ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಹೇಳಿಕೆ ಮೂಲಕ ಕಾಂಗ್ರೆಸ್‌ಗೆ ಪಾಠ ಹೇಳಿದ ಮೋದಿ

|
Google Oneindia Kannada News

ನವದೆಹಲಿ, ಮಾರ್ಚ್ 03 : 'ಸಂಸತ್ತಿನ ಕಲಾಪಕ್ಕೆ ಅಡ್ಡಿ ಉಂಟುಮಾಡುವುದರಿಂದ ದೇಶದ ಬೊಕ್ಕಸಕ್ಕೆ ನಷ್ಟವಾಗುತ್ತದೆ' ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಹಾರ ಮಾಡಿದರು.

ಗುರುವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ಕಾರದ ಯೋಜನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸಿದರು. [ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?]

'ಸಂಸತ್ ಇರುವುದು ಚರ್ಚೆ ನಡೆಸಲು, ಅದನ್ನು ತಡೆಯುವುದು ಸರಿಯಲ್ಲ. ಚರ್ಚೆ ಮಾಡುವುದನ್ನು ತಡೆದರೆ ದೇಶಕ್ಕೆ ಮತ್ತು ವಿರೋಧ ಪಕ್ಷಗಳಿಗೂ ನಷ್ಟವಾಗುತ್ತದೆ' ಎಂದು ಹೇಳುವ ಮೂಲಕ ಸಗಮ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವ ವಿಪಕ್ಷ ಸದಸ್ಯರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. [ಸಂಸತ್ತಿನಲ್ಲಿ ಸಿದ್ದು ವಾಚ್ ಸದ್ದಾದಾಗ ಸೋನಿಯಾ, ಖರ್ಗೆ ದಿವ್ಯ ಮೌನ!]

'ಮೊದಲ ಸಲ ಆಯ್ಕೆಯಾದ ಸದಸ್ಯರಿಗೆ ಮಾತನಾಡಲು ಸಮಯ ನಿಗದಿಪಡಿಸಬೇಕು, ಇದರಿಂದಾಗಿ ಕಲಾಪಕ್ಕೆ ಹೊಸ ದಿಕ್ಸೂಚಿ ಸಿಗಲಿದೆ' ಎಂದು ಹೇಳಿದರು. ಮೋದಿ ಲೋಕಸಭೆಯಲ್ಲಿ ಹೇಳಿದ್ದೇನು?.......

'ಸಲಹೆಯನ್ನು ಪರಿಗಣಿಸೋಣ'

'ಸಲಹೆಯನ್ನು ಪರಿಗಣಿಸೋಣ'

'ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಲು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ನಾವು ಪರಿಗಣಿಸೋಣ' ಎಂದು ಹೇಳಿದ ಮೋದಿ, ರಾಷ್ಟ್ರಪತಿಗಳ ಭಾಷಣದ ವೇಲೆ ಸದನವನ್ನು ನಿರ್ವಹಣೆ ಮಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಸೂದೆಗಳ ಅಂಗೀಕಾರಕ್ಕೆ ಸಹಕರಿಸಿ

ಮಸೂದೆಗಳ ಅಂಗೀಕಾರಕ್ಕೆ ಸಹಕರಿಸಿ

'ಸಂಸತ್ತಿನಲ್ಲಿ ಮಹತ್ವದ ಮಸೂದೆಗಳ ಅಂಗೀಕರಾರಕ್ಕೆ ಸಹಕಾರ ನೀಡುವಂತೆ ವಿರೋಧ ಪಕ್ಷಗಳಿಗೆ ನಾನು ಮನವಿ ಮಾಡುತ್ತೇನೆ' ಎಂದು ಹೇಳಿದ ಮೋದಿ, 'ಈ ಮನವಿ ನರೇಂದ್ರ ಮೋದಿ ಅವರದ್ದಲ್ಲ, ಇದು ರಾಜೀವ್ ಗಾಂಧಿ ಅವರ ಮನವಿ. ಸಂಸತ್ ಕಲಾಪಕ್ಕೆ ಅಡ್ಡಿ ಉಂಟುಮಾಡುವುದರಿಂದ ರಾಷ್ಟ್ರದ ಬೊಕ್ಕಸಕ್ಕೆ ನಷ್ಟವಾಗುತ್ತದೆ' ಎಂದು ಅವರು ಹೇಳಿದ್ದರು' ಎಂದರು.

