ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಲ್ಲಿ ಮೊಳಗಲಿದೆ ಮೋದಿಯ ವಿಜ್ಞಾನ-ತಂತ್ರಜ್ಞಾನ ಮಂತ್ರ

By ಡಾ. ಅನಂತ ಕೃಷ್ಣನ್
|
Google Oneindia Kannada News

ಮೈಸೂರು, ಡಿಸೆಂಬರ್, 29: ಸಾಂಸ್ಕೃತಿಕ ನಗರಿ ಮೈಸೂರು ವಿಜ್ಞಾನ ಹಬ್ಬಕ್ಕೆ ಮದುವೆ ಮನೆಯಂತೆ ಸಿಂಗಾರಗೊಳ್ಳುತ್ತಿದೆ. 'ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ 'ನ 103 ನೇ ಸಮಾವೇಶ ಮೈಸೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ನಡೆಯಲಿದೆ. ಜನವರಿ 3 ರಿಂದ 7ರವೆಗೆ ಸಮಾವೇಶ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಪ್ರಪಂಚದ ವಿವಿಧೆಡೆಯಿಂದ ಆಗಮಿಸಲಿರುವ 15000 ಡೆಲಿಗೇಟ್ಸ್ ಗಳನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾನ್ಸರ್, ಅಸ್ತಮಾ ಸೇರಿದಂತೆ ಮಾರಕ ರೋಗಗಳ ಬಗ್ಗೆ ಸಮಗ್ರ ಚಿಂಥನ ಮಂಥನ ನಡೆಯಲಿದೆ ಎಂದು ಮೈಸೂರು ವಿವಿ ವೈಸ್ ಛಾನ್ಸಲರ್ ಕೆ ಎಸ್ ರಂಗಪ್ಪ ತಿಳಿಸಿದರು.[ಸಮಾವೇಶಕ್ಕೆ ಬರುವ ಅತಿಥಿಗಳೆಷ್ಟು?]

mysuru

103ನೇ ವಿಜ್ಞಾನ ಸಮಾವೇಶಕ್ಕೆ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಹ ಸಹಕಾರ ನೀಡಲಿದೆ. ಪ್ರಧಾನಿ ಮೋದಿ ವೈಜ್ಞಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಅಂದು ಜನತೆಯ ಮುಂದೆ ಇಡಲಿದ್ದಾರೆ ಎಂದು ರಂಗಪ್ಪ ತಿಳಿಸಿದರು. 500ಕ್ಕೂ ಹೆಚ್ಚು ವಿಜ್ಞಾನಿಗಳು ಚರ್ಚೆ ಮಾಡಲಿದ್ದಾರೆ. ಇಂಧನ ಇಲಾಖೆ ಸಹ ವಿವಿಧ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದೆ.

mysuru

4000 ವಿದ್ಯಾರ್ಥಿಗಳು
ನೋಂದಣಿ ಮಾಡಿಕೊಂಡಿರುವ 15000 ಡೆಲಿಗೇಟ್ಸ್ ಗಳಲ್ಲಿ 4000 ವಿದ್ಯಾರ್ಥಿಗಳೇ ಇದ್ದಾರೆ. ಎರಡು ಸಾವಿರ ಜನ ಸ್ವಯಂ ಸೇವಕರು ನಿರಂತರವಾಗಿ ಕೆಲಸ ಮಾಡುತ್ತ ಇರುತ್ತಾರೆ. ಸಭಾಭವನವೊಂದನ್ನು ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ರಂಗಪ್ಪ ತಿಳಿಸಿದರು.[ಮೈಸೂರಲ್ಲಿ ದೇಶದ ಅತಿದೊಡ್ಡ ವಿಜ್ನಾನ ಹಬ್ಬ]

mysuru

ಕಲಾಂ ಅವರ ಕುಟುಂಬದವರು ಹೊರ ತಂದಿರುವ 'ಬಿಲಿಯನ್ ಬೀಟ್ಸ್' ಪುಸ್ತಕವನ್ನು ಇದೆ ವೇಳೆ ಲೋಕಾರ್ಪಣೆ ಮಾಡಲಾಗುವುದು. ನಾವು ರಾಜಕಾರಣದ ಅಂಶಗಳನ್ನು ಸಮಾವೇಶದಿಂದ ದೂರ ಇಟ್ಟಿದ್ದೇವೆ ಎಂದು ರಂಗಪ್ಪ ತಿಳಿಸಿದರು.

ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಅವಕಾಶ ನೀಡುತ್ತಿರುವುದು ಸಮಾವೇಶದ ಹೈಲೈಟ್ಸ್. ಒಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಜನವರಿ ಮೊದಲ ವಾರ ವೈಜ್ಞಾನಿಕ ನಗರಿಯಾಗುವುದರಲ್ಲಿ ಅನುಮಾನವಿಲ್ಲ.

English summary
The 103rd Indian Science Congress (103ISC) is expected to set new benchmarks for Science and Technology (S&T) missions in the country, going by the response it has evoked from participants across the world. Addressing the media in the city on Tuesday, Prof K S Rangappa, Vice Chancellor, University of Mysore (UoM) said that the organisers are geared up to receive over 15,000 delegates across the world. The event is scheduled to be inaugurated by Prime Minister Narendra Modi on January 3. While the talks and debates would hover around S&T for common man, the event will also throw light on issues such as cancer, asthma and diabetes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X