಯನ್ನು ಸ್ಥಾಪಿಸಲಾಯಿತು.

English summary
Internet giant Google is paying tribute to yesteryear actress Nargis Dutt on her 86th birthday with the help of Google Doodle. A drawing of the late actress holding her dupatta with both hands is featured in the place of the Google logo .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X