ಲೋಪದೋಷಗಳಿದ್ದರೆ ಹಂಚಿಕೊಳ್ಳಿ

ಲೋಪದೋಷಗಳಿದ್ದರೆ ಹಂಚಿಕೊಳ್ಳಿ

'ಸರ್ಕಾರದ ಕಾರ್ಯಕ್ರಮಗಳಲ್ಲಿ ಲೋಪದೋಷಗಳಿದ್ದರೆ ಹಂಚಿಕೊಳ್ಳಿ. ಸಂಸತ್ ಇರುವುದು ಚರ್ಚೆ ನಡೆಸಲು. ಅದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ. ಕಲಾಪಕ್ಕೆ ಅಡ್ಡಿ ಪಡಿಸಿದರೆ ದೇಶ ಮತ್ತು ವಿರೋಧ ಪಕ್ಷಗಳಿಗೂ ನಷ್ಟ ಉಂಟಾಗುತ್ತದೆ' ಎಂದರು.

ಮಹಿಳಾ ಪ್ರತಿನಿಧಿಗಳು ಮಾತನಾಡಬೇಕು

ಅಂತರಾಷ್ಟ್ರೀಯ ಮಹಿಳಾ ದಿನವಾ ಮಾರ್ಚ್ 8ರಂದು ಸಂಸತ್ತಿನಲ್ಲಿ ಮಹಿಳಾ ಪ್ರತಿನಿಧಿಗಳು ಮಾತನಾಡಬೇಕು ಎಂದು ಸಲಹೆ ನೀಡಿದರು.

'ದೇಶಕ್ಕಾಗಿ ಈ ಯೋಜನೆ'

'ದೇಶಕ್ಕಾಗಿ ಈ ಯೋಜನೆ'

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಟೀಕಿಸುವ ಪ್ರತಿಪಕ್ಷಗಳಿಗೆ ಉತ್ತರ ನೀಡಿದ ಮೋದಿ, 'ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ತಂದಿದ್ದು ದೇಶಕ್ಕಾಗಿ' ಎಂದು ಹೇಳಿದರು.

'ಹೊಸಬರಿಗೆ ಅವಕಾಶ ನೀಡೋಣ'

'ಹೊಸ ಸಂಸದರಿಗೆ ಮಾತನಾಡಲು ಅವಕಾಶ ಕೊಡೋಣ' ಎಂದು ಮೋದಿ ಕರೆ ನೀಡಿದರು.

'ಮನರಂಜನೆಯನ್ನು ಮಾಡುತ್ತಾರೆ'

'ಮನರಂಜನೆಯನ್ನು ಮಾಡುತ್ತಾರೆ'

'ನಮ್ಮ ವಿಪಕ್ಷಗಳ ಸಹೋದರರು ಚಿಕ್ಕ-ಚಿಕ್ಕ ಪಕ್ಷದವರು. ಕೆಲವು ಜನರು ಮನರಂಜನೆಯನ್ನು ನೀಡುತ್ತಾರೆ' ಎಂದು ಹೇಳಿದ ಮೋದಿ, 'ಸುಗಮವಾಗಿ ಕಲಾಪ ನಡೆಯಲು ಎಲ್ಲಾ ಪಕ್ಷಗಳ ಸಹಕಾರ ಬೇಕು' ಎಂದರು.

'ನಮ್ಮ ದೇಶ ಶಕ್ತಿಯುತವಾದದ್ದು'

ನಮ್ಮ ದೇಶ ಶಕ್ತಿ ಶಾಲಿಯಾಗಿದ್ದು ಎಂದು ಹೇಳಿ ಎಂದು ಮೋದಿ ಇಂದಿರಾ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿದರು.

'ಈಗ ನಿರ್ಮಾಣ ಮಾಡುವ ಅಗತ್ಯವಿರಲಿಲ್ಲ'

'ಈಗ ನಿರ್ಮಾಣ ಮಾಡುವ ಅಗತ್ಯವಿರಲಿಲ್ಲ'

'60 ವರ್ಷಗಳ ಆಡಳಿತದ ಅವಧಿಯಲ್ಲಿ ನೀವು ಸರಿಯಾಗಿ ಕೆಲಸ ಮಾಡಿದ್ದರೆ ಇಂದು ನಾವು ಶೌಚಾಲಯಗಳನ್ನು ನಿರ್ಮಾಣ ಮಾಡುವ ಅಗತ್ಯವಿರಲಿಲ್ಲ' ಎಂದು ಮೋದಿ ಟೀಕಿಸಿದರು.

'ಇಂದಿಗೂ ಬಡವರು ಸಮಸ್ಯೆ ಎದುರಿಸುತ್ತಿದ್ದಾರೆ'

'ದೇಶದ ಜನರು ಇಂದಿಗೂ ಸಂಕಷ್ಟ ಎದುರಿಸುತ್ತಿದ್ದಾರೆ'

English summary
Prime Minister Narendra Modi addressed the Parliament on March 3, 2016 to give the vote of thanks to the President's speech, Here are the highlights of Modi speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X