ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮೇಶ್ವರಂನಲ್ಲಿ ಅಬ್ದುಲ್ ಕಲಾಂ ಸ್ಮಾರಕ ಲೋಕಾರ್ಪಣೆ

By Mahesh
|
Google Oneindia Kannada News

ರಾಮೇಶ್ವರಂ, ಜುಲೈ 27: ತಮಿಳುನಾಡಿನ ರಾಮೇಶ್ವರಂನ ಪೈ ಕರುಂಬು ಎಂಬಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ಲೋಕಾರ್ಪಣೆ ಮಾಡಿದ್ದಾರೆ.

ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ

ಕ್ಷಿಪಣಿ ಜನಕ ಕಲಾಂ ಅವರ ಎರಡನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಕಲಾಂ ಅವರ ಪ್ರತಿಮೆಯನ್ನು ಅನಾವರಣ ಮಾಡಿದ ಮೋದಿ, ನಮನ ಸಲ್ಲಿಸಿದರು.

ಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳುಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳು

ಡಿ ಆರ್ ಡಿ ಓ ನಿರ್ಮಾಣ ಮಾಡಿರುವ ಈ ಸ್ಮಾರಕ ಹಲವು ವಿಶೇಷತೆಗಳನ್ನು ಹೊಂದಿದೆ. ಸ್ಮಾರಕ ಲೋಕಾರ್ಪಣೆ ನಂತರ
ಮೋದಿ ಅವರು ಕಲಾಂ ಅವರ ಕುಟುಂಬ ಸದಸ್ಯರನ್ನು ಕೂಡ ಭೇಟಿ ಮಾಡಿ, ಮಾತುಕತೆ ನಡೆಸಿದರು.

ಭಾರತ ತನ್ನ 'ರತ್ನ' ಕಳೆದುಕೊಂಡಿದೆ : ಕಲಾಂ ಕುರಿತು ಮೋದಿ ಲೇಖನಭಾರತ ತನ್ನ 'ರತ್ನ' ಕಳೆದುಕೊಂಡಿದೆ : ಕಲಾಂ ಕುರಿತು ಮೋದಿ ಲೇಖನ

ತಮಿಳುನಾಡಿನ ರಾಜ್ಯಪಾಲ ಸಿ ವಿದ್ಯಾಸಾಗರ್ ರಾವ್, ಮುಖ್ಯಮಂತ್ರಿ ಕೆ ಪಳನಸ್ವಾಮಿ, ಕೇಂದ್ರ ಸಚಿವರಾದ ಪೊನ್ ರಾಧಕೃಷ್ಣನ್, ಎನ್ಡಿಎಯ ಉಪ ರಾಷ್ಟ್ರಪತಿ ಅಭ್ಯರ್ಥಿ ಎಂ ವೆಂಕಯ್ಯ ನಾಯ್ಡು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಲಾಂ ಅವರ ಪ್ರತಿಮೆಯನ್ನು ಅನಾವರಣ

ಕಲಾಂ ಅವರ ಪ್ರತಿಮೆಯನ್ನು ಅನಾವರಣ

15 ಕೋಟಿ ವೆಚ್ಚದಲ್ಲಿ 4 ಟನ್‌ ಭಾರ ಮತ್ತು 45 ಅಡಿ ಎತ್ತರದ ಅಗ್ನಿ-2 ಕ್ಷಿಪಣಿಯ ಮಾದರಿ ಮತ್ತು ಕಲಾಂ ಅವರ ಏಳು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ನಿರ್ಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.

