ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಸಾವಿರ ಕೋಟಿ ರು. ಮೌಲ್ಯದ ನಮಾಮಿ ಗಂಗಾ ಯೋಜನೆಗೆ ಚಾಲನೆ

By Mahesh
|
Google Oneindia Kannada News

ನವದೆಹಲಿ, ಜುಲೈ 07: ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಗಳಲ್ಲಿ ಒಂದೆನಿಸಿರುವ 'ಕ್ಲೀನ್ ಗಂಗಾ'ಗೆ ಗುರುವಾರ ಚಾಲನೆ ನೀಡಲಾಯಿತು.

ಗಂಗಾ ಶುದ್ಧೀಕರಣಕ್ಕಾಗಿ 20 ಸಾವಿರ ಕೋಟಿ ರು. ಮೌಲ್ಯದ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಜಲ ಸಂಪನ್ಮೂಲ, ಗಂಗಾ ಶುದ್ಧೀಕರಣ ಖಾತೆ ಸಚಿವೆ ಉಮಾಭಾರತಿ ಅವರು ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಸದ್ಯಕ್ಕೆ ಈ ಯೋಜನೆಯಲ್ಲಿ 400 ಕೋಟಿ ರು ವಿನಿಯೋಗಿಸಲಾಗಿದೆ.

Namami Gange: 231 projects for ‘Clean Ganga’ launched

ಸುಮಾರು 100 ಪ್ರದೇಶಗಳಲ್ಲಿ ನಮಾಮಿ ಗಂಗಾ ಯೋಜನೆ ಅಡಿಯಲ್ಲಿ 231 ಯೋಜನೆಗಳು ಜಾರಿಗೊಂಡಿವೆ. ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ ಒಟ್ಟಾರೆ 300 ಯೋಜನೆಗಳು 'ನಮಾಮಿ ಗಂಗೆ'ಯಲ್ಲಿ ಸೇರಿವೆ.

ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ, ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಗಳನ್ನು ಆರಂಭಿಸಲಾಗುತ್ತದೆ.

ಕೇಂದ್ರದ ಸಚಿವರಾದ ನಿತಿನ್‌ ಗಡ್ಕರಿ, ಉಮಾಭಾರತಿ, ನರೇಂದ್ರ ತೋಮರ್‌, ಮಹೇಶ್‌ ಶರ್ಮಾ ಹರಿದ್ವಾರದಲ್ಲಿ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ನೀಡಿದ್ದಾರೆ.

English summary
Namami Gange: 231 projects under the 'Clean Ganga' project launched by Uma Bharti, the Union Minister of Water Resources, River Development and Ganga Rejuvenation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X