ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೀಡೆ, ಪ್ರವಾಸೋದ್ಯಮ ಬಗ್ಗೆ ಮೋದಿ 'ಮನದ ಮಾತು'

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 27: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ವಿಶ್ವ ಟಿ20 ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಲಿ ಎಂದು ಟೀಂ ಇಂಡಿಯಾಕ್ಕೆ ಶುಭ ಹಾರೈಸಿದ್ದಾರೆ. 18ನೇ ಆಕಾಶವಾಣಿ ಭಾಷಣ ಸರಣಿಯಲ್ಲಿ ಕ್ರೀಡೆ, ಕೃಷಿ, ಪ್ರವಾಸೋದ್ಯಮಕ್ಕೆ ಮೋದಿ ಅವರು ಹೆಚ್ಚಿನ ಒತ್ತು ನೀಡಿದ್ದರು.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಗಿತ್ತು. ಆದರೆ, ಚುನಾವಣಾ ಆಯೋಗದ ಅನುಮತಿ ಪಡೆದು ಮೋದಿ ಅವರು ತಮ್ಮ ಮಾತಿನ ಸರಣಿ ಮುಂದುವರೆಸಿದರು.[ಮ್ಯೂಸಿಯಂಗೆ 'ನೆಹರೂ ಕೋಟ್' ತೊಟ್ಟ ಮೋದಿ ಪ್ರತಿಮೆ]

Highlights of PM Narendra Modi's Mann Ki Baat address

ಫುಟ್​ಬಾಲ್ ಕ್ರೀಡೆಯನ್ನುದೇಶದ ಮನೆ ಮನೆಗೂ ಒಯ್ಯಬೇಕಾದ ಅಗತ್ಯ ಇದೆ. ಫೀಫಾ ಅಂಡರ್-17 ವಿಶ್ವಕಪ್ ನಲ್ಲಿ ಆಡಲು ಭಾರತಕೆ ಉತ್ತಮ ಅವಕಾಶ ಸಿಕ್ಕಿದೆ. [ಮೋದಿ ದೇಶಕ್ಕೆ ನೀಡಿದ ಎರಡು ಅಪ್ರತಿಮ ಉಡುಗೊರೆಗಳು!]

ಇಂಗ್ಲೀಷ್ ಪ್ರಿಮಿಯರ್ ಲೀಗ್ ನಂತೆ ನಮ್ಮಲ್ಲೂ ಫುಟ್ಬಾಲ್ ಲೀಗ್ ಬಗ್ಗೆ ಯುವಕರಲ್ಲಿ ಆಸಕ್ತಿ ಹುಟ್ಟುಕೊಳ್ಳಬೇಕು. ಈ ಟೂರ್ನಮೆಂಟ್ ಯಶಸ್ವಿಯಾಗಲು ಎಲ್ಲರೂ ಕ್ರೀಡೆಯ ರಾಯಭಾರಿಗಳಾಗಬೇಕು. ಫುಟ್​ಬಾಲ್​ನ್ನು ಪ್ರತಿ ಗ್ರಾಮಕ್ಕೂ ಒಯ್ಯಲು ಫಿಫಾ ಯು-17 ಮಹಾನ್ ಅವಕಾಶ. ಈ ಬಗ್ಗೆ ಹೆಚ್ಚಿನ ಸಲಹೆಗಳನ್ನು ನರೇಂದ್ರ ಮೋದಿ ಅಪ್ಲಿಕೇಷನ್ ಗೆ ಕಳಿಸಿ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಉತ್ತಮ ಜಯ ಸಾಧಿಸಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದೇನೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಶುಭ ಹಾರೈಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಮಾರ್ಚ್ 24ರಂದು ವಿಶ್ವ ಟಿಬಿ ದಿನ ಆಚರಿಸಲಾಯಿತು. ಟಿಬಿ ವಿರುದ್ಧ ಹೋರಾಡಲು ನೀವು ಸಮರ್ಪಕವಾದ ಚಿಕಿತ್ಸೆಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ನಮಗೆ ಈ ರೋಗದ ಬಗ್ಗೆ ಹೆದರಿಕೆ ಇಲ್ಲ, ಏಕೆಂದರೆ ಅದನ್ನು ಗುಣಪಡಿಸಬಹುದು ಎಂಬುದು ನಮಗೆ ಗೊತ್ತು. ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ಮಧುಮೇಹ ನಿಯಂತ್ರಣಕ್ಕೆ ಈ ವರ್ಷ ಒತ್ತು ನೀಡಲಾಗಿದೆ. ಮಧುಮೇಹ ಪ್ರಕರಣಗಳು ಹೆಚ್ಚಾಗಲು ಅತಿದೊಡ್ಡ ಕಾರಣ ನಮ್ಮ ಜೀವನ ಶೈಲಿ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

English summary
In the 18th edition of his monthly radio programme, Mann Ki Baat, Prime Minister Narendra Modi on Sunday (Mar 27) greeted Team India ahead of crucial ICC World T20 match against Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X