ಪ್ರತಿಮೆ ಅನಾವರಣ ವಿವಾದಕ್ಕೆ ಕಾರಣ

ಪ್ರತಿಮೆ ಅನಾವರಣ ವಿವಾದಕ್ಕೆ ಕಾರಣ

ಇಸ್ಲಾಂ ಧರ್ಮದಲ್ಲಿ ಮೂರ್ತಿಪೂಜೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಆದ್ದರಿಂದ ಕಲಾಂ ಅವರ ಆದರ್ಶಗಳನ್ನು ಅನುಸರಿಸಿ, ಗೌರವಿಸಿ, ಪ್ರತಿಮೆ ಏಕೆ ನಿರ್ಮಿಸಬೇಕು ಎಂದು ಕೆಲ ಇಸ್ಲಾಮ್ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ, ಕಲಾಂ ಅವರ ಸೋದರ ಮೊಹಮ್ಮದ್ ಅವರ ಅನುಮತಿ ಬಳಿಕ ಪ್ರತಿಮೆ ನಿರ್ಮಾಣ ಮಾಡಲಾಯಿತು.

ಕಲಾಂ ಸಂದೇಶ ವಾಹಿನಿ

ಕಲಾಂ ಸಂದೇಶ ವಾಹಿನಿ

ಭಾರತರತ್ನ, ವಿಜ್ಞಾನಿ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಅಬ್ದುಲ್ ಕಲಾಂ ಅವರ ದ್ವಿತೀಯ ಪುಣ್ಯ ಸ್ಮರಣೆ ದಿನದಂದು 'ಕಲಾಂ ಸಂದೇಶ ವಾಹಿನಿ' ಎಂಬ ಬಸ್ಸಿಗೆ ಮೋದಿ ಅವರು ಚಾಲನೆ ನೀಡಿದರು. ದೇಶದ ಎಲ್ಲಾ ರಾಜ್ಯಗಳಲ್ಲೂ ಸಂಚರಿಸಿ ಅಕ್ಟೋಬರ್ 15ರಂದು ದೆಹಲಿಯ ರಾಷ್ಟ್ರಪತಿ ಭವನಕ್ಕೆ ಬಂದು ತಲುಪಲಿದೆ. ಇದೊಂದು ಡಿಜಿಟಲ್ ಸಂಚಾರಿ ವಸ್ತುಸಂಗ್ರಹಾಲಯವಾಗಿದ್ದು, ಕಲಾಂ ಅವರ ಸಾಧನೆ, ಅಗ್ನಿ ಕ್ಷಿಪಣಿ, ಪೋಖ್ರಾನ್-2 ಪರಮಾಣು ಪರೀಕ್ಷೆ ಕುರಿತ ಅಪರೂಪದ ಛಾಯಾಚಿತ್ರಗಳು ಸಂಚಾರಿ ವಸ್ತುಸಂಗ್ರಹಾಲಯ ವಾಹನದಲ್ಲಿ ಪ್ರದರ್ಶನಗೊಳ್ಳಲಿವೆ.

ವಿಷನ್‌ 2020 ಯೋಜನೆ

ವಿಷನ್‌ 2020 ಯೋಜನೆ

2020ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿ ಮಾಡಬೇಕು ಎಂಬುದು ಕಲಾಂ ಅವರ ಕನಸಾಗಿತ್ತು. 500 ತಜ್ಞರ ಸಮಿತಿಯ ಮುಖ್ಯಸ್ಥರಾಗಿ ಅವರು ರೂಪಿಸಿದ ವಿಷನ್‌ 2020 ಯೋಜನೆ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅಣುಶಕ್ತಿ ಆಯೋಗದ ಸಹಭಾಗಿತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯ ನೇತೃತ್ವ, ಹಗುರ ಯುದ್ಧ ವಿಮಾನಗಳ ನಿರ್ಮಾಣ ಯೋಜನೆ ಎಲ್ಲವೂ ಕಲಾಂರ ಸ್ಪೂರ್ತಿಯ ದ್ಯೋತಕವಾಗಿದೆ. ಜುಲೈ 27, 2015ರಂದು ಮೇಘಾಲಯದ ಶಿಲ್ಲಾಂಗ್ ನಲ್ಲಿ ಐಐಎಂನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಕುಸಿದು ಬಿದ್ದ ಕಲಾಂ ಅವರು ಮತ್ತೆ ಮೇಲಕ್ಕೇ ಏಳಲಿಲ್ಲ.

English summary
Former President A PJ Abdul Kalam's memorial inaugurated by Prime Minister Narendra Modi on Thursday at Rameswaram, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X